Monday, August 25, 2025
Homeರಾಜ್ಯರಾಜ್ಯದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ ಜಿಎಸ್‌‍ಟಿ ನೋಂದಣಿ ಪ್ರಮಾಣ

ರಾಜ್ಯದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ ಜಿಎಸ್‌‍ಟಿ ನೋಂದಣಿ ಪ್ರಮಾಣ

GST registration rate is continuously increasing in the state

ಬೆಂಗಳೂರು,ಆ.25- ರಾಜ್ಯದಲ್ಲಿ ಜಿಎಸ್‌‍ಟಿ ನೋಂದಣಿ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ. 2024ರ ನವೆಂಬರ್‌ನಿಂದಲೂ ಪ್ರತಿ ತಿಂಗಳು ಜಿಎಸ್‌‍ಟಿ ನೊಂದಣಿ ಮಾಡಿಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ.

ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ 2024-25ನೇ ಆರ್ಥಿಕ ಸಾಲಿನಲ್ಲಿ 96,590ರಷ್ಟು ಜಿಎಸ್‌‍ಟಿ ನೋಂದಣಿ ಮಾಡಿಕೊಂಡಿದ್ದರು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 34,811ರಷ್ಟು ಜಿಎಸ್‌‍ಟಿ ನೋಂದಣಿಯಾಗಿದೆ.

ಪ್ರಸ್ತುತ ಸಾಮಾನ್ಯ ತೆರಿಗೆ ಪದ್ದತಿಯಡಿ ಶೇ.91ರಷ್ಟು ಜಿಎಸ್‌‍ಟಿ ಪಾವತಿಯಾಗುತ್ತಿದೆ. ಅಂದರೆ 9,41,164 ಮಂದಿ ತೆರಿಗೆ ಸಂದಾಯ ಮಾಡಿದ್ದಾರೆ. ರಾಜಿ ತೆರಿಗೆ ಪದ್ದತಿಯಡಿ ಶೇ.9ರಷ್ಟು ತೆರಿಗೆ ಸಂದಾಯವಾಗಿದ್ದು, 98,663ರಷ್ಟು ತೆರಿಗೆ ಪಾವತಿಯಾಗಿದೆ. 2024ರ ಏಪ್ರಿಲ್‌ನಲ್ಲಿ 2204ರಷ್ಟಿದ್ದ ಜಿಎಸ್‌‍ಟಿ ನೋಂದಣಿ ಕಳೆದ ಏಪ್ರಿಲ್‌ ತಿಂಗಳಿನಲ್ಲಿ 13,386ಕ್ಕೆ ಏರಿಕೆಯಾಗಿದೆ. ಪ್ರತಿ ತಿಂಗಳು ಜಿಎಸ್‌‍ಟಿ ನೋಂದಣಿಯಲ್ಲಿ ಏರಿಕೆಯಾಗುತ್ತಾ ಬಂದಿರುವುದು ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿಯಿಂದ ಕಂಡುಬಂದಿದೆ.

2024ರ ಅಕ್ಟೋಬರ್‌ನಲ್ಲಿ 7,569ರಷ್ಟಿದ್ದ ಜಿಎಸ್‌‍ಟಿ ನೋಂದಣಿ ಸಂಖ್ಯೆ ನವೆಂಬರ್‌ನಲ್ಲಿ 10,707ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ 10420, 2025ರ ಜನವರಿಯಲ್ಲಿ 11571, ಫೆಬ್ರವರಿಯಲ್ಲಿ 10664, ಮಾರ್ಚ್‌ನಲ್ಲಿ 11466, ಏಪ್ರಿಲ್‌ನಲ್ಲಿ 10785, ಮೇ ತಿಂಗಳಿನಲ್ಲಿ 11105, ಜೂನ್‌ನಲ್ಲಿ 10921 ಹಾಗೂ ಜುಲೈನಲ್ಲಿ 13386ರಷ್ಟು ಜಿಎಸ್‌‍ಟಿ ನೋಂದಣಿಯಾಗಿದೆ.

RELATED ARTICLES

Latest News