Home ಇದೀಗ ಬಂದ ಸುದ್ದಿ ಗುಜರಾತ್‌ನಲ್ಲಿ ಚಂಡಿಪುರ ವೈರಸ್‌‍ಗೆ ಬಾಲಕಿ ಬಲಿ

ಗುಜರಾತ್‌ನಲ್ಲಿ ಚಂಡಿಪುರ ವೈರಸ್‌‍ಗೆ ಬಾಲಕಿ ಬಲಿ

0
ಗುಜರಾತ್‌ನಲ್ಲಿ ಚಂಡಿಪುರ ವೈರಸ್‌‍ಗೆ ಬಾಲಕಿ ಬಲಿ

ನವದೆಹಲಿ,ಜು.18- ಗುಜರಾತ್‌ನಲ್ಲಿ ಚಂಡೀಪುರ ವೈರಸ್‌‍ನಿಂದ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಇತರ 14 ಮಂದಿಯೂ ಇದೇ ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸಬರ್ಕಾಂತ ಜಿಲ್ಲೆಯ ಹಿಮತ್‌ನಗರದ ಸಿವಿಲ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಅರಾವಳಿ ಜಿಲ್ಲೆಯ ಮೋಟಾ ಕಾಂತರಿಯಾ ಗ್ರಾಮದ ನಾಲ್ಕು ವರ್ಷದ ಬಾಲಕಿಯ ಮಾದರಿಯು ಚಂಡಿಪುರ ವೈರಸ್‌‍ಗೆ ಧನಾತಕ ಪರೀಕ್ಷೆ ನಡೆಸಿದೆ. ಇದು ಚಂಡಿಪುರ ವೈರಸ್‌‍ ಸೋಂಕಿನಿಂದ ಸಂಭವಿಸಿದ ಮೊದಲ ಸಾವು ಇರಬಹುದು ಎಂದು ಸಬರಕಾಂತ ಮುಖ್ಯ ಜಿಲ್ಲಾ ಆರೋಗ್ಯ ಅಧಿಕಾರಿ (ಸಿಡಿಎಚ್‌ಒ) ರಾಜ್‌ ಸುತಾರಿಯಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ರಾಜ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜಸ್ಥಾನದ ಉದಯಪುರದ ರೋಗಿಯೂ ಶಂಕಿತ ಚಂಡಿಪುರ ವೈರಸ್‌‍ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಸಬರಕಾಂತ (ಎರಡು), ಅರಾವಳಿ (ಎರಡು), ಮಹಿಸಾಗರ್‌ (ಒಂದು), ಮೆಹ್ಸಾನಾ (ಒಂದು), ರಾಜ್‌ಕೋಟ್‌ (ಎರಡು), ಸುರೇಂದ್ರನಗರ (ಒಂದು), ಅಹಮದಾಬಾದ್‌ (ಒಂದು), ಮೊರ್ಬಿ (ಎರಡು) ಮತ್ತು ಜಿಎಂಸಿ (ಒಂದು) ಶಂಕಿತ ಸಾವುಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಖೇಡಾ, ಗಾಂಧಿನಗರ, ಪಂಚಮಹಾಲ್ಯಾಂಡ್‌ ಜಾಮ್‌ನಗರ ಜಿಲ್ಲೆಗಳಿಂದಲೂ ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನದ ಉದಯಪುರದ ಮತ್ತೊಬ್ಬ ರೋಗಿಯು ಮತ್ತು ಮಧ್ಯಪ್ರದೇಶದ ಧಾರ್‌ನ ಒಬ್ಬ ರೋಗಿಯೂ ಸಹ ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಚಂಡಿಪುರ ವೈರಸ್‌‍..?
ಚಂಡಿಪುರ ವೈರಸ್‌‍ ಒಂದು ವಿಧದ ಆರ್ಬೋವೈರಸ್‌‍ ಆಗಿದ್ದು ಅದು ರಾಬ್ಡೋವಿರಿಡೆ ಕುಟುಂಬದ ವೆಸಿಕ್ಯುಲರ್‌ ವೈರಸ್‌‍ ಆಗಿದೆ.ಇದು ಪ್ರಾಥಮಿಕವಾಗಿ ಫ್ಲೆಬೋಟೊಮೈನ್‌ ಸ್ಯಾಂಡ್‌ಫ್ಲೈಗಳ ಮೂಲಕ ಮತ್ತು ಕೆಲವೊಮೆ ಉಣ್ಣಿ ಮತ್ತು ಸೊಳ್ಳೆಗಳ ಮೂಲಕ ಹರಡುತ್ತದೆ. ಮಕ್ಕಳು ಈ ವೈರಸ್‌‍ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ವರದಿಯಾಗಿದೆ. ಭಾರತದಲ್ಲಿ ಇದನ್ನು ಮೊದಲು 1965 ರಲ್ಲಿ ಮಹಾರಾಷ್ಟ್ರದ ಚಂಡಿಪುರ ಗ್ರಾಮದಲ್ಲಿ ಗುರುತಿಸಲಾಯಿತು.

ಚಂಡಿಪುರ ವೈರಸ್‌‍ ಲಕ್ಷಣಗಳು:
ಚಂಡಿಪುರ ವೈರಸ್‌‍ನ ಸೋಂಕು ಸಾಮಾನ್ಯವಾಗಿ ಹಠಾತ್‌ ಜ್ವರದಿಂದ ಪ್ರಾರಂಭವಾಗುತ್ತದೆ. ತೀವ್ರ ತಲೆನೋವು, ವಾಂತಿ, ಸೆಳೆತ ಮತ್ತು ಬದಲಾದ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತದೆ ಎನ್ನಲಾಗಿದೆ.