ಲಕ್ನೋ,ಡಿ.26- ಮುಂಬರುವ ಮಹಾಕುಂಭದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸುವುದಾಗಿ ಸಿಖ್ ಪ್ರತ್ಯೇಕತಾವಾದಿ ಗುರು ಪರ್ವಂತ್ ಸಿಂಗ್ ಪನ್ನುನ್ ಎಚ್ಚರಿಸಿದ್ದಾನೆ. ಆತ ಎಚ್ಚರಿಕೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳ ಉತ್ಸವದ ಮೊದಲು ಯಾತ್ರಾರ್ಥಿಗಳು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮ್ ತೀರದಲ್ಲಿ ಸ್ನಾನ ಮಾಡುತ್ತಾರೆ. ಮಾಘ ಮೇಳದ ಪ್ರಮುಖ ಸ್ನಾನದ ದಿನಾಂಕಗಳು ಜನವರಿ 14 (ಮಕರ ಸಂಕ್ರಾಂತಿ), ಜನವರಿ 29 (ಮೌನಿ ಅಮಾವಾಸ್ಯೆ), ಮತ್ತು ಫೆಬ್ರವರಿ 3 (ಬಸಂತ್ ಪಂಚಮಿ) ಆಗಿರುತ್ತದೆ.
ಆ ದಿನಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವುದಾಗಿ ಪನ್ನುನ್ ಎಚ್ಚರಿಕೆ ನೀಡಿದ್ದಾನೆ. ಪಿಲಿಭಿತ್‌ನಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಖಲಿಸ್ತಾನಿ ಜಿಂದಾಬಾದ್ ಫೋರ್ಸ್ ಮೂವರು ಉಗ್ರರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಆತನಿಂದ ಇಂತಹ ಬೆದರಿಕೆ ಬಂದಿರುವುದು ವಿಶೇಷ.
ಗುರುಪರ್ವಂತ್ ಸಿಂಗ್ ಪನ್ನುನ್ ಅವರು ನಿಷೇಧಿತ ಸಂಘಟನೆಯಾದ ಸಿಖ್‌್ಸ ಫಾರ್ ಜಸ್ಟಿಸ್‌ನ ಮುಖ್ಯಸ್ಥರಾಗಿದ್ದಾರೆ ಮತ್ತು ಭಾರತ ಸರ್ಕಾರದಿಂದ ಭಯೋತ್ಪಾದಕ ಎಂದು ಹೆಸರಿಸಲಾಗಿದೆ. ಪನ್ನುನ್ ಭಾರತ ಮತ್ತು ಭಾರತೀಯ ಸಂಸ್ಥೆಗಳಿಗೆ ಈ ಹಿಂದೆ ಹಲವು ಬಾರಿ ಬೆದರಿಕೆಗಳನ್ನು ಹಾಕಿದ್ದಾರೆ.
ಪನ್ನುನ್ ಎಂಬ ವ್ಯಕ್ತಿಯು ನಮ ಮಹಾಕುಂಭಕ್ಕೆ ಪ್ರವೇಶಿಸಲು ಧೈರ್ಯ ಮಾಡಿದರೆ, ಅವನನ್ನು ಹೊಡೆದು ಓಡಿಸಲಾಗುವುದು. ಅಂತಹ ನೂರಾರು ಹುಚ್ಚರನ್ನು ನಾವು ನೋಡಿದ್ದೇವೆ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.