ನವದೆಹಲಿ, ಫೆ.19-ಭಾರತದ ಕೇಂದ್ರ ಚುನಾವಣಾ ಆಯೋಗದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಇಂದು ಜ್ಞಾನೇಶ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ನವದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಆಗಮಿಸಿದ ಅವರು, ಅಧಿಕಾರ ವಹಿಸಿಕೊಂಡಿದ್ದು, ನಂತರ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಈ ವೇಳೆ ನಿವೃತ್ತಿ ಹೊಂದಿದ ಹಿಂದಿನ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ಕುಮಾರ್ ಸೇರಿದಂತೆ ಹಲವರು ಜ್ಞಾನೇಶ್‌ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣಾ ಆಯುಕ್ತರಾದ ಡಾ.ಸುಖಬೀರ್‌ಸಿಂಗ್ ಸಿಂಧು ಸೇರಿದಂತೆ ಹಲವು ಅಧಿಕಾರಿಗಳು ಜ್ಞಾನೇಶ್‌ಕುಮಾರ್ ಅವರಿಗೆ ಹೂ ಗುಚ್ಛನೀಡಿ ಅಭಿನಂದಿಸಿದ್ದಾರೆ.
ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರ ನೇಮಕದ ಬಗ್ಗೆ ಕಾಂಗ್ರೆಸ್ ಆಕ್ಷೇಪವೆತ್ತಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಈ ಕುರಿತು ಇಂದು ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ಕೂಡ ನಡೆಯುತ್ತಿದ್ದು, ಇದು ಭಾರೀ ಕುತುಃಲಕ್ಕೆ ಕಾರಣವಾಗಿದೆ. ಈ ವರ್ಷ ನಡೆಯಲಿರುವ ಬಿಹಾರ ಚುನಾವಣೆ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ಸವಾಲಾಗಿದೆ.