Friday, June 28, 2024
Homeರಾಷ್ಟ್ರೀಯಮತಯಂತ್ರ ಕುರಿತು ಮಸ್ಕ್‌, ರಾಜೀವ್‌ ಮಸ್ತ್‌ ಚರ್ಚೆ

ಮತಯಂತ್ರ ಕುರಿತು ಮಸ್ಕ್‌, ರಾಜೀವ್‌ ಮಸ್ತ್‌ ಚರ್ಚೆ

ನವದೆಹಲಿ, ಜೂ.16- ಜಗತ್ತಿನ ನಂ 1 ಶ್ರೀಮಂತ ಹಾಗೂ ಎಕ್ಸ್ ಸಂಸ್ಥೆಯ ಮಾಲಿಕ ಅಮೆರಿಕಾದ ಉದ್ಯಮಿ ಎಲಾನ್‌ಮಸ್ಕ್‌ರೊಂದಿಗೆ ಕೇಂದ್ರ ಸರ್ಕಾರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ನಡೆಸಿರುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಮೆರಿಕಾ ಅಧ್ಯಕ್ಷರ ಚುನಾವಣೆ ಕುರಿತಂತೆ ಸ್ವತಂತ್ರ ಅಭ್ಯರ್ಥಿ ರಾಬರ್ಟ್‌ ಎಫ್‌.ಕೆನಡಿ ಜೂನಿಯರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಪೋರ್ಟ್‌ ರಿಪೋದ ಪ್ರಾಥಮಿಕ ಚುನಾವಣೆಯಲ್ಲಿ ಬಳಸಲಾದ ಮತಯಂತ್ರಗಳು ನೂರಾರು ಅಕ್ರಮಗಳಿಗೆ ಕಾರಣವಾಗಿವೆ. ಅದೃಷ್ಟವಶಾತ್‌ ಪೇಪರ್‌ ಮತದಾನ ಇದ್ದಿದ್ದರಿಂದಾಗಿ ಸಮಸ್ಯೆಯನ್ನು ಗುರುತಿಸಿ ಅಕ್ರಮಗಳನ್ನು ಸರಿಪಡಿಸಲು ಸಾಧ್ಯವಾಗಿದೆ. ಬ್ಯಾಲೆಟ್‌ ಪೇಪರ್‌ ಮತದಾನ ಇಲ್ಲದೇ ಇರದಿದ್ದರೆ ನ್ಯಾಯವ್ಯಾಪ್ತಿಯ ಗತಿಯೇನು? ಎಂದು ಪ್ರಶ್ನಿಸಿದರು.

ಅಮೆರಿಕದ ನಾಗರಿಕರು ತಾವು ಚಲಾಯಿಸಿದ ಪ್ರತಿಯೊಂದು ಮತವೂ ಎಣಿಕೆಯಾಗಿದೆಯೇ? ಹಾಗೂ ಮತದಾನ ಹ್ಯಾಕ್‌ ಆಗಿಲ್ಲವೇ? ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಚುನಾವಣೆಯಲ್ಲಿ ಮತಯಂತ್ರಗಳ ಮಧ್ಯಪ್ರವೇಶವನ್ನು ತಡೆಯಲು ಮತಪತ್ರಗಳ ವ್ಯವಸ್ಥೆ ಮಾಡಬೇಕಿದೆ. ನಮ ಆಡಳಿತ ಈ ನಿಟ್ಟಿನ ನಿರ್ಧಾರ ತೆಗೆದುಕೊಳ್ಳುತ್ತದೆ. ಖಾತ್ರಿಯಾದ ಪ್ರಾಮಾಣಿಕ ಮತ್ತು ಮುಕ್ತ ಚುನಾವಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿಯೇ ಪ್ರತಿಕ್ರಿಯಿಸಿರುವ ಎಲಾನ್‌ಮಸ್ಕ್‌ ನಾವು ಮತಯಂತ್ರಗಳನ್ನು ನಿವಾರಿಸಿ ಹಾಕಬೇಕಿದೆ. ಅವುಗಳು ಮನುಷ್ಯರು ಅಥವಾ ಕೃತಕ ಬುದ್ಧಿಮತ್ತೆ(ಎಐ)ಗಳಿಂದ ಹ್ಯಾಕ್‌ ಆಗುವ ಸಂಭವನೀಯತೆ ಇದೆ. ಅದು ಸಣ್ಣದಾಗಬಹುದು ಅಥವಾ ದೊಡ್ಡ ಪ್ರಮಾಣದಲ್ಲೂ ಇರಬಹುದು ಎಂದಿದ್ದಾರೆ.

ಇದಕ್ಕೆ ಮಧ್ಯಪ್ರವೇಶಿಸಿರುವ ಭಾರತ ಸರ್ಕಾರದ ಮಾಹಿತಿ ಎಲೆಕ್ಟ್ರಾನಿಕ್‌್ಸ, ಮಾಹಿತಿ ತಂತ್ರಜ್ಞಾನ ಇಲಾಖೆಯ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು, ಇದೊಂದು ಸಾರ್ವತ್ರಿಕವಾದ ತಪ್ಪು ಹೇಳಿಕೆಯಾಗಿದೆ. ಯಾರಿಂದಲೂ ಸುರಕ್ಷಿತವಾದ ಡಿಜಿಟಲ್‌ ಸಲಕರಣೆಯನ್ನೇ ಕಂಡುಹಿಡಿಯಲಾಗುವುದಿಲ್ಲ ಎಂಬುದು ತಪ್ಪು. ಎಲಾನ್‌ಮಸ್ಕ್‌ರವರ ಅಭಿಪ್ರಾಯಗಳು ಅಮೆರಿಕಾ ಮತ್ತು ಇತರೆ ಸ್ಥಳಗಳಿಗೆ ಅನ್ವಯಿಸಬಹುದು. ಅಲ್ಲಿ ಇಂಟರ್‌ನೆಟ್‌ ಮತ್ತು ಕಂಪ್ಯೂಟರ್‌ ವೇದಿಕೆಗಳೊಂದಿಗೆ ಸಂಪರ್ಕಿಸುವ ಮತಯಂತ್ರಗಳನ್ನು ಬಳಸಲಾಗುತ್ತಿದೆ.

ಆದರೆ ಭಾರತದಲ್ಲಿನ ಮತಯಂತ್ರಗಳ ವಿನ್ಯಾಸ ಸುರಕ್ಷಿತವಾಗಿದೆ. ಯಾವುದೇ ಇಂಟರ್‌ನೆಟ್‌, ಬ್ಲೂಟೂತ್‌, ವೈ-ಫೈನಂತಹ ಸಂಪರ್ಕಗಳು ಜೋಡಣೆಯಾಗಿಲ್ಲ. ಕಾರ್ಖಾನೆಯಲ್ಲೇ ಪ್ರೋಗ್ರಾಮಿಂಗ್‌ ಮಾಡಲಾಗುತ್ತದೆ. ಅದನ್ನು ಮತ್ತೆ ಪರಿಷ್ಕರಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾರತ ವಿನ್ಯಾಸಗೊಳಿಸಿ ನಿರ್ಮಿಸಿರುವ ಮತಯಂತ್ರಗಳು ಸರಿ ಇವೆ. ಈ ನಿಟ್ಟಿನಲ್ಲಿ ನಾವು ಪಾಠಶಾಲೆಯನ್ನು ನಡೆಸಲು ಸಂತೋಷ ಪಡುತ್ತೇವೆ ಎಂದು ಎಲಾನ್‌ಮಸ್ಕ್‌ಗೆ ಟಾಂಗ್‌ ನೀಡಿದ್ದಾರೆ.

ಈ ನಡುವೆ ಮತ್ತೊಬ್ಬ ವ್ಯಕ್ತಿ ಧರ್ಮಗ್‌ ಎಂಬುವರು ಮಧ್ಯಪ್ರವೇಶಿಸಿದ್ದು, ಎಕ್‌್ಸ ಖಾತೆ ಕೂಡ ಹ್ಯಾಕ್‌ ಆಗಬಹುದು. ಅದಕ್ಕಾಗಿ ಪೇಪರ್‌ ಮತ್ತು ಪೆನ್‌ಗಳನ್ನು ಆಶ್ರಯಿಸಲು ಜನರಿಗೆ ಹೇಳುವುದು ಯಾವಾಗ ಎಂದು ಲೇವಡಿ ಮಾಡಿದರು. ಇದನ್ನು ಟ್ಯಾಗ್‌ ಮಾಡಿದ ರಾಜೀವ್‌ ಚಂದ್ರಶೇಖರ್‌ ಇದು ತಮಾಷೆ ಎನಿಸಿದರೂ, ಸೂಕ್ತವಾದ ಪ್ರತಿಕ್ರಿಯೆ. ಎಲಾನ್‌ಮಸ್ಕ್‌ರಿಂದ ಉತ್ತರ ಅಗತ್ಯ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಎಲಾನ್‌ಮಸ್ಕ್‌, ಯಾವುದನ್ನು ಬೇಕಾದರೂ ಹ್ಯಾಕ್‌ ಮಾಡಬಹುದು ಎಂದು ಹೇಳಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣರಾಗಿದ್ದಾರೆ.

RELATED ARTICLES

Latest News