ನವದೆಹಲಿ, ಜ. 1 (ಪಿಟಿಐ) ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಹೊಸ ವರ್ಷದ ಶುಭಾಷಯ ಕೋರಿದ್ದಾರೆ.ಹೊಸ ವರ್ಷದಲ್ಲಿ ಭಾರತ ಮತ್ತು ಜಗತ್ತಿಗೆ ಉಜ್ವಲ, ಹೆಚ್ಚು ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ರಚಿಸಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ನವೀಕರಿಸುವಂತೆ ಮುರ್ಮು ಕೇಳಿಕೊಂಡಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! 2025 ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮದ್ಧಿಯನ್ನು ತರಲಿ! ಈ ಸಂದರ್ಭದಲ್ಲಿ, ಭಾರತ ಮತ್ತು ಜಗತ್ತಿಗೆ ಉಜ್ವಲ, ಹೆಚ್ಚು ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ಸಷ್ಟಿಸಲು ಒಟ್ಟಾಗಿ ಕೆಲಸ ಮಾಡುವ ನಮ ಬದ್ಧತೆಯನ್ನು ನವೀಕರಿಸೋಣ ಎಂದು ಅವರು ಎಕ್‌್ಸ ಮಾಡಿದ್ದಾರೆ.
ಹೊಸ ವರ್ಷದಂದು ರಾಷ್ಟ್ರಕ್ಕೆ ತಮ ಶುಭಾಶಯಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದು ಹೊಸ ಅವಕಾಶಗಳು, ಯಶಸ್ಸು ಮತ್ತು ಅಂತ್ಯವಿಲ್ಲದ ಸಂತೋಷ ತರಲಿ ಎಂದು ಆಶಿಸಿದ್ದಾರೆ.
2025 ರ ಶುಭಾಶಯಗಳು! ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಅಂತ್ಯವಿಲ್ಲದ ಸಂತೋಷವನ್ನು ತರಲಿ. ಪ್ರತಿಯೊಬ್ಬರೂ ಅದ್ಭುತವಾದ ಆರೋಗ್ಯ ಮತ್ತು ಸಮದ್ಧಿಯೊಂದಿಗೆ ಆಶೀರ್ವದಿಸಲಿ ಎಂದು ಅವರು ಎಕ್‌್ಸ ನಲ್ಲಿ ಹೇಳಿದರು.