Monday, May 19, 2025
Homeರಾಜ್ಯಕಸ ಹಾಕಲು ಬಂದಿದ್ದ ಯುವತಿಗೆ ಪುಂಡರಿಂದ ಕಿರುಕುಳ

ಕಸ ಹಾಕಲು ಬಂದಿದ್ದ ಯುವತಿಗೆ ಪುಂಡರಿಂದ ಕಿರುಕುಳ

ಬೆಂಗಳೂರು, ಫೆ.24- ಮನೆ ಸಮೀಪ ಕಸ ಹಾಕಲು ಬಂದಿದ್ದ ಯುವತಿ ಜೊತೆ ನಾಲ್ವರು ಪುಂಡರು ಅಸಭ್ಯವಾಗಿ ವರ್ತಿಸಿದಾಗ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಫೆ.18ರಂದು ರಾತ್ರಿ 25 ವರ್ಷದ ಯುವತಿ ಮನೆ ಸಮೀಪ ಕೋರಮಂಗಲ ಆಟೋ ನಿಲ್ದಾಣದ ಬಳಿ ಕಸ ಹಾಕಲು ಬಂದಿದ್ದಾರೆ.

ಆ ಸಂದರ್ಭದಲ್ಲಿ ಎದುರಿಗೆ ಬಂದ ಸ್ನೇಹಿತನ ಜೊತೆ ಮತಾನಾಡುತ್ತಾ ಮನೆಗೆ ಹೋಗುತ್ತಿದ್ದಾಗ ನಾಲ್ವರು ಪುಂಡರು ಯುವತಿ ಬಳಿ ಬಂದು ಆಕೆಯ ಮೈಮುಟ್ಟಿದ್ದಾಗ ಆಕೆ ಹಾಗೂ ಜೊತೆಯಲ್ಲಿದ್ದ ಸ್ನೇಹಿತ ವಿರೋಧ ವ್ಯಕ್ತಪಡಿಸಿದಾಗ ಯುವತಿಗೆ ಕೈಗಳಿಂದ ಹಲ್ಲೆ ಮಾಡಿದ್ದಲ್ಲದೆ ಸ್ನೇಹಿತನಿಗೆ ಮರದ ಕಟ್ಟಿಗೆಯಿಂದ ಹೊಡೆದಿದ್ದಾರೆ.

ಅಪಾಯಕಾರಿ ವೀಲಿಂಗ್: 8 ಯುವಕರ ವಿರುದ್ಧ ಕ್ರಮ

ಇವರಿಬ್ಬರ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಪುಂಡರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುಂಡರಿಗಾಗಿ ಪೆಪೊಲೀಸರು ಶೋಧ ಕೈಗೊಂಡಿದ್ದಾರೆ.

RELATED ARTICLES

Latest News