ಚೆನ್ನೈ, ಅ. 28- ತವರಿನ ಅಂಗಳದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಅಂಪೈರ್‌ಗಳು ನೀಡುವ ನಿರ್ಣಯದಿಂದಲೇ ರೋಹಿತ್ ಶರ್ಮಾ ಸೋಲುವ ಭೀತಿ ಎದುರಾಗಿದೆ ಎಂದು ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅಂಪೈರ್‌ಗಳ ವಿರುದ್ಧ ಕಿಡಿಕಾರಿದ್ದಾರೆ.
ಶುಕ್ರವಾರ (ಅಕ್ಟೋಬರ್ 27) ರಂದು ಚೆನ್ನೈನ ಎಂ.ಎ. ಚಿದಂಬರಂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ರಣರೋಚಕ ವಿಶ್ವಕಪ್ ಪಂದ್ಯದಲ್ಲಿ ಹರಿಣಗಳು 1 ವಿಕೆಟ್‍ನ ಗೆಲುವು ಪಡೆದು ಪಾಯಿಂಟ್ಸ್ ಟೇಬಲ್ ಅಗ್ರಸ್ಥಾನಕ್ಕೇರಿದರೆ, ಅಂಪೈರ್ ಮಾಡಿದ್ದ ಎಡವಟ್ಟಿನಿಂದ ಬಾಬರ್ ಆಝಮ್ ಪಡೆ ಸೆಮಿಫೈನಲ್ ರೇಸ್‍ನಿಂದ ಬಹುತೇಕ ಹೊರಬಿದ್ದಿದೆ. ಇದರಿಂದ ಬೇಸತ್ತ ಟರ್ಬನೇಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬೀಳಿಸಲು ಷಡ್ಯಂತ್ರ, ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ವಾರ್ನಿಂಗ್
ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಅವರು ಮಾಡಿದ್ದ ಎಸೆತವನ್ನು ದಕ್ಷಿಣ ಆಫ್ರಿಕಾದ ತರ್ಬೆಜ್ ಶಾಂಸಿ ಅವರು ಪ್ಯಾಡ್ ಮೇಲೆ ಎಳೆದುಕೊಂಡು ಎಲ್‍ಬಿಡ್ಲ್ಯು ಬಲೆಗೆ ಬಿದ್ದಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ಘೋಷಿಸಿದ್ದರು. ಪಾಕಿಸ್ತಾನ ತೆಗೆದುಕೊಂಡ ರಿವ್ಯೂನಲ್ಲಿ ಶಾಂಸಿ ಔಟಾಗಿರುವುದು ಸ್ಪಷ್ಟವಾಗಿದ್ದರೂ ಕೂಡ 3ನೇ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರಿಂದ ಶಾಂಸಿ ಔಟಾಗುವುದರಿಂದ ತಪ್ಪಿಸಿಕೊಂಡರು. ಅಂಪೈರ್ ತೆಗೆದುಕೊಂಡ ಈ ಕೆಟ್ಟ ತೀರ್ಪಿನಿಂದಾಗಿ ಪಾಕಿಸ್ತಾನ 1 ವಿಕೆಟ್‍ನಿಂದ ಸೋಲುವಂತಾಯಿತು.
ಅಂಪೈರ್ ತೀರ್ಪಿಗೆ ಭಜ್ಜಿ ಕಿಡಿ:
ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಗಿದ ಬೆನ್ನಲ್ಲೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, `ಇಂದಿನ ಪಂದ್ಯದಲ್ಲಿ ಯಾರೂ ಗೆಲುವು ಸಾಧಿಸಿ, ಯಾವ ತಂಡ ಸೋಲು ಕಂಡಿತು ಎಂಬುದು ಮುಖ್ಯವಾಗುವುದಿಲ್ಲ, ಯಾವ ತಂಡಗಳು ಕಾದಾಟ ನಡೆಸುತ್ತಿವೆ ಎಂಬುದು ಕೂಡ ನಗಣ್ಯ. ಆದರೆ ಅಂಪೈರ್‍ಗಳು ತೆಗೆದುಕೊಂಡ ನಿಯಮ ಸರಿಯಾಗಿರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಈ ರೀತಿ ಅನ್ಯಾಯ ಟೀಮ್‍ಇಂಡಿಯಾ ಜೊತೆಗೂ ಆಗಬಹುದು. ಅಂಪೈರ್‍ಗಳ ತಪ್ಪು ತೀರ್ಮಾನದಿಂದಲೇ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಸೋಲು ಕಂಡರೆ ಆಗ ಏನು ಮಾಡುವುದು’ ಎಂದು ಹರ್ಭಜನ್‍ಸಿಂಗ್ ಆಕ್ರೋಶ ವ್ಯಕ್ತಪಡಿಸಿದದಾರೆ.