ಹರಿದ್ವಾರ, ಸೆ.16-ಚಿನ್ನಾಭರಣ ಮಳಿಗೆಯೊಂದರಲ್ಲಿ ದರೋಡೆ ನಡೆಸಿದ ಆರೋಪಿಯೊಬ್ಬ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತನಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಮೃತ ಆರೋಪಿಯನ್ನು ಪಂಜಾಬ್‌ನ ಮುಕ್ತಸರ ನಿವಾಸಿ ಸತೇಂದ್ರ ಪಾಲ್ ಅಲಿಯಾಸ್ ಲಕ್ಕಿ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸೆ.1 ರಂದು ಹರಿದ್ವಾರದಲ್ಲಿ ದ್ವಿಚಕ್ರವಾಹನಗಳಲ್ಲಿ ಬಂದ ಐವರು ಆಭರಣ ಅಂಗಡಿಗೆ ನುಗ್ಗಿ ಅಲ್ಲಿನ ಕೆಲಸಗಾರರಿಗೆ ಬಂದೂಕು ತೋರಿಸಿ 5 ಕೋಟಿ ಮೌಲ್ಯದ ಚಿನ್ನ ಹಾಗು ಇತರೆ ವಸ್ತುಗಳನ್ನು ದರೋಡೆ ಮಾರಿ ಪರಾರಿಯಾಗಿದ್ದರು.
ರಾತ್ರಿ 10:30 ರ ಸುಮಾರಿಗೆ ಬಹದರಾಬಾದ್‌ನ ಧನೂರಿ ಬಳಿ, ಮುಖಕ್ಕೆ ಬಟ್ಟೆಯಿಂದ ಮುಚ್ಚಿಕೊಂಡು ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ಪೊಲೀಸರು ತಡೆದಿದ್ದಾರೆ ಆದರೆ, ತಪ್ಪಿಸಿಕೊಳ್ಳುವ ಉದ್ದೇಶದಿಂದ ಪೊಲೀಸರತ್ತ ಗುಂಡು ಹಾರಿಸಲು ಪಾರಾರಿಯಾಗುವಾಗ ಇದರ ಬೆನ್ನಲ್ಲೇ ಪೊಲೀಸರು ಕೂಡ ಗುಂಡು ಹಾರಿಸಿದ್ದಾರೆ ಈ ವೇಲೆ ಒಬ್ಬ ಆರೋಪಿ ಗುಂಡು ತಗುಲಿದೆ.
ನಂತರ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದ್ದು,ಆತ ಮೃತಪಟ್ಟಿದ್ದಾನೆ,ಇದೇ ವೇಳೆ ಪ್ರಕರಣದ ಮತ್ತೊಬ್ಬ ಆರೋಪಿ ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾನೆ, ಅವರನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ದೋವಲ್ ತಿಳಿಸಿದ್ದಾರೆ.ಆರೋಪಿಗಳಿಂದ ದೋಚಿದ್ದ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಹದರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್‌ಕೌಂಟರ್ ನಂತರ ಪರಿಸ್ಥಿತಿಯನ್ನು ಅವಲೋಕಿಸಿದ ಪ್ರಮೋದ್ ದೋವಲ್ ಅವರು ಆಭರಣ ಅಂಗಡಿ ಮಾಲೀಕ ಅತುಲ್ ಗರ್ಗ್ ಅವರನ್ನು ಸ್ಥಳಕ್ಕೆ ಕರೆಸಿ ಮೃತರನ್ನು ಮತ್ತು ವಶಪಡಿಸಿಕೊಂಡ ಮಾಲುಗಳನ್ನು ಪರಿಶೀಲಿಸಿದ್ದಾರೆ.
ಏತನ್ಮಧ್ಯೆ, ಡೆಹ್ರಾಡೂನ್‌ನಲ್ಲಿ, ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಅವರು ದರೋಡೆಯಲ್ಲಿ ಭಾಗಿಯಾಗಿರುವ ಇತರ ಇಬ್ಬರು ದರೋಡೆಕೋರರಾದ ಗುರ್ದೀಪ್ ಸಿಂಗ್ ಅಲಿಯಾಸ್ ಮೋನಿ ಮತ್ತು ಜೈದೀಪ್ ಸಿಂಗ್ ಅಲಿಯಾಸ್ ಮನ ಅವರನ್ನುಹರಿದ್ವಾರದ ಖ್ಯಾತಿ ಧಾಬಾ ಬಳಿಯಿಂದ ಬಂಧಿಸಲಾಗಿದೆ ಎಂದು ಹೇಳಿದರು.
ಆರೋಪಿಗಳಿಂದ 50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಇದಲ್ಲದೆ, ಘಟನೆಗೆ ಬಳಸಲಾದ ಪಾಯಿಂಟ್ 32 ಬೋರ್ ಪಿಸ್ತೂಲ್, ನಾಲ್ಕು ಕಾಟ್ರಿಡ್‌್ಜಗಳು ಮತ್ತು ನಂಬರ್ ರಹಿತ ಮೋಟಾರ್‌ಸೈಕಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಇತರ ಆರೋಪಿಗಳಾದ ದೆಹಲಿಯ ಸುಭಾಷ್ ಮತ್ತು ಪಂಜಾಬ್‌ನ ಪಿಂಡಿಯ ಅಮನ್‌ರ ಪತ್ತೆಗಾಗಿ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಕುಮಾರ್ ಹೇಳಿದರು.