Sunday, October 6, 2024
Homeರಾಷ್ಟ್ರೀಯ | Nationalಹರಿಯಾಣ ವಿಧಾನಸಭಾ ಚುನಾವಣೆ : 90 ಕ್ಷೇತ್ರಗಳಿಗೆ ಇಂದು ಮತದಾನ

ಹರಿಯಾಣ ವಿಧಾನಸಭಾ ಚುನಾವಣೆ : 90 ಕ್ಷೇತ್ರಗಳಿಗೆ ಇಂದು ಮತದಾನ

Haryana Assembly Elections 2024

ಚಂಡೀಗಢ, ಅ. 5 (ಪಿಟಿಐ) ಬಿಗಿ ಭದ್ರತೆಯ ನಡುವೆ ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಇಂದು ಬೆಳಗ್ಗೆ ಮತದಾನ ಆರಂಭಗೊಂಡಿದ್ದು, ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ, ಕೇಂದ್ರ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಮತ್ತು ಒಲಿಂಪಿಕ್‌ ಪದಕ ವಿಜೇತ ಮನು ಭಾಕರ್‌ ತಮ ಹಕ್ಕು ಚಲಾಯಿಸಿದ್ದಾರೆ.

ಸಿಎಂ ಸೈನಿ, ಕಾಂಗ್ರೆಸ್‌‍ ನಾಯಕರಾದ ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ವಿನೇಶ್‌ ಫೋಗಟ್‌ ಮತ್ತು ಜೆಜೆಪಿಯ ದುಶ್ಯಂತ್‌ ಚೌತಾಲ ಅವರು ಕಣದಲ್ಲಿರುವ ಪ್ರಮುಖರು. ಒಟ್ಟು 1,027 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ 10 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌‍ ಇದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದ್ದು, ಅಕ್ಟೋಬರ್‌ 8 ರಂದು ಮತ ಎಣಿಕೆ ನಡೆಯಲಿದೆ.

ಕುರುಕ್ಷೇತ್ರದ ಲಾಡ್ವಾದಿಂದ ಸ್ಪರ್ಧಿಸಿರುವ ಸೈನಿ ಅವರು ಅಂಬಾಲಾ ಜಿಲ್ಲೆಯ ನಾರೈಂಗರ್‌ನಲ್ಲಿರುವ ತಮ ಸ್ಥಳೀಯ ಗ್ರಾಮವಾದ ಮಿರ್ಜಾದಲ್ಲಿ ಮತ ಚಲಾಯಿಸಿದರು. ಹರಿಯಾಣದ ಮಾಜಿ ಮುಖ್ಯಮಂತ್ರಿ ಎಂಎಲ್‌ ಖಟ್ಟರ್‌ ಅವರು ಕರ್ನಾಲ್‌ನಲ್ಲಿ ಮತ ಚಲಾಯಿಸಿದರೆ, ಮನು ಭಾಕರ್‌ ಅವರು ತಮ ಪೋಷಕರೊಂದಿಗೆ ಜಜ್ಜರ್‌ ಜಿಲ್ಲೆಯ ಗೋರಿಯಾ ಗ್ರಾಮದಲ್ಲಿ ಮತ ಚಲಾಯಿಸಿದರು.

ಅವರು ಮತ ಚಲಾಯಿಸುವ ಮೊದಲು, ಸೈನಿ ಗುರು ರವಿದಾಸ್‌‍ ದೇವಸ್ಥಾನ ಮತ್ತು ಗುರುದ್ವಾರದಲ್ಲಿ ಪ್ರಾರ್ಥಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೈನಿ, ಹರಿಯಾಣದ ಜನರ ಮನಸ್ಥಿತಿ ಸ್ಪಷ್ಟವಾಗಿದೆ, ಬಿಜೆಪಿ ಮೂರನೇ ಬಾರಿಗೆ ದೊಡ್ಡ ಜನಾದೇಶದೊಂದಿಗೆ ಸರ್ಕಾರ ರಚಿಸಲಿದೆ ಎಂದರು.

ಪ್ಯಾರಿಸ್‌‍ ಒಲಂಪಿಕ್‌ ಡಬಲ್‌ ಪದಕ ವಿಜೇತ ಮನು ಭಾಕರ್‌ ಜನರಿಗೆ, ವಿಶೇಷವಾಗಿ ಕಿರಿಯರಿಗೆ, ಹೊರಗೆ ಬಂದು ಮತ ಚಲಾಯಿಸುವಂತೆ ಮನವಿ ಮಾಡಿದರು. 22 ವರ್ಷದ ಅಥ್ಲೀಟ್‌ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ ಎಂದು ಆಕೆಯ ತಂದೆ ರಾಮ್‌ ಕಿಶನ್‌ ಭಾಕರ್‌ ಹೇಳಿದ್ದಾರೆ.

ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ ಪಂಕಜ್‌ ಅಗರ್ವಾಲ್‌ ಪ್ರಕಾರ, 2,03,54,350 ಮತದಾರರು ಚುನಾವಣೆಯಲ್ಲಿ ತಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಲ್ಲಿ 8,821 ಶತಾಯುಷಿಗಳು 3,283 ಪುರುಷರು ಮತ್ತು 5,538 ಮಹಿಳೆಯರು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Latest News