Wednesday, February 26, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಹಾಸನ : ಹಳ್ಳದಲ್ಲಿ ಹುಲಿ ಶವ ಪತ್ತೆ

ಹಾಸನ : ಹಳ್ಳದಲ್ಲಿ ಹುಲಿ ಶವ ಪತ್ತೆ

Hassan: Tiger body found in a pond

ಹಾಸನ,ಫೆ.10- ಹಳ್ಳದ ನೀರಿನಲ್ಲಿ ಹುಲಿಯ ಶವ ಕೊಳೆತ ಸ್ಥಿತಿಯಲ್ಲಿ ಬೇಲೂರು ತಾಲೂಕಿನ ರಾಮದೇವರಹಳ್ಳದಲ್ಲಿ ಪತ್ತೆಯಾಗಿದೆ. ದೈತ್ಯಾಕಾರದ ಹುಲಿ ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಸುಮಾರು 3 ವರ್ಷ ಪ್ರಾಯದ ಗಂಡುಹುಲಿಯಾಗಿದೆ.ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಸೆರೆ ಹಿಡಿದು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತು.

ವಿಡಿಯೋ ಕಾಲರ್‌ ಅಳವಡಿಸಿ ಕಾಡಿಗೆ ಬಿಡಲಾಗಿದ್ದ ಹುಲಿ ಇದೀಗ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹಳೆಬೀಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

RELATED ARTICLES

Latest News