ಹಾವೇರಿ,ಮೇ.13-ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆ ಹಾವೇರಿ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಗದಗ ಜಿಲ್ಲೆ ಬಸಾಪುರ ಗ್ರಾಮದ ನಿವಾಸಿ ಮರಿಯವ್ವ ನಾಯ್ಕ (60) ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದ ನಾಗಪ್ಪ ಕನಸೋಗಿ(62) ಮೃತ ದುರ್ದೈವಿ.
ಹಾನಗಲ್ ತಾಲೂಕಿನ ಕೊಂಡೊಜಿ ಗ್ರಾಮದಮಾವಿನ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿಕೊಂಡಿದ್ದ ಇವರು,ನಿನ್ನೆ ಸಂಜೆ ಗ್ರಾಮದ ದೊಡ್ಡ ಕೆರೆ ಬಳಿ ದನಕಾಯಲು ಹೋದಾಗ ರಭಸ ಮಳೆ ಸುರಿದಿದೆ. ಮರದ ಕೆಳಗೆ ಹೋದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಇವರು ಮಾವಿನ ತೋಟದಲ್ಲಿ ಕೆಲಸ ಮಾಡಿಕೊಂಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತಡ ರಾತ್ರಿ ಘಟನೆ ಬಗ್ಗೆ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.