ನವದೆಹಲಿ, ಜು.26-ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ಅವರ ಅಧಿಕೃತ ನಿವಾಸ ಲೋಕಕಲ್ಯಾಣ ಮಾರ್ಗದಲ್ಲಿ ಗೌಡರು ಮತ್ತು ಕುಮಾರಸ್ವಾಮಿ ಅವರು ನಿನ್ನೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯಾವ ವಿಚಾರದ ಈ ಮೂವರು ನಾಯಕರು ಚರ್ಚೆ ಮಾಡಿದ್ದಾರೆ ಎಂಬ ವಿವರ ಲಭ್ಯವಾಗಿಲ್ಲ.ಭೇಟಿಯಾಗಿರುವ ಈ ವಿಚಾರವನ್ನು ಪ್ರಧಾನಿ ಎಕ್‌್ಸನಲ್ಲಿ ಪೋಟೋ ಸಹಿತ ಹಂಚಿಕೊಂಡಿದ್ದಾರೆ.
ದೇವೇಗೌಡರನ್ನು ಭೇಟಿಯಾಗುವುದು ಗೌರವದ ವಿಚಾರವಾಗಿದೆ. ವಿವಿಧ ವಿಷಯಗಳ ಬಗ್ಗೆ ಮಾಜಿ ಪ್ರಧಾನಿಗಳಿಗಿರುವ ಜಾಣೆ, ದೃಷ್ಟಿ ಕೋನವು ಪ್ರಬಲವಾದ ಮೌಲ್ಯಯುತವಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಗೌಡರು ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದು, ಅದು ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿಯನ್ನು ನೆನಪಿಸುತ್ತದೆ. ಅವರ ಭೇಟಿ ಹಾಗೂ ನೀಡಿರುವ ಉಡುಗೊರೆಗೆ ಧನ್ಯವಾದಗಳನ್ನು ಮೋದಿ ಸಲ್ಲಿಸಿದ್ದಾರೆ.