ಹಾಸನ,ಡಿ.12- ಜಮ್ಮು ಮತ್ತು ಕಾಶ್ಮೀರಕ್ಕೆ 370 ನೇ ವಿಯಿಂದ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಅಸ್ತು ನೀಡಿರುವುದು ಸಂತಸ ತಂದಿದ್ದು, ಸುಪ್ರೀಂ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ .ದೇವೇಗೌಡ ತಿಳಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಟಿಕಲ್ 370 ಯಾವಾಗ ಕಾಶ್ಮೀರ ಕ್ಕೆ ಕೊಟ್ಟಿದ್ದಂತಹ ವಿಶೇಷ ಸವಲತ್ತು ಇದೆಯೋ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ತರುವುದರ ಮುಖೇನ ಆ ಒಂದು ಸವಲತ್ತನ್ನು ರದ್ದು ಮಾಡಿದೆ.
ಅದರಿಂದ ಬೇರೆ ರಾಜ್ಯಗಳಿಗೆ ಏನು ಅನುಕೂಲ ಆಗುತ್ತದೆಯೋ, ಅನ್ವಯ ಆಗುತ್ತದೆಯೋ, ಅದೇ ಕಾಶ್ಮೀರಕ್ಕೂ ಜಮ್ಮುಗೂ ಅನ್ವಯವಾಗಲಿದೆ ಎಂದು ಹೇಳಿದರು.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಂದು ಕಡೆ ಮತ್ತೊಂದು ಕಡೆ ಎನ್‍ಡಿಎ ಇದ್ದು ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಈ ರಾಷ್ಟ್ರದ ಮಹಾ ಜನತೆ ಇಂಡಿಯಾಗೆ ತೀರ್ಪು ಕೊಡುತ್ತಾರೋ ಅಥವಾ ಎನ್‍ಡಿಎ ಮೈತ್ರಿಕೂಟಕ್ಕೆ ತೀರ್ಪು ಕೊಡುತ್ತಾರೋ ಕಾದು ನೋಡಬೇಕು ಎಂದರು.
ವಾಹನಗಳಿಗೆ ಹೈಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿವರಿಗೆ ಕಾಲಾವಕಾಶ
ಹಾಸನದಿಂದ ಲೋಕಸಭೆ ಚುನಾವಣೆಗೆ ಸ್ರ್ಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಹಾಸನದಲ್ಲಿ ಸಿಟ್ಟಿಂಗ್ ಎಂಪಿ ಇದ್ದು ಅವರೇ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.ಮೇ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಅದಕ್ಕೆಲ್ಲ ಉತ್ತರ ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಕಡೆ ಕಾರ್ತಿಕ: ವಿಶೇಷ ಪೂಜೆ
ಜಿಲ್ಲೆ ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ದಂಪತಿ ಸಮೇತರಾಗಿ ಹುಟ್ಟೂರಿನಲ್ಲಿ ಮನೆ ದೇವರ ಪೂಜೆ ನೆರವೇರಿಸಿ, ಕಾರ್ತಿಕ ಮಾಸದ ಕಡೇ ಸೋಮವಾರ ಹಿನ್ನೆಲೆಯಲ್ಲಿ ವಿಶೇಷ ಪೂಜೆ, ಹೋಮ ಹವನದಲ್ಲಿ ಭಾಗಿಯಾಗಿದ್ದರು.
ಪುತ್ರ ರೇವಣ್ಣ ಹಾಗು ಪತ್ನಿ ಚೆನ್ನಮ್ಮ ಜೊತೆ ಹೆಚ್.ಡಿ.ದೇವೇಗೌಡರು ಪೂಜೆ ಸಲ್ಲಿಸಿದ್ದಾರೆ.