Sunday, September 8, 2024
Homeಜಿಲ್ಲಾ ಸುದ್ದಿಗಳು | District Newsಹೆಚ್‌.ಡಿ.ಕೋಟೆ : ಹುಲಿ ದಾಳಿಯಲ್ಲಿ ಮಹಿಳೆ ಸಾವು

ಹೆಚ್‌.ಡಿ.ಕೋಟೆ : ಹುಲಿ ದಾಳಿಯಲ್ಲಿ ಮಹಿಳೆ ಸಾವು

ಮೈಸೂರು, ಮೇ 26– ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಹೆಚ್‌ಡಿ ಕೋಟೆ ತಾಲೂಕಿನ ಮೂರ್ಬಾಂದ್‌ ಬೆಟ್ಟದ ಸಮೀಪ ನಡೆದಿದೆ.

ಎನ್‌.ಬೇಗೂರು ಸಮೀಪದ ಮಾಳದ ನಿವಾಸಿ ಚಿಕ್ಕಿ (48) ಹುಲಿ ದಾಳಿಗೆ ಒಳಗಾದ ಮಹಿಳೆ.
ಎಂದಿನಂತೆ ಮಹಿಳೆ ಮೇಕೆಗಳನ್ನು ಮೇಯಿಸಲು ಬೆಟ್ಟದ ತಪ್ಪಲಿಗೆ ತೆರಳಿದ್ದು, ಈ ವೇಳೆ ಪೊದೆಯಲ್ಲಿದ್ದ ಹುಲಿ ಏಕಾಏಕಿ ದಾಳಿ ನಡೆಸಿ ಮಹಿಳೆಯನ್ನು ಎಳೆದೊಯ್ದು ಸಾಯಿಸಿದೆ.

ವಾಚ್‌ ಟವರ್‌ ಮೇಲೆ ಮಹಿಳೆಯ ಮೃತ ದೇಹ ಪತ್ತೆಯಾಗಿದ್ದು, ಸಂಜೆಯಾದರೂ ಮನೆಗೆ ಬಾರದ ಮಹಿಳೆ ಬಗ್ಗೆ ಆತಂಕಕ್ಕೊಳಗಾದ ಕುಟುಂಬ ಸದಸ್ಯರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ.

ಬೆಟ್ಟದ ಬಳಿ ಶವವಾಗಿ ಪತ್ತೆಯಾಗಿದ್ದು, ಹುಲಿ ದಾಳಿಯಿಂದ ಮಹಿಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಘಟನೆ ನಡೆದ ಸ್ಥಳಕ್ಕೆ ಎನ್‌.ಬೇಗೂರು ಅರಣ್ಯ ಇಲಾಖೆ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಎಚ್‌ಡಿ ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News