Saturday, September 28, 2024
Homeರಾಜಕೀಯ | Politicsಚನ್ನಪಟ್ಟಣ ಅಭ್ಯರ್ಥಿ ಆಯ್ಕೆಗೆ ಯಾವುದೇ ಆತುರವಿಲ್ಲ : ಹೆಚ್ಡಿಕೆ

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಗೆ ಯಾವುದೇ ಆತುರವಿಲ್ಲ : ಹೆಚ್ಡಿಕೆ

ಬೆಂಗಳೂರು,ಜೂ.23-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಲು ಆತುರವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಕುಮಾರಸ್ವಾಮಿ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಧಾನವಾಗಿ ಮೈತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಸದ್ಯಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಆತುರ ನಮಗಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರನ್ನು ಸ್ಪರ್ಧಿಸಬೇಡಿ ಎಂದು ತಡೆದಿರುವವರು ಯಾರು ಎಂದು ಪ್ರಶ್ನಿಸಿದರು.

ಚನ್ನಪಟ್ಟಣಕ್ಕೆ ಶಿವಕುಮಾರ್ ಭೇಟಿ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಹೋದರೆ ತಪ್ಪೇನಿದೆ? ಅವರನ್ನು ಹಿಡಿದುಕೊಂಡಿರುವವರು ಯಾರು? ಈಗಲಾದರೂ ಚನ್ನಪಟ್ಟಣದ ಬಗ್ಗೆ ಕಾಳಜಿ ಬಂದಿದ್ದು, ಗಮನಹರಿಸುತ್ತಿರುವುದಕ್ಕೆ ಅಭಿನಂದಿಸೋಣ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದಾರೆ. ಅವರನ್ನು ಚನ್ನಪಟ್ಟಣಕ್ಕೆ ಹೋಗಬೇಡಿ ಎಂದು ಹೇಳಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿರುವುದಕ್ಕೆ ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗಮನ ಸೆಳೆದಾಗ ಅವರು ರಾಜಕಾರಣ ಮಾಡುತ್ತಾರೆ. ಮಾಡಲಿ ಬನ್ನಿ ಎಂದಷ್ಟೇ ಹೇಳಿದರು.

ಎಚ್ಡಿಕೆ ಗರಂ:
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಮೇಲಿನ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನಗೆ ಆ ರೀತಿಯ ಪ್ರಶೆ ಕೇಳುತ್ತೀರಾ? ಅಂತಹ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಗರಮಾದರು.

ಆರೋಪ ಕೇಳಿಬಂದಿದ್ದು ಕಾನೂನು ರೀತಿ ಕ್ರಮ ಆಗಲಿದೆ. ಅವರ ಮೇಲಿನ ಆರೋಪಕಕ್ಕೂ ನಮಗೂ ಏನು ಸಂಬಂಧ? ಈ ವಿಚಾರದ ಬಗ್ಗೆ ಅನಂತರ ಮಾತನಾಡೋಣ ಬನ್ನಿ ಎಂದರು.

RELATED ARTICLES

Latest News