Friday, November 22, 2024
Homeರಾಜಕೀಯ | Politicsರಾಜಕೀಯದ ಹೊಟ್ಟೆ ಉರಿಗೆ ಔಷಧಿ ಇಲ್ಲ : ಕೇಂದ್ರ ಸಚಿವ ಕುಮಾರಸ್ವಾಮಿ

ರಾಜಕೀಯದ ಹೊಟ್ಟೆ ಉರಿಗೆ ಔಷಧಿ ಇಲ್ಲ : ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು, ಆ.3- ಹೊಟ್ಟೆಯ ಉರಿಗೆ, ಮನುಷ್ಯ ದೇಹಕ್ಕೆ ಔಷಧಿ ತೆಗೆದುಕೊಳ್ಳಬಹುದು. ಆದರೆ, ರಾಜಕೀಯದ ಹೊಟ್ಟೆ ಉರಿಗೆ ಔಷಧಿ ಇಲ್ಲ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಅಹಿಂದ ನಾಯಕ ಮುಖ್ಯಮಂತ್ರಿಯಾಗಿದ್ದಾರೆ ಎಂಬುದನ್ನು ಸಹಿಸದೇ ಪಾದಯಾತ್ರೆ ಮಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ರಾಜಕೀಯ ವ್ಯವಸ್ಥೆಯಲ್ಲಿ ಅಹಿಂದ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಯಾವ ರೀತಿ ಎಸ್ಸಿ, ಎಸ್ಟಿ ಜನರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಹೊಡೆದ್ದಾರೆ. ಇವರು ಅಹಿಂದ ರಕ್ಷಕರೇ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ನಾವು ಹೊಟ್ಟೆ ಉರಿ ಪಡೆಯುತ್ತಿದ್ದೇವೆಯೇ? ಹೊಟ್ಟೆ ಉರಿ ಪಡೆಯಬೇಕಾದವರು ಅಹಿಂದ ವರ್ಗ. ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಜನರ ಆಕ್ರೋಶ ಇದೆ. ಅದಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಂತಹ ಪರಿಸ್ಥಿತಿಯಲ್ಲಿ ಇದನ್ನೇ ಹೇಳಬೇಕು ತಾನೇ? ಎಲ್ಲರೂ ಹೇಳೋದು ಇದನ್ನೇ ತಾನೇ? ಅವರಿಗೆ ಬೇಕಾದಾಗ ರಾಜ್ಯಪಾಲರು ಒಳ್ಳೆಯವರು, ಬೇಡ ಅಂದಾಗ ಕೆಟ್ಟವರು. 75 ವರ್ಷಗಳಿಂದ ನೋಡಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು. ಅವರ ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ವರ್ಗಾವಣೆಗಳಲ್ಲಿ ಪ್ರತಿಯೊಂದು ಸ್ಥಳಕ್ಕೆ ಹಣ ಕೊಡಬೇಕು. ಸಾವಿರಾರು ಉದಾಹರಣೆ ಕೊಡಬಲ್ಲೆ ಎಂದು ಮುಖ್ಯಮಂತ್ರಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಮುಡಾ ಪ್ರಕರಣದ ಒಂದೇ ಅಲ್ಲ. ರಾಜ್ಯ ಸರ್ಕಾರದ ಹಲವಾರು ವಿಷಯಗಳಲ್ಲಿ ಜನ ವಿರೋಧಿ ನೀತಿ ಇದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸದನ ಸಮಿತಿ ರಚನೆ ಮಾಡಲಾಗಿತ್ತು. ನೈಸ್‌‍ ರಸ್ತೆ ಯೋಜನೆ ಹೆಸರಲ್ಲಿ ರೈತರ ಜಮೀನು ಲೂಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸದನ ಸಮಿತಿ ವರದಿ ಕೋಲ್‌್ಡ ಸ್ಟೋರೇಜ್‌ನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ :
ಜನಾಂದೋಲನ ಕಾಂಗ್ರೆಸ್‌‍ನಿಂದ ಆಗುವುದಲ್ಲ, ನಮಿಂದ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಆಗಬೇಕಿದ್ದು, ಅದು ಪಾದಯಾತ್ರೆ ಮೂಲಕ ಆಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮುಡಾ,ವಾಲೀಕಿ ಹಗರಣ, ಜನ ವಿರೋಧಿ ನೀತಿಯನ್ನು ವಿರೋಧಿಸಿ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಗೆ ಕೌಂಟರ್‌ ಆಗಿ ಕಾಂಗ್ರೆಸ್‌‍ ಜನಾಂದೋಲನ ಕಾರ್ಯಕ್ರಮ ಹಮಿಕೊಳ್ಳಲಾಗಿದೆ. ಎಲ್ಲಕ್ಕೂ ಉತ್ತರ ಕೋಡೋಣ. ಅಲ್ಲಿ ಯಾರು ಪ್ರಶ್ನೆ ಮಾಡುತ್ತಿದ್ದಾರೆ ಅವರಿಗೆ ಪ್ರಶ್ನೆ ಮಾಡಲು ನೈತಿಕತೆ ಇದೆಯಾ? ರಾಮನಗರ, ಬಿಡದಿ, ಚನ್ನಪಟ್ಟಣದಲ್ಲಿ ನನ್ನನ್ನು ಬೆಳೆಸಿರುವ ಜನರ ಮುಂದೆ ಉತ್ತರ ಕೋಡೋಣ.

ಕಾಂಗ್ರೆಸ್‌‍ ಪಕ್ಷವು ರಾಜ್ಯದಲ್ಲಿ ಹಲವು ಅಕ್ರಮಗಳು, ಕಾನೂನು ಬಾಹಿರ ಕೆಲಸಗಳಲ್ಲಿ ತೊಡಗಿದೆ. ಇದು ಜನವಿರೋಧಿ ಸರ್ಕಾರವಾಗಿದ್ದು, ಮುಡಾ, ವಾಲೀಕಿ ನಿಗಮದ ಹಗರಣಗಳು ಬಯಲಿಗೆ ಬಂದಿವೆ. ಇದು ಜನರ ಆಸ್ತಿಗಳನ್ನು ನುಂಗಿದ ಸರ್ಕಾರ ಎಂದರು. ದೇವೇಗೌಡರ ಕುಟುಂಬದಿಂದ ನೈಸ್‌‍ ಸುತ್ತಮುತ್ತ ಅಕ್ರಮ ಆಸ್ತಿ ಮಾಡಲಾಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಅವರ ಕೈಯಲ್ಲೇ ಇದೆ.

ನಾವು ಅಕ್ರಮವಾಗಿ ಆಸ್ತಿ ಮಾಡಿದ್ದರೆ ಸರ್ಕಾರ ವಶಪಡಿಸಿಕೊಳ್ಳಲಿ. ಸರ್ಕಾರ ಅವರದ್ದೇ ಇದ್ದು ಮುಟ್ಟುಗೋಲು ಹಾಕಿಕೊಳ್ಳಲಿ. ಬೇಡವೆಂದು ಅವರನ್ನು ಯಾರು ಹಿಡಿದುಕೊಂಡಿದ್ದಾರೆ. ನಾವು ನ್ಯಾಯ ಬದ್ಧವಾಗಿ ಬದುಕಿದ್ದೇವೆ. ಇವರ ಥರ ನಾವು ಬದುಕಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ವಾಲೀಕಿ ನಿಗಮ ಹಾಗೂ ಮೂಡಾ ವಿಚಾರದಲ್ಲಿ ಸರ್ಕಾರ ಪಲಾಯನವಾದ ಮಾಡುತ್ತಿದೆ. ಮುಖ್ಯಮಂತ್ರಿ ಅವರೇ 81 ಕೋಟಿ ರೂ.ಹಗರಣ ಆಗಿದೆ ಎಂದು ಸದನದಲ್ಲಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷ ಪ್ರಶ್ನೆ ಮಾಡುವುದು ಸಹಜ. ಆದರೆ, ಸರ್ಕಾರ ಅವರ ಕೈಯಲ್ಲಿದ್ದು ತನಿಖೆ ಮಾಡಲಿ ಎಂದರು.

RELATED ARTICLES

Latest News