Thursday, April 3, 2025
Homeರಾಜ್ಯಸಂಕ್ರಾಂತಿ ಬಳಿಕ ಪಕ್ಷ ಬಲವರ್ಧನೆ : ಎಚ್‌ಡಿಕೆ

ಸಂಕ್ರಾಂತಿ ಬಳಿಕ ಪಕ್ಷ ಬಲವರ್ಧನೆ : ಎಚ್‌ಡಿಕೆ

HD Kumaraswamy

ರಾಮನಗರ,ಡಿ.1- ಮುಂದಿನ ಸಂಕ್ರಾಂತಿಯಿಂದ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವುದಾಗಿ ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್‌‍ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ನಾನು ಕೇಂದ್ರದಲ್ಲಿ ಮಂತ್ರಿ ಆಗಿರುವುದರಿಂದ ಈಗ ಪಕ್ಷದ ಸಂಘಟನೆಯ ಜವಾಬ್ದಾರಿ ನಿಖಿಲ್‌ ಮೇಲಿದೆ ಎಂದರು.

ಈ ಕ್ಷೇತ್ರದ ಜನರು 87 ಸಾವಿರ ಮತಗಳನ್ನು ಪಕ್ಷಕ್ಕೆ ನೀಡಿದ್ದಾರೆ. ಕಾರ್ಯಕರ್ತರು ಆತಸ್ಥೈರ್ಯ ಕಳೆದುಕೊಂಡಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ತಕ್ಕ ಉತ್ತರ ಕೊಡುತ್ತೇವೆ. ನಮ ಪಕ್ಷದ ಶಾಸಕರು, ಮಾಜಿ ಶಾಸಕರು ಅಚ್ಚುಕಟ್ಟಾಗಿ ಚುನಾವಣೆ ಮಾಡಿದ್ದಾರೆ. ಮುಂದೆ ಈ ಪಕ್ಷ ಅಧಿಕಾರಕ್ಕೆ ತರಲು ಅವರಲ್ಲಿ ವಿಶ್ವಾಸ ಮೂಡಿದೆ. ನಿಖಿಲ್‌ ನೇತೃತ್ವದಲ್ಲಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ಉಳಿದಿದ್ದರೆ ಒಂದು ಕಡೆ ಬೆಳೆಸಿದ ಅಭಿಮಾನಿಗಳು, ಇನ್ನೊಂದು ದೇವರ ಅನುಗ್ರಹದಿಂದ. ನಮನ್ನು ಅವರು ಟೂರಿಂಗ್‌ ಟಾಕೀಸ್‌‍ ಎನ್ನುತ್ತಾರೆ. ಯಾವುದಾದರೂ ಎರಡು ಜಿಲ್ಲೆಯಲ್ಲಿ ನಿಂತು ಗೆಲ್ಲುವ ತಾಕತ್ತು ಇರುವುದು ಜೆಡಿಎಸ್‌‍ಗೆ ಮಾತ್ರ ಎಂದು ತಿಳಿಸಿದರು.

ಕಾಂಗ್ರೆಸ್‌‍ ನಾಯಕರಿಗೆ ಭಯ :
ಕಾಂಗ್ರೆಸ್‌‍ ಅಭ್ಯರ್ಥಿ ಈ ಉಪಚುನಾವಣೆಯಲ್ಲಿ ಏನೇನು ನಾಟಕವಾಡಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಈಗಲೂ ಕಾಂಗ್ರೆಸ್‌‍ ನಾಯಕರಿಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಭಯ ಇದೆ ಎಂದರು.
ರಾಮನಗರದಿಂದ ಜೆಡಿಎಸ್‌‍ ಖಾಲಿ ಮಾಡಿಸಿದ್ದೇನೆ ಎಂದವರಿಗೆ ಉತ್ತರ ಕೊಡುತ್ತೇನೆ.

ಮುಂದಿನ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕೂ ಸ್ಥಾನವನ್ನು ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌‍ ಗೆಲ್ಲುತ್ತದೆ. ನಮನ್ನ ಅಷ್ಟು ಸುಲಭವಾಗಿ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್‌ ರಾಜಕೀಯ ಇಲ್ಲಿಂದಲೇ ಆರಂಭ, ಇಲ್ಲಿಯೇ ಅಂತ್ಯ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್‌ ಬರುತ್ತೆ ಎಂದು ಸಚಿವರು ಶಪಥ ಮಾಡಿದರು.

RELATED ARTICLES

Latest News