ಬೆಂಗಳೂರು ಮೇ 16 : ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರಿಗೆ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ ಜಾಮೀನು ನೀಡಬೇಕೆಂದು ಕೋರಿ ಶಾಸಕ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆನಡೆಸಿದ 42ನೇ ಎಸಿ ಎಮ್ ಎಂ ನ್ಯಾಯಾಲಯದ ನ್ಯಾಯಾಧೀಶರು ವಾದ ಪ್ರತಿವಾದಗಳನ್ನು ಆಲಿಸಿ, ನಾಳೆ ಮಧ್ಯಾಹ್ನದವರೆಗೆ ಮಧ್ಯಂತರ ಜಾಮೀನು ನೀಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು
5ಲಕ್ಷ ಬಾಂಡ್ ಒದಗಿಸಬೇಕು ಸೇರಿದಂತೆ ಹಲವು ಶರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ
ರೇವಣ್ಣ ಅವರು ಪ್ರಭಾವಿ ರಾಜಕೀಯ ಮುಖಂಡರಾಗಿದ್ದು ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ನೀಡಬಾರದು. ಅವರನ್ನು ಎಸ್ಐಟಿ ವಶಕ್ಕೆ ನೀಡಬೇಕೆಂದು ಸರ್ಕಾರಿ ಪರ ವಕೀಲರಾದ ಜಾಯ್ನ ಕೊಟಾರಿಯವರು ವಾದ ಮಂಡಿಸಿದರು
ಈ ಪ್ರಕರಣದಲ್ಲಿ ಜಾಮೀನು ಪಡೆಯಬಹುದಾದಂತಹ ಸೆಕ್ಷನ್ಗಳನ್ನ ಹಾಕಲಾಗಿದೆ ಒಂದು ಪ್ರಕರಣದಲ್ಲಿ ಈಗಾಗಲೇ ನಮ್ಮ ಕಕ್ಷಿದಾರರು ಜಾಮೀನು ಪಡೆದಿದ್ದಾರೆ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಅವರಿಗೆ ಜಾಮೀನು ನೀಡಬೇಕೆಂದು ರೇವಣ್ಣ ಪರ ವಕೀಲರು ಪ್ರಬಲವಾದ ಮಂಡಿಸಿದರು
ಜಾಮೀನು ನೀಡಬಹುದಾದಂತಹ ಸೆಕ್ಷನ್ಗಳನ್ನ ಹಾಕಿರುವಾಗ ಜಾಮೀನಿಗೆ ಆಕ್ಷೇಪ ಸಲ್ಲಿಸುವುದು ಸರಿಯಾದ ಕ್ರಮ ಅಲ್ಲ ಎಂದು ರೇವಣ್ಣ ಪರ ವಕೀಲರು ಹೇಳಿದರು ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಮಧ್ಯಂತರ ಜಾಮೀನು, ಮಂಜೂರು ಮಾಡಿದರು