Saturday, October 5, 2024
Homeರಾಜ್ಯಅಪಹರಣ-ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ರಿಲೀಫ್ ಸಿಕ್ಕ ಬೆನ್ನಲ್ಲೇ ರೇವಣ್ಣಗೆ ಹೊಸ ಸಂಕಷ್ಟ ಶುರು

ಅಪಹರಣ-ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ರಿಲೀಫ್ ಸಿಕ್ಕ ಬೆನ್ನಲ್ಲೇ ರೇವಣ್ಣಗೆ ಹೊಸ ಸಂಕಷ್ಟ ಶುರು

ಬೆಂಗಳೂರು,ಮೇ21- ಮಹಿಳೆಯ ಅಪಹರಣ, ಲೈಂಗಿಕ ದೌರ್ಜನ್ಯ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಎದುರಾಗಿದೆ.

ಮೈಸೂರು ಜಿಲ್ಲೆ ಕೆ.ಆರ್‌.ನಗರ ಹಾಗೂ ಹಾಸನದ ಹೊಳೆನರಸೀಪುರದ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ಹಾಗೂ 42ನೇ ಎಸಿಎಂಎಂ ನ್ಯಾಯಾಲಯ ಎಚ್‌.ಡಿ.ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ದಳ(ಎಸ್‌‍ಐಟಿ) ಎಚ್‌.ಡಿ.ರೇವಣ್ಣಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ವಿಶೇಷ ಮೇಲನವಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಪಡೆದು ಬಂಧನದ ಭೀತಿಯಿಂದ ಪಾರಾಗಿದ್ದ ರೇವಣ್ಣಗೆ ಎಸ್‌‍ಐಟಿಯ ಈ ನಿರ್ಧಾರ ಮತ್ತೆ ಕಾನೂನಿನ ಸಂಕೋಲೆಯನ್ನು ಬಿಗಿಗೊಳಿಸಿದೆ.

ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಎಸ್‌‍ಐಟಿ ಅರ್ಜಿ ಸಲ್ಲಿಸಿದ್ದು, ಈ ಬಾರಿ ಖ್ಯಾತ ವಕೀಲ ರವಿವರ್ಮ ಕುಮಾರ್‌ ಅವರು ಎಸ್‌‍ಐಟಿ ಪರ ವಾದ ಮಂಡಿಸಲಿದ್ದಾರೆ. ಹೀಗಾಗಿಯೇ ಸರ್ಕಾರ ಸೋಮವಾರ ರವಿವರ್ಮ ಕುಮಾರ್‌ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕ(ಎಸ್‌‍ಪಿಪಿ)ರನ್ನಾಗಿ ನೇಮಿಸಿತ್ತು. ಇನ್ನು ರೇವಣ್ಣ ಪರವಾಗಿ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸುವ ಸಾಧ್ಯತೆ ಇದೆ.

ತಮ್ಮ ವಿರುದ್ಧ ಎಸ್‌‍ಐಟಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ಮೇಲನವಿ ಸಲ್ಲಿಸಿದ್ದಾರೆ. ಇದರ ಜೊತೆಗೆ ಎಸ್‌‍ಐಟಿ ಕೆಳಹಂತದ ನ್ಯಾಯಾಲಯ ನೀಡಿರುವ ಜಾಮೀನು ಪ್ರಶ್ನಿಸಿ ಮೇಲನವಿ ಸಲ್ಲಿಸಿದ್ದಾರೆ. ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್‌ಗೆ ಎಸ್‌‍ಐಟಿ ಅರ್ಜಿ ಸಲ್ಲಿಸಿದೆ.

ಪ್ರಕರಣವೇನು?:
ನನ್ನ ತಾಯಿ ಮೇಲೆ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಮಾಡಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ. ಎಚ್‌‍.ಡಿ.ರೇವಣ್ಣ ಕೂಡ ಲೈಂಗಿಕ ಕಿರುಕುಳ ನೀಡಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರು, ಸಹಕರಿಸದಿದ್ದರೆ ತನ್ನ ಗಂಡನ ಕೆಲಸವನ್ನು ಕಸಿದುಕೊಳ್ಳುವುದಾಗಿಯೂ ಮತ್ತು ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ತಾಯಿಗೆ ಬೆದರಿಕೆ ಹಾಕುತ್ತಿದ್ದನು. ನಾವು ದೂರು ದಾಖಲಿಸಿದ ನಂತರ ತನ್ನ ತಂದೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸಂತ್ರಸ್ತೆ ಮಹಿಳೆ ತಾನು ಅನುಭವಿಸಿರುವ ಕಷ್ಟಗಳನ್ನು ವಿವರಿಸಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ನಿವಾಸದಲ್ಲಿ ಪ್ರಜ್ವಲ್‌ ರೇವಣ್ಣ ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ವಿಶೇಷ ತನಿಖಾ ತಂಡದ (ಎಸ್‌‍ಐಟಿ) ಮೂಲಗಳ ಪ್ರಕಾರ, ಅವರು ಘಟನೆಗಳನ್ನು ವಿವರಿಸುವ ವಿವರವಾದ ಸಾಕ್ಷ್ಯವನ್ನು ನೀಡಿದ್ದಾರೆ ಎನ್ನಲಾಗಿದೆ.

2020 ಮತ್ತು 2021ರ ನಡುವೆ, ಪ್ರಜ್ವಲ್‌ ರೇವಣ್ಣ ಅವರು ವಿಡಿಯೋ ಕರೆಗಳಿಗೆ ಉತ್ತರಿಸುವಂತೆ ಮಾಡಿದ್ದರು. ತನಗೆ ಮತ್ತು ತನ್ನ ತಾಯಿಗೆ ತೊಂದರೆ ಮಾಡುವ ಬೆದರಿಕೆ ಹಾಕಿ ನನ್ನ ಬಟ್ಟೆಗಳನ್ನು ಬಿಚ್ಚುವಂತೆ ಮಾಡಿದ್ದಾರೆ. ಘಟನೆಗಳ ಬಗ್ಗೆ ತಿಳಿದ ನಂತರ ನಮ್ಮ ಕುಟುಂಬವು ನಮಗೆ ಬೆಂಬಲ ನೀಡಿತು. ಹೀಗಾಗಿ ನಾವು ದೂರು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಿರಂತರ ಕಿರುಕುಳವು ತನ್ನ ಕುಟುಂಬಕ್ಕೆ ದೊಡ್ಡ ನಷ್ಟವನ್ನು ಉಂಟುಮಾಡಿದೆ. ನಾವು ನಮ್ಮ ಮೊಬೈಲ್‌ ನಂಬರ್‌ಗಳನ್ನು ಬದಲಿಸಬೇಕಾಯಿತು ಎಂದು ಮಹಿಳೆ ಎಸ್‌‍ಐಟಿಗೆ ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ತಮ್ಮ ಮನೆಯಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ. ರೇವಣ್ಣ ಅವರು ಹಣ್ಣು ಕೊಡುವ ನೆಪದಲ್ಲಿ ಮಹಿಳಾ ಕೆಲಸಗಾರರಿಗೆ ಲೈಂಗಿಕ ಕಿರುಕುಳ ನೀಡುವುದು ನಿಜ. ಪ್ರಜ್ವಲ್‌ ನನ್ನ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಸದ್ಯಕ್ಕೆ ಈ ಘಟನೆಗಳ ಬಗ್ಗೆ ಕೇವಲ ಮೂರು ಜನರು ಹೊರಬಂದು ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಇನ್ನೂ ಮೂರು ಕೆಲಸಗಾರರರು ಈ ಬಗ್ಗೆ ಮಾತಾಡಿಲ್ಲ. ಅವರು ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಘಟನೆ ನಡೆದು ಎರಡು ವರ್ಷಗಳ ನಂತರ ತಮ್ಮ ಜಮೀನನ್ನು ಮಾರಾಟ ಮಾಡುವಂತೆ ಮಾಡಲಾಯಿತು. ನನ್ನ ತಾಯಿ ನಾಲ್ಕೈದು ತಿಂಗಳಿಗೊಮೆ ಮನೆಗೆ ಬರುತ್ತಿದ್ದರು. ಅವರಿಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಆಕೆ ನಮಗೆ ತಡರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಮಾತ್ರ ಕರೆ ಮಾಡುತ್ತಿದ್ದರು. ಆದರೂ ನಮೊಂದಿಗೆ ಅಷ್ಟೇನೂ ಮಾತನಾಡುತ್ತಿರಲಿಲ್ಲ. ಅವರು ನನ್ನ ತಾಯಿಯನ್ನು ಗುಲಾಮಳಂತೆ ನಡೆಸಿಕೊಳ್ಳುತ್ತಿದ್ದರು. ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

Latest News