ಬೆಂಗಳೂರು, ಜ.5- ಶೀತಗಾಳಿ ಪ್ರಭಾವದಿಂದ ನಗರದಲ್ಲಿ ಪಿಂಕ್ ಐ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾಗರಿಕರು ಎಚ್ಚರಿಕೆ ವಹಿಸದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ.
ಶೀತಗಾಳಿ ಪ್ರಭಾವದಿಂದ ಹೆಚ್ಚುತ್ತಿರುವ ತೇವಾಂಶದ ವಾತಾವರಣದಿಂದಾಗಿ ಮದ್ರಾಸ್ ಐ ಕಣ್ಣಿನ ಸೋಂಕು ಹೆಚ್ಚಳವಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.
ಚಳಿ ವಾತಾವರಣದಿಂದ ಉತ್ಪತ್ತಿಯಾಗುವ ವೈರಾಣು ಕಣ್ಣಿನಲ್ಲಿ ಉರಿ ಅಥವಾ ಸೋಂಕು ಸೃಷ್ಟಿಸುತ್ತದೆ. ಧೂಳು, ಅಲರ್ಜಿಗಳು, ಮಾಲಿನ್ಯ ಇವುಗಳಿಂದಲೂ ಈ ಅಲರ್ಜಿ ಸಮಸ್ಯೆ ಬರಬಹುದು. ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವ ಸೋಂಕು ಇದಾಗಿದೆ.
ಕಣ್ಣುಗಳು ಕೆಂಪಾಗುವುದು, ಸುಡುವಂತಾಗುವುದು, ಬೆಳಕಿಗೆ ನೋವು, ಕಣ್ಣು ಮಿಡಿಯುವುದು ಈ ಸೋಂಕಿನ ಲಕ್ಷಣಗಳಾಗಿವೆ.
ಈ ಸೋಂಕು ಗುಣಮುಖವಾಗುವವರೆಗೂ ಸಾಬೂನು ಬಳಸಿ ಕೈಗಳನ್ನು ಪದೇಪದೇ ತೊಳೆಯುವುದು. ಕಣ್ಣಿನ ವೈದ್ಯರು ಸೂಚಿಸಿದ ಔಷಧಿ ಅಥವಾ ಐಡ್ರಾಪ್‌್ಸ ಅನ್ನು ನಿಯಮಿತವಾಗಿ ಬಳಸಿ ಕಣ್ಣುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಬಳಸಿದ ಟಿಶ್ಯೂ ಇಲ್ಲವೇ ಕಾಟನ್ ಅನ್ನು ತಕ್ಷಣ ಬೀಸಾಡುವುದು. ಸೋಂಕಿತ ವ್ಯಕ್ತಿಯಿಂದ ಇತರರು ಸ್ವಲ್ಪ ದೂರವಿರಬೇಕು.
ರೋಗಿ ಗುಣಮುಕ್ತರಾಗುವವರೆಗೂ ಸಾರ್ವಜನಿಕ ಸ್ಥಳಗಳಿಗೆ ಹೋಗಬಾರದು. ಕಣ್ಣಿಗೆ ವಿಶ್ರಾಂತಿ ಇಲ್ಲದೆ ಮೊಬೈಲ್ ಅಥವಾ ಟಿವಿ ವೀಕ್ಷಣೆ ಬೇಡ. ಅನಗತ್ಯ ಕಣ್ಣುಗಳನ್ನು ಉಜ್ಜುವುದು ಮುಟ್ಟುವುದು ಮಾಡಬಾರದು.ಸೋಂಕಿತರು ಬಳಸಿದ ಮೇಕಪ್, ಕಾಜಲ್, ಲೆನ್‌್ಸ ಟವಲ್ ಬಳಕೆ ತಪ್ಪಿಸಬೇಕು. ಮನೆ ಮದ್ದು ಬೇಡಾ ವೈದ್ಯರ ಸಲಹೆ ಇಲ್ಲದೆ ಔಷಧಿ ಬಳಸಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
