Saturday, January 10, 2026
Homeಆರೋಗ್ಯ / ಜೀವನಶೈಲಿಪ್ಯಾಕೆಟ್‌ ಹಾಲಿನಿಂದ ಕ್ಯಾನ್ಸರ್‌ ಅಪಾಯ..!

ಪ್ಯಾಕೆಟ್‌ ಹಾಲಿನಿಂದ ಕ್ಯಾನ್ಸರ್‌ ಅಪಾಯ..!

Risk Of Cancer From Packaged Foods?

ಪಾಟ್ನಾ,ಜ.10- ಪ್ಯಾಕ್‌ ಮಾಡಿದ ಆಹಾರ ಸೇವನೆಯಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದ್ದು, ಜನಸಾಮಾನ್ಯರು ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೇಂದು ನ್ಯೂಟ್ರಿನೆಟ್‌-ಸ್ಯಾಂಟೆ ಅಧ್ಯಯನದ ಸಂಶೋಧನೆ ತಿಳಿಸಿದೆ.

ಕ್ಯಾನ್ಸರ್‌ ನಡುವಿನ ಸಂಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸ್ಯಾಂಟೆ, ಕೆಲವು ಆಹಾರ ಸಂರಕ್ಷಕಗಳ ಅತಿಯಾದ ಸೇವನೆಯು ಕ್ಯಾನ್ಸರ್‌ ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಸೂಚಿಸಿದೆ.

ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳು, ಮೊಹರು ಮಾಡಿದ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುವ ಆಹಾರಗಳು ಕ್ಯಾನ್ಸರ್‌ ಅಥವಾ ಇತರ ಮಾರಣಾಂತಿಕ ಕಾಯಿಲೆಗಳನ್ನು ಪ್ರಚೋದಿಸಬಹುದೇ? ಅಂತಹ ಆಹಾರಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕೇ ಎಂಬ ಪ್ರಶ್ನೆಯನ್ನು ಸಂಶೋಧನೆ ಹುಟ್ಟುಹಾಕಿವೆ.

ಸಂದರ್ಶನವೊಂದರಲ್ಲಿ ಈ ಕುರಿತು ಕಳವಳ ವ್ಯಕ್ತಪಡಿಸಿರುವ ಕ್ಯಾನ್ಸರ್‌ ತಜ್ಞ ಡಾ.ಬಿ.ಬಿ.ಸಿಂಗ್‌, ಈ ಹಿಂದೆ ಇದೇ ರೀತಿಯ ಅಧ್ಯಯನಗಳನ್ನು ನಡೆಸಲಾಗಿದೆ. ಆದರೆ ಯಾವುದೇ ಪ್ರಯೋಗಾಲಯವು ಪ್ಯಾಕ್‌ ಮಾಡಿದ ಆಹಾರ ಸೇವನೆಯು ನೇರವಾಗಿ ಕ್ಯಾನ್ಸರ್‌ ಅಥವಾ ಇತರ ಪ್ರಮುಖ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸಾಬೀತುಪಡಿಸುವ ನಿರ್ಣಾಯಕ ಪುರಾವೆಗಳನ್ನು ಇಲ್ಲಿಯವರೆಗೆ ನೀಡಿಲ್ಲ ಎಂದು ಹೇಳಿದ್ದಾರೆ.

ಆದಾಗ್ಯೂ ಕ್ಯಾನ್ಸರ್‌ ರೋಗಿಗಳಲ್ಲಿ ಪ್ಯಾಕ್‌ ಮಾಡಿದ ಆಹಾರ ಗ್ರಾಹಕರ ಪ್ರಮಾಣ ಹೆಚ್ಚಿದೆ ಎಂದು ಕೆಲವು ಸಂಶೋಧನೆಗಳು ತೋರಿಸಿವೆ.ಪ್ಯಾಕ್‌ ಮಾಡಿದ ಆಹಾರವು ಹಾನಿಕಾರಕವಾಗಿದೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ, ವಿಶೇಷವಾಗಿ ಜಠರ ಕರುಳಿನ ಅಸ್ವಸ್ಥತೆಗಳಿಗೆ ಕಾರಣವಾಗಬಹುದು ಎಂಬುದರಲ್ಲಿ ಸಂದೇಹವಿಲ್ಲ ಎಂದು ಡಾ. ಸಿಂಗ್‌ ಹೇಳಿದ್ದಾರೆ.

ಜ್ಯೂಸ್‌‍, ಹಾಲು ಮತ್ತು ಬ್ರೆಡ್‌ನಂತಹ ಆಹಾರಗಳು ತಾಜಾವಾಗಿ ಸೇವಿಸಿದಾಗ ಪ್ರಯೋಜನಕಾರಿ. ಆದರೆ ಪ್ಯಾಕ್‌ ಮಾಡಿದಾಗ ಹಾನಿಕಾರಕವಾಗಬಹುದು ಎಂದು ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಹಾಲನ್ನು ಉಲ್ಲೇಖಿಸುತ್ತಾ, ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುವ ಹಾಲು ಹಾನಿಕಾರಕವಾಗಬಹುದು ಮತ್ತು ಆದರ್ಶಪ್ರಾಯವಾಗಿ ಬಾಟಲಿಗಳಲ್ಲಿ ಮಾರಾಟ ಮಾಡಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.

RELATED ARTICLES

Latest News