Tuesday, July 29, 2025
Homeಅಂತಾರಾಷ್ಟ್ರೀಯ | Internationalಬೀಜಿಂಗ್‌ನಲ್ಲಿ ಭಾರೀ ಮಳೆ-ಪ್ರವಾಹಕ್ಕೆ 34 ಮಂದಿ ಬಲಿ

ಬೀಜಿಂಗ್‌ನಲ್ಲಿ ಭಾರೀ ಮಳೆ-ಪ್ರವಾಹಕ್ಕೆ 34 ಮಂದಿ ಬಲಿ

Heavy rain, flooding kill 34 in Beijing

ತೈಶಿಟುನ್‌,ಜು.29-ಚೀನಾದ ರಾಜಧಾನಿ ಬೀಜಿಂಗ್‌ ಮತ್ತು ಅಕ್ಕಪಕ್ಕದ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ.ಬೀಜಿಂಗ್‌ನ ತೀವ್ರ ಹಾನಿಗೊಳಗಾದ ಮಿಯುನ್‌ ಜಿಲ್ಲೆಯಲ್ಲಿ 28 ಮಂದಿ ಮತ್ತು ಯಾಂಕಿಂಗ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪ್ರಸಾರಕ ಸಿಸಿಟಿವಿ ತಿಳಿಸಿದೆ. ಚೀನಾದ ರಾಜಧಾನಿಯಲ್ಲಿ ರಾತ್ರಿಯಿಡೀ ಹೆಚ್ಚಿನ ಮಳೆಯಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು,ಹೆಬೈ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವರು ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ.

ಹವಮಾನ ವ್ಯತಿರಿಕ್ತದಿಂದ ಕನಿಷ್ಠ 34 ಮಂದಿ ಮೃತಪಟ್ಟಿದ್ದು ಸುಮಾರು 8 ಜನರು ಇನ್ನು ನಾಪತ್ತೆಯಾಗಿದ್ದಾರೆ.ಲುವಾನ್‌ಪಿಂಗ್‌‍ ಕೌಂಟಿಯ ಗಡಿಯಲ್ಲಿರುವ ಮಿಯುನ್‌ ಜಿಲ್ಲೆಯಲ್ಲಿ ಭಾರೀ ಪ್ರವಾಹದಿಂದಾಗಿ ಕಾರುಗಳು ಕೊಚ್ಚಿ ಹೋಗಿದ್ದು, ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಬೀಜಿಂಗ್‌ನ ಗ್ರಾಮೀಣ ಮಿಯುನ್‌ ಜಿಲ್ಲೆಯ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಿದ ಕಾರಣ ಬೀಜಿಂಗ್‌ನ ಹೊರ ಜಿಲ್ಲೆಗಳು ಮತ್ತು ನೆರೆಯ ನಗರವಾದ ಟಿಯಾಂಜಿನ್‌ನಿಂದ 40 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು, ನದಿಗಳ ಮಟ್ಟ ಹೆಚ್ಚಾದಂತೆ ಮತ್ತು ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ನದಿಗಳ ಕೆಳಭಾಗದಿಂದ ದೂರವಿರಲು ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ.

ಚೀನಾದ ಪ್ರಧಾನಮಂತ್ರಿ ಲಿ ಕ್ವಿಯಾಂಗ್‌ ಅವರು ಮಿಯುನ್‌ನಲ್ಲಿ ಭಾರೀ ಮಳೆ ಮತ್ತು ಪ್ರವಾಹವು ಗಂಭೀರ ಸಾವು ನೋವುಗಳಿಗೆ ಕಾರಣವಾಯಿತು ಎಂದು ಹೇಳಿದರು.ಮಧ್ಯ ಬೀಜಿಂಗ್‌ನಿಂದ ಈಶಾನ್ಯಕ್ಕೆ ಸುಮಾರು 100 ಕಿಲೋಮೀಟರ್‌ ದೂರದಲ್ಲಿರುವ ತೈಶಿಟುನ್‌ ಪಟ್ಟಣದಲ್ಲಿ ಮರಗಳು ಬುಡಮೇಲಾಗಿದ್ದು ಬೀದಿಗಳು ನೀರಿನಿಂದ ಆವೃತವಾಗಿದ್ದವು, ಹಲವು ಮನೆಗಳಿಗೆ ಹಾನಿಯಾಗಿವೆ.

RELATED ARTICLES

Latest News