ಬೆಂಗಳೂರು,ಅ.10- ನಗರದಲ್ಲಿ ನಿನ್ನೆ ಸುರಿದ ಭಾರಿ ಮಳೆ ಸಂದರ್ಭದಲ್ಲಿ ಗರ್ಭಿಣಿ ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಬಳಿಯ ರಸ್ತೆ ಮಳೆ ನೀರಿನಿಂದ ಸಂಪೂರ್ಣ ಮುಳುಗಿ ಹೋಗಿತ್ತು.
ಸುಮಾರು 50 ಮೀಟರ್ ಉದ್ಧದ ರಸ್ತೆಯಲ್ಲಿ ರಾಜಕಾಲುವೆ ನೀರು ತುಂಬಿ ಹರಿದು ಅವಾಂತರ ಸೃಷ್ಟಿಯಾಗಿತ್ತು.
ಈ ಅವಾಂತರದಲ್ಲಿ 15ಕ್ಕೂ ಅಧಿಕ ವಾಹನದಲ್ಲಿದ್ದ 50 ಹೆಚ್ಚು ಜನ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗಿ ವಾಹನದಲ್ಲಿದ್ದವರು ಪರದಾಡುವಂತಾಗಿತ್ತು.
ಇದೇ ಸಮಯದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಯಿಂದ 50ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದ್ದು, ದೇವರಂತೆ ಬಂದು ಜೀವ ಕಾಪಾಡಿದ ಅಗ್ನಿಶಾಮಕ ದಳದವರನ್ನು ಜನ ಕೊಂಡಾಡಿದ್ದಾರೆ. ಸತತ ಹಲವು ಗಂಟೆಗಳ ಕಾಲ ಎಡಬಿಡದೆ ಸುರಿದ ಮಳೆಯಿಂದ ನಗರದ ಹಲವೆಡೆ ಮನೆಗಳು, ಅಂಡರ್ ಪಾಸ್ ಗಳು ಜಲಾವೃತಗೊಂಡಿದ್ದವು.
ಬಿಗ್‍ಬಾಸ್‍ನಿಂದ ಹೊರಬಂದು ಪ್ರದೀಪ್ ಈಶ್ವರ್ ಹೇಳಿದ್ದೇನು..?
ಲೀ ಮೆರಿಡಿಯನ್ ಅಂಡರ್ ಪಾಸ್ ನೀರಿನಿಂದ ತುಂಬಿ ಹೋಗಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿತ್ತು. ಮಳೆಯಿಂದ ಲೀ ಮೆರಿಡಿಯನ್ ಅಂಡರ್ ಪಾಸ್ ಜಲಾವೃತಗೊಂಡಿರುವುದರಿಂದ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ.
ಇತ್ತೀಚಿಗಷ್ಟೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೆಡಿ ಮಾಡಲಾಗಿದ್ದ ಅಂಡರ್ ಪಾಸ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಲಾಗಿರುವ ರೂ-ï ಟಾಪ್ ಹಾಕಿದ್ದರು ನೀರು ತುಂಬಿರುವುದರಿಂದ ಬಿಬಿಎಂಪಿಯವರ ಮಾನ ಹರಾಜು ಹಾಕಿದಂತಾಗಿದೆ.
ಇನ್ನೂ ಮೂರು ದಿನ ಭಾರಿ ಮಳೆ: ಹವಾಮಾ ಇಲಾಖೆಯವರು ನಗರದಲ್ಲಿ ಅಲರ್ಟ್ ಘೋಷಣೆ ಮಾಡಿದ್ದು, ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ.
ಸೈಬರ್ ಕ್ರೈಂ ಪ್ರಕರಣಗಳ ಕಾಲಮಿತಿ ತನಿಖೆಗೆ ಕಟ್ಟುನಿಟ್ಟಿನ ಕ್ರಮ : ದಯಾನಂದ
ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ ಇದ್ದು, ಸಿಲಿಕಾನ್ ಸಿಟಿಯಲ್ಲಿ ಇನ್ನೆರಡು ದಿನ ಮೋಡ ಮುಸುಕಿನ ವಾತಾವರಣ ಮುಂದುವರೆಯಲಿದೆ. ಸಂಜೆಯಾಗ್ತಿದ್ದಂತೆ ಗುಡುಗು ಸಹಿತ ಮಳೆ ಮುನ್ಸೂಚನೆ ನೀಡಲಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ
ಕೆಂಗೇರಿ – 9.45 ಸೆಂ.ಮೀ
ಗೊಲ್ಲಹಳ್ಳಿ – 8.65 ಸೆಂ.ಮೀ
ಆರ್.ಆರ್.ನಗರ (ವಾರ್ಡ್ -1) – 7.8 ಸೆಂ.ಮೀ
ಆರ್.ಆರ್.ನಗರ (ವಾರ್ಡ್ -2) – 7.65 ಸೆಂ.ಮೀ
ಕೊಟ್ಟಿಗೆಪಾಳ್ಯ – 7.6 ಸೆಂ.ಮೀ
ಏರ್ ಪೋರ್ಟ್ (1) – 7.5 ಸೆಂ.ಮೀ
ನಾಯಂಡನಹಳ್ಳಿ – 7.05 ಸೆಂ.ಮೀ
ಬಿಳೇಕಹಳ್ಳಿ (ಮಹದೇವಪುರ ಝೋನ್ ) – 7 ಸೆಂ.ಮೀ
ರಾಜ್ ಮಹಲ್ ಗುಟ್ಟಹಳ್ಳಿ – 6.6 ಸೆಂ.ಮೀ
ನಾಗಪುರ (ವೆಸ್ಟ್ ಝೋನï) – 6.5 ಸೆಂ.ಮೀ
ಮಾರತಹಳ್ಳಿ ( ಈಸ್ಟ್ ಝೋನ್ ) – 6.4 ಸೆಂ.ಮೀ
ಅರಕೆರೆ ( ಬೊಮ್ಮನಹಳ್ಳಿ ಝೋನï) 6.3 ಸೆಂ.ಮೀ
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 6.3 ಸೆಂ.ಮೀ
ಕೋರಮಂಗಲ – 6.1 ಸೆಂ.ಮೀ
ವಿದ್ಯಾಪೀಠ – 6.05 ಸೆಂ.ಮೀ
ದಯಾನಂದನಗರ -6.05 ಸೆಂ.ಮೀ