Sunday, August 17, 2025
Homeಬೆಂಗಳೂರುನಾಳೆ ಲೋಕಾರ್ಪಣೆಗೊಳ್ಳಲಿದೆ ಹೆಬ್ಬಾಳ ವಿಸ್ತರಿತ ಫ್ಲೈಓವರ್‌

ನಾಳೆ ಲೋಕಾರ್ಪಣೆಗೊಳ್ಳಲಿದೆ ಹೆಬ್ಬಾಳ ವಿಸ್ತರಿತ ಫ್ಲೈಓವರ್‌

Hebbal expanded flyover to be inaugurated tomorrow

ಬೆಂಗಳೂರು,ಆ.17-ವಾಹನ ಸಂಚಾರ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಹೆಬ್ಬಾಳ ವಿಸ್ತರಿತ ಫ್ಲೈಓವರ್‌ ನಾಳೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 700 ಮೀಟರ್‌ ಉದ್ದದ ಫ್ಲೈಓವರ್‌ಅನ್ನು ಸುಮಾರು 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ ನಾಳೆ ಬೆಳಿಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಉದ್ಘಾಟಿಸಲಿದ್ದಾರೆ.

ಕೆ.ಆರ್‌ ಪುರಂ ಕಡೆಯಿಂದ ಬರುವವರು ಅರಮನೆ ರಸ್ತೆಗೆ ಹೋಗಲು ವಾಹನ ಸವಾರರಿಗೆ ಅನುಕೂಲವಾಗಲಿದೆ.ಈ ಕಾಮಗಾರಿ ಕಳೆದ 2023ರಲ್ಲಿ ಆರಂಭವಾಗಿ ಒಂದೂವರೆ ವರ್ಷಗಳ ಬಳಿಕ ಪೂರ್ಣಗೊಂಡಿದೆ. ಇದೀಗ ಉದ್ಘಾಟನೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಸಿಬ್ಬಂದಿ ಫ್ಲೈಓವರ್‌ ರ್ಯಾಂಪ್‌ಗೆ ಹೂವುಗಳ ಸರಮಾಲೆ ಹಾಕಿ ಸಿದ್ಧತೆ ಮಾಡುತ್ತಿದ್ದಾರೆ. ಇನ್ನು ಬ್ಯಾಟರಾಯನಪುರದಿಂದ ಬರುವವರು ಸತ್ತಿ ಬಳಸಿ ಬಳಸಿ ಫ್ಲೈಓವರ್‌ ಮೇಲೇರಿ ಬೆಂಗಳೂರು ಕಡೆಗೆ ಬರಬೇಕಾಗಿದ್ದು ಈಗ ನೇರವಾಗಿ ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಗೆ ಬಿಡುವ ಸಾಧ್ಯತೆ ಇದೆ.ಪ್ರಸ್ತುತ ಈ ಫ್ಲೈಓವರ್‌ನಿಂದ ಹೆಬ್ಬಾಳ ಭಾಗದಲ್ಲಿ ಟ್ರಾಫಿಕ್‌ ಸಮಸ್ಯೆ ಸ್ವಲ್ಪ ನಿವಾರಣೆಯಾಗಲಿದೆ.

RELATED ARTICLES

Latest News