Sunday, September 8, 2024
Homeಮನರಂಜನೆಮಾನಸಿಕ ಅಸ್ವಸ್ಥತೆಯಲ್ಲಿ ಅರಳಿದ ಪ್ರೀತಿ ಹೆಜ್ಜಾರು

ಮಾನಸಿಕ ಅಸ್ವಸ್ಥತೆಯಲ್ಲಿ ಅರಳಿದ ಪ್ರೀತಿ ಹೆಜ್ಜಾರು

ಜಾನೆಫ್ ಕೆನಡಿ,ಅಬ್ರಹಾಂ ಲಿಂಕನ್ ಹೀಗೆ ಕೆಲವು ಅಪರೂಪದ ಐತಿಹಾಸಿಕ ವ್ಯಕ್ತಿಗಳ ಜೀವನ ಕಥೆಗಳು ಹೆಚ್ಚು ಕಡಿಮೆ ಒಂದೇ ರೀತಿಯ ಸಾಮ್ಯತೆ ಇರುವ ಘಟನೆಗಳೊಂದಿಗೆ ಅಂತ್ಯವಾಗಿರುತ್ತದೆ. ಈ ರೀತಿಯ ಘಟನೆಗಳನ್ನ ಅಧ್ಯಯನ ಮಾಡಿ ನಿರ್ದೇಶಕ ಹರ್ಷಪ್ರಿಯ ಒಂದು ಕಾಲ್ಪನಿಕ ಕಥೆಗೆ ಪ್ರೀತಿಯ ಲೇಪನ ಹಚ್ಚಿ ಮೊದಲ ಪ್ರಯತ್ನದಲ್ಲಿ ಉತ್ತಮ ನಿರ್ದೇಶಕನಾಗುವ ಭರವಸೆ ಮೂಡಿಸಿದ್ದಾರೆ. ಅದು ಈ ವಾರ ತರೆಕಂಡ ಹೆಜ್ಜಾರು ಚಿತ್ರದ ಮೂಲಕ

ಹೆಜ್ಜಾರು ಎನ್ನುವ ಊರಲ್ಲಿ,1965 ರಲ್ಲಿ ಒಂದು ಅಪಘಾತವಾಗುತ್ತದೆ. ಅದರಲ್ಲಿ ಮೂರು ಜನ ಪ್ರಾಣ ಕಳೆದುಕೊಳ್ಳುತ್ತಾರೆ.1995 ಅಂದರೆ 30 ವರ್ಷ ಆದಮೇಲೆ ಅದೇ ಸ್ಥಳದಲ್ಲಿ ಅದೇ ರೀತಿ ಘಟನೆ ಸಂಭವಿಸುತ್ತದೆ. ಮೊದಲ ಘಟನೆಯಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ರಾಜಾರಾಮ್, ತನ್ನಂತೆ ನಾಯಕ ಭಗತ್ ಜೀವನದಲ್ಲಿ ನಡೆಯುತ್ತದೆ. ಇದನ್ನು ಅರಿತ ರಾಜಾರಾಮ್, ಭಗತ್ ಗೆ ಹೇಳಿದಾಗ ಮೊದಮೊದಲು ಆತ ನಂಬುವುದಿಲ್ಲ. ನಂಬದಿದ್ದಾಗ ಆಗುವ ಅನಾಹುತಗಳು ಚಿತ್ರದ ಕಥೆಯ ಕುತೂಹಲಕಾರಿ ಅಂಶಗಳು.

ಇಬ್ಬರು ವ್ಯಕ್ತಿಗಳ ಜೀವನದಲ್ಲಿ ನಡೆಯುವ ಪ್ಯಾರಲಲ್ ಕಥೆ ಪ್ರೇಕ್ಷಕರನ್ನ ಹೊಸದೊಂದು ಕಲ್ಪನೆಗೆ ಕೊಂಡೊಯ್ಯುತ್ತದೆ. ಇಲ್ಲಿಯತನಕ ಈ ರೀತಿಯ ಕಥೆಯನ್ನ ನಾವು ಎಂದೂ ನೋಡಿಲ್ಲ ಎಂಬ ಭಾವನೆ ಮೂಡಿಸುತ್ತದೆ. ಎರಡು ಕಾಲಘಟ್ಟಗಳಲ್ಲಿ ನಡೆಯುವ ಒಂದೇ ರೀತಿಯ ಅಪಘಾತಗಳು, ಅನುಹ್ಯವಾಗಿ ನಡೆಯುವ ಒಂದಿಷ್ಟು ಕೊಲೆಗಳು, ಅವುಗಳಿಗೆ ಯಾರು ಕಾರಣ ಎಂದು ಕೊನೆಯವರೆಗೂ ಯೋಚಿಸುವಷ್ಟು ಕಾಯ್ದುಕೊಂಡ ಸಸ್ಪೆನ್ಸ್, ನಾಯಕ ಭರತ್ ಮತ್ತು ನಾಯಕಿ ಜಾನಕಿ ನಡುವೆ ನಡೆಯುವ ಪ್ರೀತಿ, ಇವೆಲ್ಲವೂ ಹೆಜ್ಜಾರು ಕಥೆಯನ್ನು ಶ್ರೀಮಂತ ಗೊಳಿಸಿವೆ

ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವ ನಟ ಆಳ್ವೆ, ಎರಡು ಶೇಡ್ ಗಳಲ್ಲಿ ಗೋಚರವಾಗುತ್ತಾರೆ ಅದೇ ಸಿನಿಮಾದ ಪ್ರಮುಖ ಘಟ್ಟ. ಈ ಹಿಂದೆ ಧಾರವಾಹಿಗಳಲ್ಲಿ ಅಭಿನಯಿಸಿ ಅನುಭವ ಇರುವ ಇವರು ಪಾತ್ರದಲ್ಲಿ ಜೀವಿಸಿದ್ದಾರೆ. ಅದರ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲುತ್ತದೆ. ಅಷ್ಟರಮಟ್ಟಿಗೆ ಅವರಿಂದ ಅಭಿನಯವನ್ನು ತೆಗೆದಿದ್ದಾರೆ. ಹಾಗೆಯೇ ನಟಿ ಲಿಯೋನಿಲ್ಲಾ ಶ್ವೇತಾ ಡಿಸೋಜ ಕೂಡ ನಾಯಕನಿಗೆ ಸಾತ್ ಕೊಟ್ಟಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರ ಅಭಿನಯ ಕಥೆಗೆ ಬೇಕಾಗಿತ್ತು ಅನಿಸುತ್ತದೆ.

ಮೊದಲ ಬಾರಿಗೆ ಹೊಸದೊಂದು ರೂಪದಲ್ಲಿ ನಟ ನಿರ್ದೇಶಕ ನವೀನ್ ಕೃಷ್ಣ ಕಾಣಸಿಗುತ್ತಾರೆ. ಪ್ರೀತಿಯಲ್ಲಿ ಮಿಳಿತವಾದ ಗಟ್ಟಿಯಾದ ಕಂಟೆಂಟ್, ಸುಂದರವಾದ ದೃಶ್ಯ ಜೋಡಣೆ, ಎಲ್ಲಿಯೂ ಅಡಚಣೆ ಆಗದ ಸ್ಕ್ರೀನ್ ಪ್ಲೇ, ಅಚ್ಚುಕಟ್ಟಾದ ನಿರೂಪಣ ಶೈಲಿಯ ವಿಷಯ ಮಂಡನೆ, ಇವೆಲ್ಲವುಗಳನ್ನು ನಿಭಾಯಿಸುತ್ತಾ ಪ್ರೇಕ್ಷಕನಿಗೆ ಎಲ್ಲಿಯೂ ಬೋರಾಗದಂತೆ ನೋಡಿಕೊಂಡಿರುವ ರೀತಿ ಒಳ್ಳೆಯ ನಿರ್ಜೇಶನಕ್ಕೆ ಹಿಡಿದ ಕನ್ನಡಿ ಹೆಜ್ಜಾರು ಚಿತ್ರ. 

RELATED ARTICLES

Latest News