Monday, April 7, 2025
Homeಜಿಲ್ಲಾ ಸುದ್ದಿಗಳು | District Newsಶಿವಮೊಗ್ಗದಲ್ಲಿ ಹೆಜ್ಜೇನು ದಾಳಿ, 7 ಮಂದಿಗೆ ಗಾಯ

ಶಿವಮೊಗ್ಗದಲ್ಲಿ ಹೆಜ್ಜೇನು ದಾಳಿ, 7 ಮಂದಿಗೆ ಗಾಯ

Hejjenu attack in Shimoga, 7 people injured

ಶಿವಮೊಗ್ಗ,ಅ.27- ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿ ಅದರಲ್ಲಿ 7 ಜನರು ಗಾಯಗೊಂಡು ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ಈ ಘಟನೆ ನಡೆದಿದೆ. ಚಿಕ್ಕಪೇಟೆನಗರದ ಭಾಷಾ ಎಂಬುವವರ ಮನೆ ಸಮೀಪ ಸಂಜೆ 5 ಗಂಟೆ ಸುಮಾರಿಗೆ ಹೆಜ್ಜೇನು ದಾಳಿ ನಡೆಸಿದೆ

ಘಟನೆಯಲ್ಲಿ ಭಾಷಾ, ಅವರ ಪತ್ನಿ ಅಸ್ಮಾ , ಮಕ್ಕಳಾದ ಆರೀ-ಪ್ , ಅನೀ-ಪ್ , ಪಕ್ಕದ ಮನೆ ನಿವಾಸಿ ಯಾಸೀನï, ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬï, ಬಾಬಾ ಸಾಬ್ ಮೇಲೆ ದಾಳಿ ನಡೆಸಿದೆ.

ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್ ಸಾಬ್ (68) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಅದೇ ದಿನ ಮತ್ತೇ ರಾತ್ರಿ ಹೆಜ್ಜೇನು ಭಾಷಾ ಪುತ್ರ ಆರೀಫ್ ಮೇಲೆ ಮತ್ತೆ ದಾಳಿಸಿದೆ. ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

RELATED ARTICLES

Latest News