ನ್ಯೂ ಓರ್ಲಿಯನ್ಸ್ ,ಜ.2- ಇಸ್ಲಾಮಿಕ್ ಸ್ಟೇಟ್ ಗುಂಪಿನ ಧ್ವಜವನ್ನು ಹೊಂದಿದ್ದ ಟ್ರಕ್‌ನಲ್ಲಿ ಬಂದವನು ನ್ಯೂ ಓರ್ಲಿಯನ್ಸ್ ನ ಹೊಸ ವರ್ಷದ ಸಂಭ್ರಮಾಚರಣೆಯ ಗುಂಪಿನ ಮೇಲೆ ಹರಿಸಿ ನಂತರ ಮಿಷನ್ ಗನ್‌ನಿಂದ ಗುಂಡಿನ ದಾಳಿ ನಡೆಸಿ 15 ಮಂದಿಯನ್ನು ಕೊಂದುಹಾಕಿದ್ದಾನೆ.
ನಗರದ ಪ್ರಸಿದ್ಧ ಫ್ರೆಂಚ್ ಕ್ವಾರ್ಟರ್‌ನಲ್ಲಿ ಮುಂಜಾನೆ ನಡೆದ ದಾಳಿಯನ್ನು ಭಯೋತ್ಪಾದಕ ಕೃತ್ಯವೆಂದು ಇದು ಏಕಾಂಗಿ ದಾಳಿಯಲ್ಲ ಇದರ ಜೊತೆ ಇನ್ನು ಹಲವರು ಇದ್ದಾರೆ ಎಂದು ಎಫ್‌ಬಿಐ ಹೇಳಿದೆ.
ಲೂಯಿಸಿಯಾನ ಸ್ಟೇಟ್ ಪೋಲೀಸ್ ಗುಪ್ತಚರ ಮಾಹಿತಿ ಪ್ರಕಾರ, ತನಿಖಾಧಿಕಾರಿಗಳು ಎರಡು ಪೈಪ್ ಬಾಂಬ್‌ಗಳನ್ನು ಮರೆಮಾಡಲಾಗಿದೆ ಮತ್ತು ರಿಮೋಟ್ ಸ್ಫೋಟಕ್ಕಾಗಿ ತಂತಿಗಳನ್ನು ಬಳಸಿರುವುದು,ಅನೇಕ ಸುಧಾರಿತ ಸ್ಫೋಟಕ ಸಾಧನ ಕಂಡು ಬಂದಿದೆ ಎಂದು ತಿಳಿಸಿದೆ.
ಕಣ್ಗಾವಲು ದೃಶ್ಯದಲ್ಲಿ ಮೂರು ಪುರುಷರು ಮತ್ತು ಮಹಿಳೆಯೊಬ್ಬರು ಸಾಧನಗಳನ್ನು ಇರಿಸುತ್ತಿರುವುದನ್ನು ತೋರಿಸಿದೆ ಆದರೆ ಫೆಡರಲ್ ಅಧಿಕಾರಿಗಳು ತಕ್ಷಣ ಆ ವಿವರವನ್ನು ದೃಢಪಡಿಸಲಿಲ್ಲ ಮತ್ತು ವೀಡಿಯೊದಲ್ಲಿರುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದಿದೆ.
ಬೌರ್ಬನ್ ಸ್ಟ್ರೀಟ್‌ನಲ್ಲಿ ನಡೆದ ಈ ಭೀಕರ ಹತ್ಯಾಕಾಂಡದಲ್ಲಿ 15 ಜನರು ಮೃತಪಟ್ಟಿದ್ದು ಜೊತೆಗೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಜೀವ ಉಳಿಸಿಕೊಲ್ಲಲು ನೈಟ್‌ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ಒಳಗೆ ಜನರು ಓಡಿಹೋದರು.ಕೆಲವೇ ಕ್ಷಣದಲ್ಲಿ ಸಂಭ್ರಮದ ವಾತಾವರಣ ಅಲೋಲ ಕಲ್ಲೂಲ ಸೃಷ್ಠಿಸಿದೆ.
ತನಿಖೆ ವೇಳೆ ದಾಳಿ ರುವಾರಿಯನ್ನು ಟೆಕ್ಸಾಸ್‌ನ ನಿವಾಸಿ ಶಮ್ಸುದ್ ದಿನ್ ಜಬ್ಬಾರ್(42) ಎಂದು ಗುರುತಿಸಿದೆ ಮತ್ತು ಆತ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಎಫ್‌ಬಿಐ ಸಹಾಯಕ ವಿಶೇಷ ಏಜೆಂಟ್ ಇನ್ ಚಾರ್ಜ್ ಅಲೆಥಿಯಾ ಡಂಕನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಬ್ಬಾರ್ ಬಾಡಿಗೆಗೆ ಪಡೆದ ಪಿಕಪ್ ಟ್ರಕ್ ಅನ್ನು ಮೊದಲು ಕಾಲುದಾರಿಯ ಮೇಲೆ ಓಡಿಸಿದ ಹಲವರನ್ನು ಕೊಂದಿದ್ದಾನೆ ನಂತರ ಗುಂಡು ಹಾರಿಸಿದ್ದಾನೆ.ಸ್ಥಳದಲ್ಲಿದ್ದ ಪೊಲೀಸರು ಟ್ರಕ್ ಸುತ್ತುವರೆದಾಗ ಮತ್ತೆ ಗುಂಡಿನ ದಾಳಿ ಆರಂಭಿಸಿದ ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದಾಗ ಜಬ್ಬಾರ್ ಹತನಾಗಿದ್ದಾನೆ ಎಂದುಪೊಲೀಸ್ ಅಧಿಕಾರಿ ಕಿರ್ಕ್‌ಪ್ಯಾಟ್ರಿಕ್ ಹೇಳಿದರು. ಇಸ್ಲಾಮಿಕ್ ಸ್ಟೇಟ್ ಗುಂಪಿನ ಧ್ವಜವು ಟ್ರಕ್‌ನ ಟ್ರೇಲರ್ ಹಿಚ್‌ನಲ್ಲಿತ್ತು ಬಂದೂಕು ಮತ್ತು ರೈಫಲ್‌ವಶಕ್ಕೆ ಪಡೆಯಲಾಗಿದೆ ಎಂದು ಎಫ್‌ಬಿಐ ತಿಳಿಸಿದೆ.