ಬೆಂಗಳೂರು,ನ.11- ಪೌರ ಕಾರ್ಮಿಕರ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಿರುವ ಬಿಬಿಎಂಪಿಯವರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹೆಣ್ಣು ಮಕ್ಕಳ ಮದುವೆಗೆ ಪಾಲಿಕೆಯಿಂದ ಒಂದು ಲಕ್ಷ ಉಚಿತ ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ. ಪಾಲಿಕೆಯ ಪೌರಕಾರ್ಮಿಕರು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಕುಟುಂಬದ ಹೆಣ್ಣು ಮಗಳ ಸರಳ ವಿವಾಹಕ್ಕೆ ಪಾಲಿಕೆಯಿಂದ ರೂ.1.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸಹಾಯಧನಕ್ಕೆ ಕೆಲವು ಷರತ್ತುಗಳನ್ನು ಪಾಲಿಕೆ ವಿಸಿದೆ. ಅರ್ಜಿದಾರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು ಮೂರು ವರ್ಷಕ್ಕೂ ಮೇಲ್ಪಟ್ಟು ವಾಸಿಸುತ್ತಿರಬೇಕು. ಸದರಿ ಸೌಲಭ್ಯವನ್ನು ಖಾಯಂ ಹಾಗೂ ನೇರ ವೇತನ ಪೌರಕಾರ್ಮಿಕರು ಮಾತ್ರ ಪಡೆಯಲು ಅರ್ಹರು.
4 ವರ್ಷದ ಬಾಲಕಿ ಮೇಲೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅತ್ಯಾಚಾರ
ಸೇವಾ ಪುಸ್ತಕದಲ್ಲಿ ವಿವಾಹ ಆಗುವ ಮಗಳು ನಾಮಿನಿ ಆಗಿರುವುದು ಕಡ್ಡಾಯವಾಗಿರುತ್ತದೆ, ನೇರ ವೇತನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಗಳು ಎಂದು ಖಚಿತಪಡಿಸಲು ಆಧಾರ್ ಹಾಗೂ ಪಡಿತರ ಚೀಟಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.,
ತಹಶೀಲ್ದಾರ್ ರವರಿಂದ ಚಾಲ್ತಿಯಲ್ಲಿರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು, ಪೌರಕಾರ್ಮಿಕರು ಗುರುತಿನ ಚೀಟಿ ಕಡ್ಡಾಯ, ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ಸೌಲಭ್ಯವನ್ನು ಪಡೆಯಲು ಕುಟುಂಬದ ವಾರ್ಷಿಕ ವರಮಾನ ರೂ.3.00 ಲಕ್ಷ ಮೀರಿರಬಾರದು ಎಂಬ ನಿಯಮ ಹಾಕಲಾಗಿದೆ.
ಆದರೆ, ಪೌರಕಾರ್ಮಿಕರಿಗೆ ಆದಾಯ ಮಿತಿ ಅನ್ವಯಿಸುವುದಿಲ್ಲ, ವಿವಾಹ ನಿಶ್ಚಯವಾಗಿರುವ ಬಗ್ಗೆ ಮದುವೆಯ ಆಮಂತ್ರಣ ಪತ್ರವನ್ನು ಸಲ್ಲಿಸುವುದು, ವಿಧವಾ ಹೆಣ್ಣು ಮಗಳು ಸದರಿ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ, ಸಹಾಯಧನವನ್ನು ವಧುವಿನ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಒಂದು ವೇಳೆ ಸಲ್ಲಿಸಲಾಗಿರುವ ದಾಖಲೆಗಳು ನಕಲಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಕಾನೂನಿನ ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.