Thursday, March 27, 2025
Homeರಾಜ್ಯ"ಸ್ಮಾರ್ಟ್ ಮೀಟರ್‌ ಅಳವಡಿಸಿಕೊಳ್ಳಲು ಬಲವಂತ ಇಲ್ಲ"

“ಸ್ಮಾರ್ಟ್ ಮೀಟರ್‌ ಅಳವಡಿಸಿಕೊಳ್ಳಲು ಬಲವಂತ ಇಲ್ಲ”

here is no compulsion to adopt smart meters"

ಬೆಂಗಳೂರು,ಮಾ.24- ಹೊಸದಾಗಿ ಮೀಟರ್‌ಗಳನ್ನು ಅಳವಡಿಸಿಕೊಳ್ಳುವವರಿಗೆ ಮಾತ್ರ ಸ್ಮಾರ್ಟ್ ಮೀಟರ್‌ ವ್ಯವಸ್ಥೆ ಜಾರಿ ಮಾಡಲಾಗುವುದು, ಯಾರಿಗೂ ಬಲವಂತ ಮಾಡಲ್ಲ ಎಂದು ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೆಶಕ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದರು. ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಸಾರ್ಟ್‌ ಮೀಟರ್‌ ಯೋಜನೆ ಕೇಂದ್ರ ಸರ್ಕಾರದ್ದು, ಅದರಲ್ಲಿನ ಕೆಲವು ಲೋಪದೋಷಗಳಿಂದ ರಾಜ್ಯಸರ್ಕಾರ ಒಪ್ಪಿಕೊಂಡಿರಲಿಲ್ಲ.

ಕೆಲವು ನಿಬಂಧನೆಗಳಂತೆ ಆರ್‌.ಡಿ.ಎಸ್‌‍. ಎಸ್‌‍ ಯೋಜನೆಯಡಿಯಲ್ಲಿ ಹೊಸ ಮೀಟರ್‌ ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಟ್ಟಿಗೆ ಹಳೆ ಮೀಟರಗಳನ್ನು ತೆಗೆದು ಹೊಸ ಸಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳವ ವ್ಯವಸ್ಥೆ ಇದೆ ಎಂದು ಸಮಜಾಯಿಸಿ ನೀಡಿದರು.

ಈ ಪದ್ದತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಿದ್ದೇವೆ. ಅದರ ಬದಲಾಗಿ ಹೊಸೆ ಮನೆ ಕಟ್ಟಿದಾಗ ಮತ್ತು ಹಳೆ ಮೀಟರುಗಳು ದುರಸ್ತಿಗೆ ಒಳಪಟ್ಟಾಗ ಮಾತ್ರ ಸಾರ್ಟ್‌ ಮೀಟರ್‌ ಅಳವಡಿಸಿಕೊಳ್ಳಲು ಗ್ರಾಹಕರಿಗೆ ತಿಳಿಸಿದ್ದೇವೆ. ಹಳೆ ಮೀಟರಗಳು ಹಾಗೆ ಇರುತ್ತವೆ ಎಂದರು ಹೊಸ ಸಾರ್ಟ್‌ ಮೀಟರ್‌ ಅಳವಡಿಸಿಕೊಳ್ಳಲು ಗ್ರಾಹಕರು 5000 ರೂಗಳನ್ನು ಕಟ್ಟಿ ನಂತರ ಇದರಲ್ಲಿನ ತಂತ್ರಜ್ಞಾನ ಅಳವಡಿಕೆಯ ಕಾರಣದಿಂದಾಗಿ ಅದರ ನಿರ್ವಹಣೆಗಾಗಿ ಹತ್ತು ವರ್ಷಗಳ ಕಾಲ 116ಗಳನ್ನು ಪ್ರತಿ ತಿಂಗಳು ಪಾವತಿಸಬೇಕು ಎಂದರು.

ಇದರ ಕುರಿತಾಗಿ ಬಡವರಿಗೆ ಹೊರೆಯಾಗುವುದಿಲ್ಲವೇ, ಇದರಲ್ಲಿ ವಿರೋಧ ಪಕ್ಷಗಳನ್ನು ಭ್ರಷ್ಟಾಚಾರ ನಡೆದಿದೆ ಎಂದು ಆಪಾದಿಸುತ್ತಿವೆ ಎಂಬ ಮಾಧ್ಯಮ ಪ್ರಶ್ನೆಗೆ ಇದರಲ್ಲಿ ಆ ರೀತಿಯ ಭ್ರಷ್ಟಾಚಾರ ಇಲ್ಲ, ಬಡವರಿಗೆ ಯಾವುದೇ ಹೊರೆಯಾಗುವುದಿಲ್ಲ. ಟೆಂಡರ್‌ ಸೇರಿದಂತೆ ಎಲ್ಲವೂ ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ಇಂಧನ ಇಲಾಖೆ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಬೆಸ್ಕಾಂ ಎಂಡಿ ಡಾ.ಎಂ ಶಿವಶಂಕರ್‌ ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಮತ್ತು ಪೂರೈಕೆ ಬಗ್ಗೆ ಮಾತನಾಡಿದ ಪಂಕಜ್‌ ಕುಮಾರ್‌ ಪಾಂಡೆ, ಕಳೆದ ವರ್ಷ ಉತ್ತಮ ಮಳೆಯಾಗಿದೆ ಆದ್ದರಿಂದ ರೈತರು ಎರಡು ಬೆಳೆಗಳನ್ನ ಬೆಳೆದಿದ್ದಾರೆ ಇದರಿಂದಾಗಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ ಇದನ್ನು ಸರಿದೂಗಿಸಲು ಹೊರ ರಾಜ್ಯಗಳಾದ ಉತ್ತರ ಪ್ರದೇಶ ಮಧ್ಯಪ್ರದೇಶ ಮತ್ತು ಪಂಜಾಬ್‌ ನಿಂದ ವಿದ್ಯುತ್‌ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಇನ್ನು ಜಲ ವಿದ್ಯುತ್‌‍, ಥರ್ಮಲ್‌ ವಿದ್ಯುತ್‌‍, ಪವನ ವಿದ್ಯುತ್‌ ಸ್ಥಾವರಗಳನ್ನ ಮತ್ತಷ್ಟು ಗಟ್ಟಿಗೊಳಿಸುವ ವ್ಯವಸ್ಥೆ ಮಾಡಲಾಗಿದೆ.

ನಮ್ಮಲ್ಲಿ ಹೆಚ್ಚಿಗೆ ಉದ್ಪಾದನೆಯಾದಾಗ ಮತ್ತೆ ಅವರಿಗೆ ತೆಗೆದುಕೊಂಡ ವಿದ್ಯುತ್‌ಅನ್ನು ವಾಪಸ್‌‍ ಕೊಡುತ್ತೇವೆ. ಎಲ್‌‍ಇಡಿ ಬಲ್‌್ಪಗಳು ಮತ್ತು ಹೊಸ ಟೆಕ್ನಾಲಜಿ ಫ್ಯಾನುಗಳನ್ನ ಗ್ರಾಹಕರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದೇವೆ.ರಾಜ್ಯಕ್ಕೆ ವಿದ್ಯುತ್‌ ಕೊರತೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ಇದೇ ಸಂದರ್ಭದಲ್ಲಿ ಈಗ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಸಂಜೆ 6 ರಿಂದ ಬೆಳಗಿನ ಜಾವ 6 ರವರೆಗೆ ಸಿಂಗಲ್‌ ಫೇಸ್‌‍ ನಲ್ಲಿ ವಿದ್ಯುತ್‌ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದರು ವಿದ್ಯುತ್‌ ಸಂಗ್ರಹ ರಾಜ್ಯದಲ್ಲಿ ಚೆನ್ನಾಗಿ ಇದೆ. ರೈತರು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಜನಕ್ಕೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಂಡಿದ್ದೇವೆ ಎಂದರು ಈ ವರ್ಷ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ ಜೊತೆಗೆ ಈ ಭಾರಿ ಬೇಗ ಬೇಸಿಗೆ ಬಂದಿದೆ ಮುಂದಿನ ದಿನಗಳಲ್ಲಿ ಪರಿಸ್ಥತಿ ನಿಭಾಯಿಸಲು ಸಿದ್ದತೆ ಮಾಡಿಕೊಳ್ಳಬೇಕು,
ಹೀಗಾಗಿ ಸಮಿತಿ ರಚನೆ ಮಾಡಲಾಗಿದೆ ಎಂದರು.

ಗುಜರಾತ್‌‍, ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು ಸೇರಿದಂತೆ ಬ್ಯಾಟರಿ ಸ್ಟೋರೆಂಜ್‌ ಮಾಡ್ತಿದೆ.ನಾವು ಇದರ ಬಗ್ಗೆ ಕಾರ್ಯ ಪ್ರವೃತ್ತರಾಗಿದೇವೆ ಎಂದು ಅಪರ ಮುಖ್ಯ ಕಾರ್ಯಸರ್ಶಿ ಗೌರವ್‌ ಗುಪ್ತ ತಿಳಿಸಿದರು.ಬೆಸ್ಕಾಂ ಎಂಡಿ ಶಿವಶಂಕರ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

RELATED ARTICLES

Latest News