ಭೋಪಾಲ್, ಡಿ.20- ಇಲ್ಲಿನ ಮಾಳವೀಯಾ ನಗರದಲ್ಲಿರುವ ಮೆಡಿಸ್ಕ್ಯಾನ್ ಎಂಆರ್ಐ ಸ್ಕ್ಯಾನಿಂಗ್ ಸೆಂಟರ್ನ ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋವನ್ನು ಅಕ್ರಮವಾಗಿ ಸೆರೆ ಹಿಡಿಯಲಾಗಿರುವ ಪ್ರಕರಣ ನಡೆದಿದೆ.
ಡ್ರೆಸ್ ಚೇಂಜ್ ರೂಮ್ನಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಮಾಡುತ್ತಿದ್ದ ವಾರ್ಡ್ಬಾಯ್ ವಿಶಾಲ್ ಠಾಕೂರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರದ ವಾರ್ಡ್ ಬಾಯ್ ಬಟ್ಟೆ ಬದಲಾಯಿಸುವ ಕೊಠಡಿಯ ಸೀಲಿಂಗ್ ನಲ್ಲಿ ಮೊಬೈಲ್ ಬಚ್ಚಿಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ. ಎಂಆರ್ಐ ಪರೀಕ್ಷೆಗೆಂದು ಕೇಂದ್ರಕ್ಕೆ ಬಂದಿದ್ದ ಮಹಿಳೆಯರು ಪರೀಕ್ಷೆಗೂ ಮುನ್ನ ಗೌನ್ ಧರಿಸುವಾಗ ವಿಡಿಯೋ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಎಂಆರ್ಐ ಪರೀಕ್ಷೆಗೆ ತಯಾರಿ ನಡೆಸಲು ಮಹಿಳೆ ಬಟ್ಟೆ ಬದಲಾಯಿಸುವ ಕೊಠಡಿಯೊಳಗೆ ಹೋದಾಗ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ಕೇಂದ್ರವನ್ನು ತಲುಪಿ ಉದ್ಯೋಗಿ ವಿಶಾಲ್ ಠಾಕೂರ್ ಮೊಬೈಲ್ ಅದು ಎಂಬುದು ತಿಳಿದುಬಂದಿದೆ. ಫೋನ್ ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ.
ಆರೋಪಿಯು ಎಷ್ಟು ವಿಡಿಯೋಗಳನ್ನು ರೆಕಾರ್ಟ್ ಮಾಡಿದ್ದಾನೆ ಮತ್ತು ಅಂತಹ ವೀಡಿಯೊಗಳನ್ನು ಅವನು ಏನು ಮಾಡಿದ್ದಾನೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಮೆಡಿ ಸ್ಕ್ಯಾನ್ ಸೆಂಟರ್ಗೆ ಬಂದ ಮಹಿಳೆ ಬಟ್ಟೆ ಬದಲಿಸಿದ ನಂತರ ಸ್ಕ್ಯಾನಿಂಗ್ಗೆ ತೆರಳಿದ್ದರು ಆದರೆ, ಆಕೆ ಬಟ್ಟೆ ಬದಲಿಸುವ ಕೊಠಡಿಯಲ್ಲಿ ಕೆಲ ವಸ್ತುಗಳನ್ನು ಬಿಟ್ಟು ಬಂದಿದ್ದರು . ಆ ವಸ್ತುಗಳನ್ನು ತರಲು ಹೋದ ಮಹಿಳೆಯ ಪತಿಗೆ ರೂಮಿನ ಸೀಲಿಂಗ್ ಫ್ಯಾನ್ನಲ್ಲಿ ಬಚ್ಚಿಟ್ಟಿದ್ದ ಮೊಬೈಲ್ ಫೋನ್ ಕಂಡುಬಂದಿದೆ. ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ವಾರ್ಡ್ಬಾಯ್ ಮಹಿಳೆ ಬಟ್ಟೆ ಬದಲಿಸಿ ಗೌನ್ ಧರಿಸುವ ದೃಶ್ಯಗಳು ಸೆರೆಯಾಗಿರುವುದು ಕಂಡುಬಂದಿದೆ.
ಇದನ್ನು ದಂಪತಿ ಆಡಳಿತ ಮಂಡಳಿ ಗಮನಕ್ಕೆ ತಂದಾಗ, ತಮ ತಪ್ಪನ್ನು ಒಪ್ಪಿಕೊಂಡು ವಾರ್ಡ್ ಬಾಯ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರು ಜಗಳವಾಡಲು ಶುರು ಮಾಡಿದರು. ನಂತರ ಇಬ್ಬರು ಅರೇರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಬಟ್ಟೆ ಬದಲಾಯಿಸುವ ಕೋಣೆಗೆ ಸೀಲ್ ಹಾಕಿದ್ದಾರೆ. ಅಲ್ಲದೇ ಆರೋಪಿ ವಾರ್ಡ್ ಬಾಯ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.