ನವದೆಹಲಿ,ಆ.28- ಪಾಕಿಸ್ತಾನ ಮೂಲದ ಭಯೋತ್ಪಾದಕರು ಬಿಹಾರ ರಾಜ್ಯಕ್ಕೆ ಪ್ರವೇಶಿಸಿದ್ದಾರೆ ಎಂಬ ಗುಪ್ತಚರದ ಮಾಹಿತಿಗಳು ಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಜೈಶ್-ಎ-ಮೊಹಮದ್ ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಕಾರ್ಯಕರ್ತರು ನೇಪಾಳ ಗಡಿ ಮೂಲಕ ಬಿಹಾರಕ್ಕೆ ನುಸುಳಿದ್ದಾರೆ. ಶಂಕಿತರನ್ನು ರಾವಲ್ಪಿಂಡಿಯ ಹಸ್ನೈನ್ ಅಲಿ, ಉಮರ್ಕೋಟ್‌ನ ಆದಿಲ್ ಹುಸೇನ್ ಮತ್ತು ಬಹವಾಲ್ಪುರದ ಮೊಹಮದ್ ಉಸಾನ್ ಎಂದು ಗುರುತಿಸಲಾಗಿದೆ.
ಆಗಸ್ಟ್ ಎರಡನೇ ವಾರದಲ್ಲಿ ಕಠಂಡು ತಲುಪಿ ಕಳೆದ ವಾರ ಬಿಹಾರ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪೊಲೀಸ್ ಪ್ರಧಾನ ಕಚೇರಿಯು ಶಂಕಿತರ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ವಿವರಗಳನ್ನು ಗಡಿ ಜಿಲ್ಲೆಗಳ ಪೊಲೀಸರೊಂದಿಗೆ ಹಂಚಿ ಕೊಂಡಿದೆ. ಭದ್ರತಾ ಸಂಸ್ಥೆಗಳಿಗೆ ಕಣ್ಗಾವಲು ಹೆಚ್ಚಿಸಲು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಸೂಚಿಸ ಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಗುಪ್ತಚರ ಘಟಕಗಳಿಗೆ ಸೂಚಿಸಲಾಗಿದೆ.
ಬಿಹಾರದಲ್ಲಿ ಆಪರೇಷನ್ ಸಿಂಧೂರ್ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ನಂತರದ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮೇ ತಿಂಗಳಲ್ಲಿ ಭಾರತ-ನೇಪಾಳ ಗಡಿ ಮತ್ತು ಸೀಮಾಂಚಲ್ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಮಧುಬನಿ, ಸೀತಾಮರ್ಹಿ, ಸುಪೌಲ್, ಅರಾರಿಯಾ, ಪೂರ್ವ ಮತ್ತು ಪಶ್ಚಿಮ ಚಂಪಾರಣ್ ಜಿಲ್ಲೆಗಳು ಸೇರಿದಂತೆ ಗಡಿ ಪ್ರದೇಶಗಳಲ್ಲಿ ಗಸ್ತು ತಿರುಗಾಟವನ್ನು ತೀವ್ರಗೊಳಿಸಲಾಗಿತ್ತು.
- ಕೊಡಗಿನ ರೋಷನ್ ಜೊತೆ ಹಸೆಮಣೆ ಏರಿದ ಆ್ಯಂಕರ್ ಅನುಶ್ರೀ
- ಡಿಕೆಶಿ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ : ಯದುವೀರ್
- ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ಧರ್ಮಕ್ಕೆ ಸೇರಿಲ್ಲವೆಂದಾದರೆ ಮುಜರಾಯಿ ಸುಪರ್ದಿಗೆ ಏಕೆ..?
- ಸರ್ಕಾರಕ್ಕೆ ಮಂಜುನಾಥಸ್ವಾಮಿಯೇ ಶಿಕ್ಷೆ ಕೊಡುತ್ತಾನೆ : ಹೆಚ್.ಡಿ.ಕುಮಾರಸ್ವಾಮಿ
- ಬೆಂಗಳೂರಲ್ಲಿ ಗೌರಿ ಹಬ್ಬದ ದಿನವೇ ಮಹಿಳಾ ಟೆಕ್ಕಿ ಆತ್ಮಹತ್ಯೆ