Tuesday, August 5, 2025
Homeರಾಜ್ಯBREAKING : ನಾಳೆ ಒಂದು ದಿನ ಮುಷ್ಕರ ನಡೆಸದಂತೆ ಸಾರಿಗೆ ನೌಕರಿಗೆ ಹೈಕೋರ್ಟ್‌ ಸೂಚನೆ, ಇತ್ತ...

BREAKING : ನಾಳೆ ಒಂದು ದಿನ ಮುಷ್ಕರ ನಡೆಸದಂತೆ ಸಾರಿಗೆ ನೌಕರಿಗೆ ಹೈಕೋರ್ಟ್‌ ಸೂಚನೆ, ಇತ್ತ ಸಂಧಾನ ವಿಫಲ

High Court instructs transport workers not to go on strike for a day

ಬೆಂಗಳೂರು,ಜು.4- ಯಾವುದೇ ಕಾರಣಕ್ಕೂ ಒಂದು ದಿನದ ಮಟ್ಟಿಗೆ ಮುಷ್ಕರ ನಡೆಸಬಾರದೆಂದು ಹೈಕೋರ್ಟ್‌ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನಲೆಯಲ್ಲಿ ಸಾರಿಗೆ ನೌಕರರು ಕರೆ ಕೊಟ್ಟಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಡೋಲಾಯಮಾನವಾಗಿದೆ.ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಾರಿಗೆ ನಿಗಮಗಳು ಮಂಗಳವಾರದಿಂದ ಕರೆ ಕೊಟ್ಟಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಗೈರು ಹಾಜರಾದ ಹಿನ್ನಲೆಯಲ್ಲಿ ಹೈಕೋರ್ಟ್‌ ಕೆ.ಎಸ್‌‍.ಮುದ್ಗಲ್, ಎಂ.ಜಿ.ಎಸ್‌‍.ಕಮಲ್‌ ಅವರಿದ್ದ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಸಾರಿಗೆ ನಿಗಮಗಳ ಪರ ವಕೀಲರು, ನಾವು ಒಂದು ತಿಂಗಳ ಹಿಂದೆಯೇ ಆ.5ರಂದು ಮುಷ್ಕರ ನಡೆಸುವುದಾಗಿ ಮಾಹಿತಿ ನೀಡಿದ್ದೇವೆ. ಸರ್ಕಾರ ಈಗ ಶಿಸ್ತುಕ್ರಮದ ಬೆದರಿಕೆ ಹಾಕುತ್ತಿದೆ ಎಂದು ಹೇಳಿದರು.

ಈ ಹಂತದಲ್ಲಿ ನ್ಯಾಯಾಧೀಶರು ಸಾರಿಗೆ ನೌಕರರ ಅರ್ಜಿಯಲ್ಲೇ ವ್ಯತ್ಯಾಸವಿದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುವುದು ಸರಿಯಲ್ಲ. ಮುಖ್ಯಮಂತ್ರಿಗಳ ಜೊತೆ ನಡೆಸಿದ ಮಾತುಕತೆ ವಿವರ, ಇದುವರೆಗೆ ತೆಗೆದುಕೊಂಡು ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮಂಗಳಾವರಕ್ಕೆ ಮುಂದೂಡಿತು. ಮಂಗಳವಾರ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ನಂತರವೇ ಮುಷ್ಕರ ನಡೆಸುವ ಬಗ್ಗೆ ತೀರ್ಮಾನವಾಗಲಿದೆ.

ಸಂಧಾನ ವಿಫಲ :
ಮುಷ್ಕರ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಸಾರಿಗೆ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತಸುಬ್ಬರಾವ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಪದಾಧಿಕಾರಿಗಳು, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸತತ ಎರಡು ಗಂಟೆಗಳ ಕಾಲ ಸಂಧಾನ ಸಭೆ ನಡೆಸಿದರೂ ಪ್ರಯೋಜನವಾಗಲಿಲ್ಲ.

ನೌಕರರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕಾದರೆ ಕನಿಷ್ಟಪಕ್ಷ 2200 ಕೋಟಿ ಹಣ ಬೇಕು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತದೆ. 2027ರಲ್ಲಿ ಪೂರ್ಣ ಪ್ರಮಾಣದ ಬೇಡಿಕೆಗಳನ್ನು ಈಡೇರಿಸುತ್ತೇವೆ. ಈಗ ಎಷ್ಟು ಸಾಧ್ಯವೋ ಅಷ್ಟನ್ನು ಮಾತ್ರ ಅನುಷ್ಠಾನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

30 ತಿಂಗಳ ಬಾಕಿ ವೇತನ, ಸರ್ಕಾರಿ ನೌಕರರಿಗೆ ನೀಡುವ ಸರಿಸಮಾನವಾದ ವೇತನ, ಖಾಸಗಿ ಗುತ್ತಿಗೆದಾರರಿಗೆ ಈ ಬಸ್‌‍ಗಳ ನಿರ್ವಹಣೆ ಪದ್ದತಿ ಕೈಬಿಡುವುದು, ಈ ಹಿಂದೆ 2020 ಮತ್ತು 2021ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ದಾಖಲಾಗಿದ್ದ ಮೊಕದ್ದಮೆ ವಾಪಸ್‌‍, ವಿದ್ಯುತ್‌ಚಾಲಿತ ಬಸ್‌‍ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನೆ ಕೆಲಸಕ್ಕೆ ನಿಯೋಜನೆ ಸೇರಿದಂತೆ ಮತ್ತಿತರ ಬೇಡಿಕೆಗಳ ಪಟ್ಟಿಯನ್ನು ಕ್ರಿಯಾ ಸಮಿತಿಯವರು ಮುಂದಿಟ್ಟರು.

ಇದಕ್ಕೆ ಸಿಎಂ ಅಸಮತಿ ವ್ಯಕ್ತಪಡಿಸಿ, ಸರ್ಕಾರ ನಿಮ ಹಿತ ಕಾಪಾಡಲಿದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟರು ಮುಷ್ಕರ ನಡೆಸಬೇಡಿ. ಎಷ್ಟು ಸಾಧ್ಯವೋ ಅಷ್ಟು ಈಡೇರಿಸುತ್ತೇವೆ ಎಂದು ನೀಡಿದ ಭರವಸೆಯನ್ನು ಕ್ರಿಯಾಸಮಿತಿಯು ಒಪ್ಪಲಿಲ್ಲ. ಹೀಗಾಗಿ ಸಂಧಾನ ಸಭೆ ವಿಫಲವಾಯಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತ ಸುಬ್ಬರಾವ್‌, ಸರ್ಕಾರದ ಭರವಸೆಯನ್ನು ನಾವು ಒಪ್ಪಿಲ್ಲ. ಹೀಗಾಗಿ ಮಂಗಳವಾರದಿಂದ ಮುಷ್ಕರ ಆರಂಭವಾಗಲಿದೆ ಎಂದು ಘೋಷಣೆ ಮಾಡಿದರು.

ಜನರಿಗೆ ಉಂಟಾಗಲಿರುವ ತೊಂದರೆಯನ್ನು ತಪ್ಪಿಸಲು ಸರ್ಕಾರ ಖಾಸಗಿ ಬಸ್‌‍ಗಳ ಮೊರೆ ಹೋಗಿದ್ದು, ರಾಜಧಾನಿ ಬೆಂಗಳೂರಿಗೆ 5 ಸಾವಿರ ಹಾಗೂ ವಿವಿಧ ಜಿಲ್ಲೆಗಳಿಗೆ 10 ಸಾವಿರ ಸೇರಿದಂತೆ ಒಟ್ಟು 15 ಸಾವಿರ ಬಸ್‌‍ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡು ಸಂಚಾರ ಸೇವೆ ಒದಗಿಸಲು ಮುಂದಾಗಿದೆ.

ಮುಷ್ಕರದಿಂದ ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಸಿ ತಟ್ಟುವುದು ಗ್ಯಾರಂಟಿ. ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌‍ಆರ್‌ಟಿಸಿ, ಮತ್ತು ಇತರೆ ರಾಜ್ಯ ಸಾರಿಗೆ ಘಟಕಗಳ ನೌಕರರು ತಮ 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದ ಸರ್ಕಾರಿ ಬಸ್‌‍ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡರೆ, ಶಕ್ತಿ ಯೋಜನೆಯ ಪ್ರಯೋಜನವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಲಿದೆ.

ಸಾರಿಗೆ ಬಸ್‌‍ ಮುಷ್ಕರ ದೀರ್ಘಕಾಲ ಮುಂದುವರಿದರೆ, ಆರ್ಥಿಕ ಒತ್ತಡವು ತೀವ್ರಗೊಳ್ಳಬಹುದು. ಮುಷ್ಕರದಿಂದ ಶಕ್ತಿ ಯೋಜನೆಗೆ ಉಂಟಾಗುವ ಹಿನ್ನಡೆಯು ಸರ್ಕಾರದ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರುತ್ತದೆ.

ಕಾಂಗ್ರೆಸ್‌‍ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಅತ್ಯಂತ ಜನಪ್ರಿಯವಾಗಿದೆ. ಈ ಯೋಜನೆಯ ಸೌಲಭ್ಯವನ್ನು ಕಳೆದುಕೊಂಡರೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ.ಈವರೆಗೆ 2 ಹಂತದಲ್ಲಿ ಕಾರ್ಮಿಕ ಇಲಾಖೆ ಜೊತೆ ಸಚಿವರು ನಡೆಸಿದ ಮಾತುಕತೆಯು ವಿಫಲವಾಗಿತ್ತು. ಸರ್ಕಾರ ಎಸಾ ಜಾರಿ ಮಾಡಿದರೂ, ನಾವು ಬಗ್ಗುವುದಿಲ್ಲ ಎಂದು ಕಾರ್ಮಿಕ ಸಂಘಟನೆ ದೃಢಪಡಿಸಿದೆ.

RELATED ARTICLES

Latest News