ಬೆಂಗಳೂರು, ಜೂ.19-ಬಿಡದಿ ಬಳಿಯ ಕೇತಗಾನಹಳ್ಳಿ ಗ್ರಾಮದ ಸರ್ಕಾರಿ ಜಮೀನು ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ಎಸ್‌ಐಟಿಗೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಿಲೀ್ ಸಿಕ್ಕಿದಂತಾಗಿದೆ.
ನ್ಯಾ. ಇಂದಿರೇಶ್ ಅವರು ಎಸ್‌ಐಟಿ ರಚ ನೆಗೆ ಮಧ್ಯಂತರ ತಡೆ ನೀಡಿದ್ದಾರೆ. ಕಳೆದ ಜನವರಿ ತಿಂಗಳಿನಲ್ಲಿ ರಾಜ್ಯ ಸರ್ಕಾರ ಒತ್ತುವರಿ ಪತ್ತೆಗಾಗಿ ಐಎಎಸ್ ಅಧಿಕಾರಿ ಆಮ್ಲನ್, ಆದಿತ್ಯ ಬಿಶ್ವಾಸ್ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿತ್ತು. ಕೇತಗಾನಹಳ್ಳಿ ಗ್ರಾಮದ 6 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದ್ದು, ತೆರವುಗೊಳಿಸುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು.
ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿರುವುದನ್ನು ಪ್ರಶ್ನಿಸಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಧಿಸೂಚನೆಯಿಲ್ಲದೇ ಎಸ್‌ಐಟಿ ರಚನೆ ಮಾಡಿರುವುದು ಕಾನೂನು ಬಾಹಿರ, ಎಸ್‌ಐಟಿ ಕೈಗೊಂಡಿರುವ ಕ್ರಮಗಳನ್ನು ಅನೂರ್ಜಿತವೆಂದು ಘೋಷಿಸಲು ಕುಮಾರಸ್ವಾಮಿ ಅವರ ಪರ ಹಿರಿಯ ವಕೀಲ ಉದಯ್‌ಹೊಳ್ಳ ಮತ್ತು ಎ.ವಿ.ನಿಶಾಂತ್ ಅವರು ವಾದ ಮಂಡಿಸಿದರು.
- 80ರ ವೃದ್ಧನಿಗೆ ಪ್ರೀತಿ ಹೆಸರಲ್ಲಿ ನಾಲ್ವರು ಮಹಿಳೆಯರಿಂದ 9 ಕೋಟಿ ವಂಚನೆ
- ಸವಿತಕ್ಕ ಪುತ್ರನ ಆತಹತ್ಯೆಗೆ “ಡೆತ್ನೋಟ್” ವೆಬ್ಸೀರಿಸ್ ಕಾರಣವಂತೆ..?
- ಎಲ್ಲಾ ರಾಜ್ಯಗಳಲ್ಲೂ ಅನರ್ಹ ಮತದಾರರಿಗೆ ಕೋಕ್
- ಆನ್ಲೈನ್ ಗೇಮ್ಗಾಗಿ ಹಣಕ್ಕೆ ಪೀಡಿಸುತ್ತಿದ್ದ ತಂಗಿ ಮಗನನ್ನೇ ಕೊಂದ ಮಾವ
- ಮತಗಳ್ಳತನದ ವಿರುದ್ಧ ಬೆಂಗಳೂರಲ್ಲಿ ರಾಹುಲ್ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ