ಮುಂಬೈ,ಸೆ.26- ಬಾಲಿವುಡ್ ನಿರ್ಮಾಪಕ ವಶು ಭಗ್ನಾನಿ ಅವರು ನೆಟ್ ಫ್ಲಿಕ್ಸ್ ಇಂಡಿಯಾ ಸಂಸ್ಥೆ ಚಿತ್ರದ ಹಕ್ಕುಗಳಿಗಾಗಿ 47.37 ಕೋಟಿಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಆದರೆ ಈ ಆರೋಪವನ್ನು ಸಂಸ್ಥೆ ನಿರಾಕರಿಸಿದೆ.
ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಭಗ್ನಾನಿ ಅವರು ಸಲ್ಲಿಸಿದ ದೂರಿನ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ಮಾಪಕರು ತಮ್ಮ ಇತ್ತೀಚಿನ ಮೂರು ಹಿಂದಿ ಚಲನಚಿತ್ರಗಳಾದ ಹೀರೋ ನಂ 1, ಮಿಷನ್ ರಾಣಿಗಂಜ್ ಮತ್ತು ಬಡೆ ಮಿಯಾನ್ ಚೋಟೆ ಮಿಯಾನ್ ಹಕ್ಕುಗಳ ಬಗ್ಗೆ ನೆಟ್‌ಫ್ಲಿಕ್ಸ್ ತನಗೆ ಮೋಸ ಮಾಡಿದೆ ಎಂದು ಹೇಳಿದ್ದಾರೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಿಂದ ಈ ಚಲನಚಿತ್ರಗಳಿಗೆ ಪಾವತಿಸಬೇಕಾದ 47.37 ಕೋಟಿ ಪಾವತಿಗಳನ್ನು ಭಗ್ನಾನಿ ಸ್ವೀಕರಿಸಲಿಲ್ಲ ಎಂದು ಅವರು ದೂರನ್ನು ಉಲ್ಲೇಖಿಸಿ ಹೇಳಿದರು.
ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಪೂಜಾ ಎಂಟರ್‌ಟೈನ್‌ಮೆಂಟ್ ಅನ್ನು ಹೊಂದಿರುವ ಭಗ್ನಾನಿ ಅವರು ಲಾಸ್ ಗ್ಯಾಟೋಸ್ ಪೊಡಕ್ಷನ್ ಸರ್ವಿಸಸ್ ಇಂಡಿಯಾ ವಿರುದ್ಧ ದೂರು ದಾಖಲಿಸಿದ್ದಾರೆ, ಅದರ ಮೂಲಕ ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಕಂಟೆಂಟ್ ಹೂಡಿಕೆಗಳನ್ನು ವರದಿ ಮಾಡಿದೆ. ಏತನಧ್ಯೆ, ನೆಟ್‌ಫ್ಲಿಕ್‌್ಸ ಭಗ್ನಾನಿ ಅವರ ಆರೋಪಗಳನ್ನು ತಿರಸ್ಕರಿಸಿದೆ ಮತ್ತು ಪೂಜಾ ಎಂಟರ್‌ಟೈನ್‌ಮೆಂಟ್ ಅವರಿಗೆ ಹಣವನ್ನು ನೀಡಬೇಕಿದೆ ಎಂದು ಹೇಳಿಕೊಂಡಿದೆ.