Friday, November 22, 2024
Homeರಾಜ್ಯನಾಗಮಂಗಲ ಗಲಭೆ : ಕೆರಳಿದ ಹಿಂದೂ ಸಂಘಟನೆಗಳಿಂದ ಗಣೇಶಮೂರ್ತಿ ಹಿಡಿದು ಪ್ರತಿಭಟನೆ

ನಾಗಮಂಗಲ ಗಲಭೆ : ಕೆರಳಿದ ಹಿಂದೂ ಸಂಘಟನೆಗಳಿಂದ ಗಣೇಶಮೂರ್ತಿ ಹಿಡಿದು ಪ್ರತಿಭಟನೆ

Hindu Organizations hold protest with Ganesha idol

ಬೆಂಗಳೂರು, ಸೆ.13- ನಾಗಮಂಗಲದಲ್ಲಿ ಗಣೇಶ ಉತ್ಸವದ ಮೇಲೆ ನಡೆದ ದಾಳಿ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಸರ್ಕಾರ ಎನ್ಐಎ ತನಿಖೆ ನಡೆಸಬೇಕೆಂದು ಹಿಂದೂಪರ ಸಂಘಟನೆಗಳು ಇಂದು ಪುರಭವನದ ಬಳಿ ಗಣೇಶಮೂರ್ತಿ ಹಿಡಿದು ಪ್ರತಿಭಟನೆ ನಡೆಸಿವೆ.

ನಾಗಮಂಗಲ ಕಿಚ್ಚು ಈಗ ಬೆಂಗಳೂರಿಗೂ ವ್ಯಾಪಿಸಿದ್ದು, ಇಂದು ಗಣೇಶಮೂರ್ತಿಗಳನ್ನು ಹಿಡಿದು ನೂರಾರು ಮಂದಿ ಪುರಭವನದ ಬಳಿ ಜಮಾಯಿಸಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕೆಲವು ಕಿಡಿಗೇಡಿಗಳು ಯಾವುದೇ ಭಯವಿಲ್ಲದೆ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಾಗಮಂಗಲದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಆಸ್ತಿಪಾಸ್ತಿ ಹಾನಿಗೊಳಿಸಿದ್ದಾರೆ.

ಆದರೆ, ಇದನ್ನು ಗೃಹ ಸಚಿವರು ಸಣ್ಣ ಕಲ್ಲು ತೂರಾಟ ಎಂದು ಬಣ್ಣಿಸಿದ್ದಾರೆ. ಇದನ್ನು ನೋಡಿದರೆ ತುಷ್ಟೀಕರಣ ರಾಜಕಾರಣ ರಾಜ್ಯದಲ್ಲಿ ತಾಂಡವವಾಡುತ್ತಿದೆ ಎಂದು ದೂರಿದರು.ಗಣೇಶ ಮೂರ್ತಿಗಳನ್ನು ಹೊತ್ತು ಘೋಷಣೆ ಕೂಗಿದಾಗ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು. ಆದರೂ ಜಗ್ಗದೆ ರಸ್ತೆ ಮಧ್ಯೆಯೇ ಕುಳಿತು ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೊಲೀಸರು ಗಣೇಶಮೂರ್ತಿಗಳನ್ನು ವಶಕ್ಕೆ ಪಡೆದು ತೆಗೆದುಕೊಂಡು ಹೋಗಿ ತಮ ಜೀಪ್ನಲ್ಲಿರಿಸಿದರು. ಈ ವೇಳೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಸದಸ್ಯರನ್ನು ವಶಕ್ಕೆ ಪಡೆಯಲಾಯಿತು.

RELATED ARTICLES

Latest News