ಬೆಂಗಳೂರು, ಫೆ.16- ಹಿಂದೂ ಸಾದರ ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಬೆಳೆಯಬೇಕು. ಇದಕ್ಕೆ ಎಲ್ಲರೂ ಸಂಘಟಿತರಾಗಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇಂದಿಲ್ಲಿ ತಿಳಿಸಿದರು.ಮಲ್ಲೇಶ್ವರಂನ ಸುಬ್ರಹಣ್ಯ ನಗರದಲ್ಲಿ ಸಾದು ಸಂಗಮ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅತ್ಯಂತ ಚಿಕ್ಕ ಸಮುದಾಯ ವಾಗಿದ್ದರೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ನಮ ಮುಖ್ಯಮಂತ್ರಿ ಚಂದ್ರು ಅವರ ಪಾತ್ರ ದೊಡ್ಡದು. ಅವರು ನಟರಾಗಿ, ರಾಜಕೀಯದಲ್ಲಿ ನಾಯಕರಾಗಿ ಬೆಳೆದು ಸಮುದಾಯಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಪ್ರಸ್ತುತ ಸಮುದಾಯದ ಯುವಕರಲ್ಲಿ ಹೆಚ್ಚು ತಿಳುವಳಿಕೆ ಬಂದಿದೆ. ಜನಸಂಖ್ಯೆ ಹೆಚ್ಚಿಲ್ಲದಿದ್ದರೂ ನಾವು ಬೆಳೆಯಬೇಕು ಎಂಬ ಹಂಬಲ ಹುಟ್ಟಿದೆ ಎಂದರು. ಹಲವು ಸಮುದಾಯಗಳು ದೊಡ್ಡದಾಗಿದ್ದರೂ ಸಣ್ಣ ಸಮುದಾಯಗಳು ಕೂಡ ತಮ ದನಿ ಎತ್ತಬಹುದು ಎಂಬುದಕ್ಕೆ ನಿಮ ಸಮಾಜ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಬಲಿಷ್ಠ ಸಮುದಾಯಗಳ ಶಾಸಕರು, ಸಂಸದರು ಸೇರಿದಂತೆ ಹಲವು ವಲಯಗಳಲ್ಲಿ ಪ್ರಾಧಾನ್ಯತೆ ಹೆಚ್ಚಾಗಿದೆ. ನೀವು ಕೂಡ ಒಗ್ಗಟ್ಟಾಗಿ ಸಂಘಟಿತರಾದರೆ ನಿಮಗೂ ಕೂಡ ಆ ಯೋಗ ಸಿಗುತ್ತದೆ ಎಂದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ಕಾಯಕ ಎಂಬುದು ಡೊಡ್ಡ ಕರ್ತವ್ಯ. ಅದನ್ನು ನಿಭಾಯಿಸಬೇಕು. ದೇಶದಲ್ಲಿ ಧ್ವನಿ ಇಲ್ಲದೆ ಇರುವ ಆನೇಕ ಸಮುದಾಯಗಳಿವೆ. ನಾಲ್ಕು ಮೆಮೋ ರೈಲುಗಳನ್ನು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಿಗೆ ಸಂಚರಿಸಲಿದೆ. ಕೇವಲ ದರ 35ರೂ. ನಿಗದಿ ಮಾಡಲಾಗಿದೆ. ತುಮಕೂರು-ಬೆಂಗಳೂರು ನಡುವೆ ಕೇವಲ 20ರೂ.ನಲ್ಲಿ ಮೆಮೋ ರೈಲಿನಲ್ಲಿ ಪ್ರಯಾಣ ಮಾಡಬಹುದು. ಇದೆಲ್ಲ ಯಶಸ್ಸಿಗೆ ಪ್ರಧಾನಿ ನರೇಂದ್ರಮೋದಿ ಕಾರಣ ಎಂದು ಹೇಳಿದರು.



ಪ್ರಧಾನಿ ನರೇಂದ್ರಮೋದಿ ಅವರು ರೈಲ್ವೆ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟರು. ಇದರಿಂದ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಲಭಿಸಲಿದೆ ಎಂದರು.
ಚುನಾವಣೆ ಬರುವುದು 5 ವರ್ಷಕ್ಕೆ ಒಂದು ಬಾರಿ. ಆದರೆ, ಆಯ್ಕೆ ಮಾಡಿದ ಜನರಿಗೆ ನ್ಯಾಯ ಒದಗಿಸಿದಾಗ ಅವರು ಉತ್ತಮ ಜನಪ್ರತಿನಿಧಿ ಎನಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಾದರ ಹಿಂದೂ ಸಮಾಜ ಚಿಕ್ಕ ಸಮಾಜವಿರಬಹುದು. ಅದರ ಸಾಧನೆಯಲ್ಲಿ ಸಾದರ ಹಿಂದೂ ಸಮಾಜ ಹಿಂದೆ ಬಿದ್ದಿಲ್ಲ. ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಾದರ ಹಿಂದೂ ಸಮಾಜ ಕೊಡುಗೆ ನೀಡುತ್ತಿದೆ.
ಸಹಕಾರಿ ಕ್ಷೇತ್ರ ಜನರ ಅಂದೋಲವಾಗಬೇಕು, ಜನರ ಹಿತಕ್ಕಾಗಿ ತಿದ್ದುಪಡಿ ಮಾಡಲಾಗಿದೆ. ಪಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಹಕಾರ ಸಂಸ್ಥೆ ಸಿಲುಕಬಾರದು. ನಿಮ ಹಣ ಮತ್ತು ನಿಮ ಮಾರ್ಗದರ್ಶನದಲ್ಲಿ ಸಹಕಾರ ಬ್ಯಾಂಕ್ ನಡೆಯುತ್ತದೆ ಎಂದರು.
ಸಮಾಜದಲ್ಲಿರುವ ವಿದ್ಯಾವಂತ, ಬುದ್ಧಿವಂತರು ಬರಿ ಕುಟುಂಬದ ಕಡೆ ಗಮನಹರಿಸದೇ ಹಿಂದೂ ಸಾದರ ಸಮಾಜ ಒಗ್ಗಾಟ್ಟಿಗೆ ಶ್ರಮಿಸಬೇಕು ಇದರಿಂದ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ರಾಜಕೀಯ ಶಕ್ತಿ ಸಿಗಲಿದೆ ಎಂದು ಹೇಳಿದರು.
ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಸಾದು ಸಂಗಮ ಸಮುದಾಯದ ಅಭಿವೃದ್ಧಿಗೆ ಸ್ಥಾಪನೆಯಾದ ಸಹಕಾರ ಬ್ಯಾಂಕ್ ಜನಾಂಗದ ಸಂಘಟನೆ ಮತ್ತು ಆರ್ಥಿಕ ಅಭಿವೃದ್ಧಿಯತ್ತ ಸಾಗುತ್ತಿದೆ. ಸಹಕಾರದಿಂದ, ಸಹಕಾರ ನೀಡಬೇಕು ಎಂಬ ತತ್ವದ ಮೇಲೆ ಸಾದು ಸಂಗಮ ಜನಾಂಗ ಸಹಕಾರ ಸಂಘ ಮೂಲಕ ಸಮುದಾಯದ ಸಂಘಟನೆಗೆ ಒತ್ತು ನೀಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷ ಬಿ.ಎನ್.ಲಕ್ಷಿಪತಿ ಮಾತನಾಡಿ, ಧ್ವನಿ ಇಲ್ಲದ ಸಮಾಜಕ್ಕೆ, ಧ್ವನಿಯಾಗಬೇಕು ಎಂದು ಸಾಧು ಸಂಗಮ ಪತ್ತಿನ ಸಹಕಾರ ಸಂಘ ದಿಟ್ಟ ಹೆಜ್ಜೆ ಇಟ್ಟದೆ. ಸಹಕಾರ ಸಂಘದ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡಿದಾಗ ಸಮುದಾಯ ಅಭಿವೃದ್ಧಿಯಾಗುತ್ತದೆ. ಹಿಂದೂ ಸಾದರ ಸಮಾಜದ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರ, ಪ್ರೋತ್ಸಾಹ ನೀಡಲಾಗುತ್ತಿದೆ.
600ಕ್ಕೂ ಹೆಚ್ಚು ಸದಸ್ಯರನ್ನು ಹೊಂದುವ ಮೂಲಕ ಸಾಧು ಸಂಗಮ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಲಾಯಿತು ಎಂದು ಹೇಳಿದರು.ನಟ ಮುಖ್ಯಮಂತ್ರಿ ಚಂದ್ರು, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಗೋಪಾಲಯ್ಯ, ಡಾ.ಅಶ್ವಥ್ ನಾರಾಯಣ, ಹಲವು ಗಣ್ಯರು ಪಾಲ್ಗೊಂಡಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.