Wednesday, January 8, 2025
Homeರಾಷ್ಟ್ರೀಯ | Nationalಭಾರತದಲ್ಲೂ ಹೆಚ್‌ಎಂವಿಪಿ ವೈರಸ್ ಪತ್ತೆ, ಆತಂಕಪಡುವ ಅಗತ್ಯವಿಲ್ಲ ಎಂದ ಕೇಂದ್ರ ಸರ್ಕಾರ

ಭಾರತದಲ್ಲೂ ಹೆಚ್‌ಎಂವಿಪಿ ವೈರಸ್ ಪತ್ತೆ, ಆತಂಕಪಡುವ ಅಗತ್ಯವಿಲ್ಲ ಎಂದ ಕೇಂದ್ರ ಸರ್ಕಾರ

HMVP Virus Reaches India: Two Infants Test Positive in Bengaluru

ನವದೆಹಲಿ,ಜ.6- ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಚೀನಾದಲ್ಲಿ ಕಾಣಿಸಿಕೊಂಡಿರುವ ಹ್ಯೂಮನ್‌ಮೆಟಫೆಮೊ ವೈರಸ್‌‍(ಹೆಚ್‌ಎಂವಿಪಿ) ಕಾಣಿಸಿಕೊಂಡಿದ್ದರೂ ದೇಶದ ಜನತೆ ಆತಂಕಪಡುವ ಅಗತ್ಯವಿಲ್ಲ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪ್ರತಿ ಚಳಿಗಾಲದ ಸಮಯದಲ್ಲಿ ಹೊಸ ಸ್ವರೂಪದ ಸೋಂಕು ಕಾಣಿಸಿಕೊಳ್ಳುವುದು ಸಹಜ ಪ್ರಕ್ರಿಯೆ. ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಕಾಣಿಸಿಕೊಂಡಿರುವ ಸೋಂಕು ಎಚ್‌ಎಂವಿಪಿ ಎಂಬುದು ಈವರೆಗೂ ದೃಢಪಟ್ಟಿಲ್ಲ. ಇದನ್ನು ಪೂನಾ ಮತ್ತು ಹೈದರಾಬಾದ್‌ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಅಲ್ಲಿಂದ ವರದಿ ಬಂದನಂತರ ನಿಜಾಂಶ ತಿಳಿಯಲಿದೆ. ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಎಂದು ಕೇಂದ್ರ ಸರ್ಕಾರ ಅಭಯ ನೀಡಿದೆ.

ಚೀನಾದಲ್ಲಿ ಹ್ಯೂಮನ್‌ ಮೆಟಾನ್ಯುಮೋ ವೈರಸ್‌‍ (ಎಚ್‌ಎಂಪಿವಿ) ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಐಎಲ್‌ಐ, ಸಾರಿ ಪ್ರಕರಣಗಳು ಕಂಡುಬಂದರೆ ಪರೀಕ್ಷೆ ಮಾಡುವಂತೆ ಸಲಹೆ ನೀಡಿದೆ.

ಚೀನಾದಲ್ಲಿ ಆತಂಕ ಮೂಡಿಸಿರುವ ಎಚ್‌ಎಂವಿಪಿ ಸೋಂಕಿನ ಬಗ್ಗೆ ಪ್ರತಿಯೊಂದು ಚಲನವಲನಗಳ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಆಧಾರರಹಿತ ಸುದ್ದಿಗಳನ್ನು ನಂಬಬಾರದು. ದಿನದ ಬೆಳವಣಿಗೆಗಳ ಬಗ್ಗೆ ರಾಷ್ಟ್ರೀಯ ಸೋಂಕು ನಿಯಂತ್ರಣ ಕೇಂದ್ರ( ಎನ್‌ಸಿಡಿಸಿ) ನೀಡುವ ಮಾಹಿತಿಗಳು ಮಾತ್ರ ನಂಬಲಾರ್ಹವಾದುದು ಎಂದು ಕೇಂದ್ರವು ತಿಳಿಸಿದೆ.

ನಾವು ಬೆಂಗಳೂರಿನಲ್ಲಿ ಮಗುವಿಗೆ ಕಾಣಿಸಿಕೊಂಡಿರುವ ಸೋಂಕಿನ ಬಗ್ಗೆ ಅಲ್ಲಿನ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಮಗ್ರ ವಿವರವನ್ನು ನೀಡುವಂತೆ ಸೂಚಿಸಿದ್ದೇವೆ. ಎರಡು ಪ್ರಯೋಗಾಲಯಗಳ ವರದಿ ಶೀಘ್ರದಲ್ಲೇ ಕೈ ಸೇರಲಿದೆ ಎಂದು ಕೇಂದ್ರದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಅತುಲ್‌ ಗೋಯಲ್‌ ತಿಳಿಸಿದ್ದಾರೆ.

ಸೋಂಕಿನ ಸ್ವರೂಪ ಕುರಿತು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಮತ್ತು ಸಂಬಂಧಿಸಿದ ಬೆಳವಣಿಗೆಗಳತ್ತ ನಿರಂತರವಾಗಿ ನಿಗಾ ಇಡಲಾಗಿದೆ. ಸಾರ್ವತ್ರಿಕವಾಗಿ ಮುನ್ನೆಚ್ಚರಿಕೆ ನೀಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಎಚ್‌ಎಂಪಿವಿ ಸೋಂಕು ಚೀನಾದಲ್ಲಿ ವ್ಯಾಪಿಸಿದೆ ಎಂಬ ವರದಿಗಳು ಸಾಕಷ್ಟು ಹರಿದಾಡುತ್ತಿವೆ. ಭಾರತದಲ್ಲಿ ಉಸಿರಾಟದ ಸಮಸ್ಯೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ನಾವು ವಿಶ್ಲೇಷಿಸಿದ್ದೇವೆ. ಇದು ಗಣನೀಯವಾಗಿ ಏರಿಕೆ ಕಂಡಿಲ್ಲ. ದೊಡ್ಡಸಂಖ್ಯೆಯಲ್ಲಿ ಜನರಿಗೆ ಬಾಧಿಸಿರುವ ವರದಿಗಳಿಲ್ಲ. ಪ್ರಸ್ತುತ ಸ್ಥಿತಿ ಕುರಿತು ಮುನ್ನೆಚ್ಚರಿಕೆ ನೀಡುವ ಅಗತ್ಯವೂ ಇಲ್ಲ ಎಂದೂ ವಿವರಿಸಿದರು.

ಉಸಿರಾಟದ ಸೋಂಕು ಸಮಸ್ಯೆಗಳು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಲಿವೆ. ಸಹಜವಾಗಿಯೇ ನಮ ಆಸ್ಪತ್ರೆಗಳು ಕೂಡ ಅಗತ್ಯ ಔಷಧ, ಹಾಸಿಗೆ ಸೌಲಭ್ಯದೊಂದಿಗೆ ಪರಿಸ್ಥಿತಿ ಎದುರಿಸಲು ಸಜ್ಜಾಗಿರುತ್ತವೆ ಎಂದು ಗೋಯಲ್‌ ತಿಳಿಸಿದ್ದಾರೆ.

ಆದರೂ ಸಾರ್ವಜನಿಕರು ಸಾಮಾನ್ಯವಾಗಿ ಪಾಲಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಉಸಿರಾಟ ಸಮಸ್ಯೆ ನಿವಾರಣೆಗೆ ಅಗತ್ಯ ಸಲಹೆಗಳನ್ನು ಪಾಲಿಸಬೇಕು ಹಾಗೂ ಶೀತ ಮತ್ತು ಜ್ವರ ಸಮಸ್ಯೆಗೆ ಲಭ್ಯವಿರುವ ಸಾಮಾನ್ಯ ಔಷಧವನ್ನೇ ಪಡೆಯಬಹುದು ಎಂದು ಹೇಳಿದ್ದಾರೆ.

ಚಳಿಗಾಲದಲ್ಲಿ ಉಸಿರಾಟದ ವೈರಸ್‌‍ ಸೋಂಕುಗಳು ಉಲ್ಬಣವಾಗುವುದು ಸಾಮಾನ್ಯ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು. ಕೆಮು, ಶೀತ ಬಂದಾಗ ಪ್ರತ್ಯೇಕ ಕರವಸ್ತ್ರ ಅಥವಾ ಟವೆಲ್‌ ಬಳಸಿ ಎಂದು ಅವರು ಸಲಹೆ ನೀಡಿದ್ದಾರೆ.
ಎಚ್‌ಎಂಪಿವಿ ಈ ಋತುಮಾನದಲ್ಲಿ ಕಂಡುಬರುವ ಸಾಧಾರಣ ಸೋಂಕಿನಲ್ಲಿ ಒಂದಾಗಿದೆ. ಇದರಿಂದ ಉಸಿರಾಟದ ಸಮಸ್ಯೆ, ಜ್ವರ, ಕೆಮು, ಕಫ ಕಾಣಿಸಿಕೊಳ್ಳುತ್ತದೆ. ಸೀನುವುದು ಅಥವಾ ಕೆಮುವುದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಸೀನುವಾಗ ಅಥವಾ ಕೆಮುವಾಗ ಮಾಸ್ಕ್‌ ಧರಿಸಬೇಕು. ವೈಯಕ್ತಿಕ ಶುಚಿತ್ವ ಕಾಯ್ದುಕೊಳ್ಳುವುದು ಅಗತ್ಯ ಎಂದು ತಿಳಿಸಿದ್ದಾರೆ.

ಗಂಭೀರ ಪರಿಣಾಮ ಇಲ್ಲ:
ಹೆಚ್‌ಎಂವಿಪಿ ವೈರಸ್‌‍ ಭಾರತದ ಮಟ್ಟಿಗೆ ತೀರಾ ಗಂಭೀರವಾದ ಪರಿಣಾಮ ಬೀರುವುದಿಲ್ಲ. ಸಾಮಾನ್ಯ ವೈರಸ್‌‍ಗಳಂತೆ ಜ್ವರದಂತಹ ರೋಗ ಲಕ್ಷಣವಿರುತ್ತದೆ. ವಯೋವೃದ್ಧರು ಹಾಗೂ ಒಂದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಕಂಡುಬರುವ ಸಾಧ್ಯತೆಗಳಿವೆ. ಇದು ಒಂದು ಸಾಮಾನ್ಯ ವೈರಸ್‌‍ ಮಾತ್ರ. ಮಾನವ ಹೃದಯದ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ಇಲ್ಲ.

ಎಚ್‌ಎಂಪಿವಿ ವೈರಸ್‌‍ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲಾ ರಾಜ್ಯದ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಐಎಲ್‌ಐ, ಸಾರಿ ಪ್ರಕರಣಗಳು ಕಂಡುಬಂದರೆ ಪರೀಕ್ಷೆ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೇ ಈ ಸೋಂಕಿನ ಕುರಿತು ಆತಂಕಪಡುವ ಅಗತ್ಯವಿಲ್ಲ.

RELATED ARTICLES

Latest News