ಹೊಸದಿಲ್ಲಿ, ಅ.15- ಬೆಂಗಳೂರಿನ ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‍ಎಐ)ದಲ್ಲಿ ನಾಳೆಯಿಂದ ನಡೆಯಲಿರುವ ರಾಷ್ಟ್ರೀಯ ಕೋಚಿಂಗ್ ಶಿಬಿರಕ್ಕಾಗಿ ಹಾಕಿ ಇಂಡಿಯಾ 34 ಸದಸ್ಯರ ಪ್ರಮುಖ ಸಂಭಾವ್ಯ ಪಟ್ಟಿಯನ್ನು ಇಂದು ಪ್ರಕಟಿಸಿದೆ.
ರಾಷ್ಟ್ರೀಯ ಶಿಬಿರ ಅಕ್ಟೋಬರ್ 22 ರಂದು ಮುಕ್ತಾಯಗೊಳ್ಳಲಿದ್ದು, ಪ್ರತಿಷ್ಠಿತ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಅಕ್ಟೋಬರ್ 27 ರಿಂದ ರಾಂಚಿಯಲ್ಲಿ ಆರಂಭವಾಗಲಿದೆ. ಮೊದಲ ಬಾರಿಗೆ ಭಾರತದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ಇದರಲ್ಲಿ ಹಾಲಿ ಚಾಂಪಿಯನ್ ಚೀನಾ, ಜಪಾನ್, ಕೊರಿಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ ತಂಡಗಳು ಭಾಗವಹಿಸಲಿವೆ.
ಬರಗಾಲವಿದ್ದರೂ ವೈಭವಕ್ಕೆ ಕೊರತೆ ಇಲ್ಲದಂತೆ ದಸರಾ ಆಚರಣೆ : ಸಿಎಂ
ಭಾರತ ಥಾಯ್ಲೆಂಡ್‍ನೊಂದಿಗೆ ಪಂದ್ಯದ ಮೂಲಕ ತನ್ನ ಕ್ರೀಡಾ ಅಭಿಯಾನವನ್ನು ಆರಂಭಿಸಲಿದೆ. ಭಾರತದ ಮುಖ್ಯ ಕೋಚ್ ಜನ್ನೆಕೆ ಸ್ಕೋಪ್‍ಮನ್ ಮಾತನಾಡಿ, ಒಂದು ವಾರದ ಶಿಬಿರವು ಮೌಲ್ಯಮಾಪನ ಮತ್ತು ಸುಧಾರಣೆಯ ಅಗತ್ಯವಿರುವ ವಿಷಯಗಳ ಮೇಲೆ ಗಮನ ಹರಿಸಲಿದೆ. ಈಗಿನಿಂದ ಒಲಿಂಪಿಕ್ ಅರ್ಹತಾ ಪಂದ್ಯಗಳವರೆಗೆ ನಾವು ಆಡುವ ಪ್ರತಿಯೊಂದು ಪಂದ್ಯಾವಳಿಯು ನಮಗೆ ಪ್ರಮುಖವಾಗಿರುತ್ತದೆ, ತಂಡವಾಗಿ ಸುಧಾರಿಸಲು ನಮಗೆ ಉತ್ತಮ ಅವಕಾಶ ನೀಡಿದೆ. ನಾವು ರಾಂಚಿಗೆ ತೆರಳುವ ಮೊದಲು ಇದು ಬೆಂಗಳೂರಿನಲ್ಲಿ ನ ಅಭ್ಯಾಸ ಬಹಳ ಮುಖ್ಯವಾಗಿದೆ ಎಂದಿದ್ದಾರೆ.
ಏಷ್ಯನ್ ಗೇಮ್ಸ್‍ನಲ್ಲಿ ನಮ್ಮ ಪ್ರದರ್ಶ ಸಾಮಥ್ರ್ಯ ಕುರಿತು ಮೌಲ್ಯಮಾಪನ ನಡೆಯುತ್ತಿದೆ. ಸ್ವಲ್ಪ ವಿರಾಮದ ನಂತರ ಆಟಕ್ಕೆ ಮರಳುತ್ತಿರುವ ಆಟಗಾರರು ಮುಂಬರುವ ಸವಾಲನ್ನು ತೆಗೆದುಕೊಳ್ಳಲು ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದು ಸ್ಕೋಪ್‍ಮನ್ ಹೇಳಿದ್ದಾರೆ.
ಸಂಭವನೀಯರು: ಗೋಲ್‍ಕೀಪರ್‍ಗಳು ಸವಿತಾ, ರಜನಿ ಎಟಿಮಾರ್ಪು, ಬಿಚ್ಚು ದೇವಿ, ಬನ್ಸಾರಿ ಸೋಲಂಕಿ.
ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಅಕ್ಷತಾ ಧೇಕಲೆ, ಜ್ಯೋತಿ ಛಾತ್ರಿ, ಮಹಿಮಾ ಚೌಧರಿ.
ಮಿಡ್‍ಫೀಲ್ಡರ್‍ಗಳು: ನಿಶಾ, ಸಲಿಮಾ ಟೆಟೆ, ಸುಶೀಲಾ ಚಾನು, ಜ್ಯೋತಿ, ನವಜೋತ್ ಕೌರ್, ಮೋನಿಕಾ, ಮರೀನಾ ಕುಜೂರ್, ಸೋನಿಕಾ, ನೇಹಾ, ಬಲ್ಜೀತ್ ಕೌರ್, ರೀನಾ ಖೋಖರ್, ವೈಷ್ಣವಿ ಫಾಲ್ಕೆ, ಅಜ್ಮಿನಾ ಕುಜೂರ್.
ಫಾರ್ವರ್ಡ್‍ಗಳು: ಲಾಲ್ರೆಮ್ಸಿಯಾಮಿ, ನವನೀತ್ ಕೌರ್, ವಂದನಾ ಕಟಾರಿಯಾ, ಶರ್ಮಿಳಾ ದೇವಿ, ದೀಪಿಕಾ, ಸಂಗೀತಾ ಕುಮಾರಿ, ಮುಮ್ತಾಜ್ ಖಾನ್, ಸುನೆಲಿತಾ ಟೊಪ್ಪೋ, ಬ್ಯೂಟಿ ಡಂಗ್‍ಡಂಗ್ ಅವರು ಸಂಭ್ಯವನೀಯ ಪಟ್ಟಿಯಲ್ಲಿದ್ದಾರೆ.