ನವದೆಹಲಿ,ಮೇ7- ರಜೆಯಲ್ಲಿರುವ ತಮ್ಮ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಅರೆಸೈನಿಕ ಪಡೆಗಳ ಮುಖ್ಯಸ್ಥರಿಗೆ ಗೃಹ ಸಚಿವ ಅಮಿತ್ ಶಾ ಆದೇಶ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆಪರೇಷನ್ ಸಿಂಧೂರ್ ಮುಗಿದ ನಂತರವೂ ಈ ರೀತಿಯ ಆದೇಶ ಕೊಟ್ಟಿದ್ಯಾಕೆ ಅಮಿತ್ ಶಾ ಮತ್ತೊಂದು ದಾಳಿಗೆ ಸಜ್ಜಾಗುತ್ತಿದೆಯಾ ಭಾರತ ಎಂಬ ಪ್ರಶ್ನೆ ಮೂಡುವಂತೆ ಈ ಮಾಡಿದೆ ಈ ಆದೇಶ.
ಮಹತ್ವದ ಆದೇಶ ಹೊರಡಿಸಿದ ಅಮಿತ್ ಶಾ: ಆಪರೇಷನ್ ಸಿಂಧೂರ್ ಯಶಸ್ವಿಯಾದ ಬೆನ್ನಲ್ಲಿಯೇ ಮಹತ್ವದ ಆದೇಶವನ್ನು ಅಮಿತ್ ಶಾ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ದಾಳಿಗೆ ತತ್ತರಿಸಿದ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಕೊಡಲು ಭಾರತ ಸಜ್ಜಾಗಿದಿಯೇ ಎಂ ಪ್ರಶ್ನೆ ಉದ್ಭವವಾಗಿದೆ.
ಪಾಕಿಸ್ತಾನದ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ ಆಪರೇಷನ್ ಸಿಂಧೂರ್ ನಡೆದ ಬೆನ್ನಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಆದೇಶ ಕೊಟ್ಟಿದ್ದಾರೆ. ಆಪರೇಷನ್ ಸಿಂಧೂರ್ ದಾಳಿಯ ನಂತರ ಪಹಲ್ಟಾಮ್‌ನ ಕ್ರೂರ ಪರೇಷನ್ ಸಿಂಧೂರ್ ನಮ್ಮ ಉತ್ತರ ಎಂದ ಅಮಿತ್ ಶಾ ಅವರು ಈಗ ಆಪರೇಷನ್ ಸಿಂಧೂರ್‌ಗಿಂತ ದೊಡ್ಡದಾದ ಅಪರೇಷನ್ ನಡೆಯುಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಆಪರೇಷನ್ ಸಿಂಧೂರ್ ನಡೆದ ನಂತರ ಪ್ರಮುಖ ರಾಜಕಾರಣಿಗಳು, ಭಾರತದ ಸೆಲೆಬ್ರಿಟಿಗಳು ಭಾರತೀಯ ಸೇನೆಗೆ ಗೌರವ ತೋರಿಸಿ ಬೆಂಬಲಿಸಿ ಟ್ವಿಟ್ ಮಾಡುತ್ತಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೂಡಾ ಆಪರೇಷನ್ ಸಿಂಧೂರ್ ಬಗ್ಗೆ ಟ್ವಿಟ್ ಮಾಡಿದ್ದರು.