Thursday, September 4, 2025
Homeರಾಜ್ಯಜಾಗತಿಕ ಮಾದರಿಯ ಏಕರೂಪ ಜಿಎಸ್‌‍ಟಿಗೆ ಗೃಹ ಸಚಿವ ಪರಮೇಶ್ವರ್‌ ಆಗ್ರಹ

ಜಾಗತಿಕ ಮಾದರಿಯ ಏಕರೂಪ ಜಿಎಸ್‌‍ಟಿಗೆ ಗೃಹ ಸಚಿವ ಪರಮೇಶ್ವರ್‌ ಆಗ್ರಹ

ಬೆಂಗಳೂರು, ಸೆ 4- ಜೀವನಾವಶ್ಯಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ, ಜಾಗತಿಕ ಮಾದರಿಯ ಆಧಾರದಲ್ಲಿ ಏಕರೂಪ ಜಿಎಸ್ಟಿಯನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಲ್ಲಿ ದೈನಂದಿನ ಬಳಕೆಯ ಸರಕು ಮತ್ತು ಸೇವೆಗಳಿಗೆ ಶೇ.18, 22, 28ರಷ್ಟು ತೆರಿಗೆ ವಿಧಿಸಲಾಗಿದೆ. ಅದನ್ನು ಕಡಿಮೆ ಮಾಡಬೇಕು. ಎಲ್ಲಾ ಪದಾರ್ಥಗಳ ಮೇಲೂ ಶೇ. 5ರಿಂದ 6ರ ಒಳಗೆ ಜಿಎಸ್ಟಿ ಮಿತಿಗೊಳಿಸಬೇಕು. ಜನಸಾಮಾನ್ಯರ ಬಳಕೆಯ ವಸ್ತುಗಳಿಗೆ ಜಿಎಸ್ಟಿ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು.

ಜಿಎಸ್ಟಿ ಕಡಿಮೆ ಮಾಡುವಂತೆ ಕಾಂಗ್ರೆಸ್‌‍ ಪಕ್ಷ ಸದನದ ಹೊರಗೆ ಮತ್ತು ಒಳಗೆ ಆಗ್ರಹಿಸಿತ್ತು. ಕೇಂದ್ರ ಸರ್ಕಾರಕ್ಕೆ ಈಗ ಅರಿವಾದಂತಿದೆ. ಕೆಲ ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು. ಬೇರೆ ಬೇರೆ ದೇಶಗಳಲ್ಲಿರುವ ಜಿಎಸ್ಟಿ ತೆರಿಗೆ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು. ಬಹುತೇಕ ದೇಶಗಳಲ್ಲಿ ಶೇ. 10ಕ್ಕಿಂತ ಹೆಚ್ಚಿನ ತೆರಿಗೆಯಿಲ್ಲ. ಆದರೆ ನಮಲ್ಲಿ ಶೇ.28ರ ವರೆಗೂ ದುಬಾರಿಯಾಗಿದೆ ಎಂದರು.

ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕು. ಆ ಸಂಪನೂಲವನ್ನು ಎಲ್ಲಿಂದ ಕ್ರೋಡೀಕರಿಸಬೇಕು ಎಂಬುದನ್ನು ಹಣಕಾಸು ಇಲಾಖೆ ಪರಿಶೀಲನೆ ಮಾಡಬೇಕು. ದೇಶದಲ್ಲೇ ಕರ್ನಾಟಕ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದೆ. ಪ್ರತಿ ತಿಂಗಳು ಸುಮಾರು 12 ಸಾವಿರ ಕೋಟಿ ರೂ.ಗಳಷ್ಟು ಪಾವತಿಸುತ್ತಿದ್ದೇವೆ. ತೆರಿಗೆ ಕಡಿಮೆ ಮಾಡುವುದರಿಂದ ರಾಜ್ಯ ಸರ್ಕಾರಗಳಿಗೂ ನಷ್ಟವಾಗಬಹುದು. ಅದನ್ನು ಭರಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಮತ್ತು ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನವನ್ನು ಕಡಿಮೆ ಮಾಡಬಾರದು ಎಂದು ಒತ್ತಾಯಿಸಿದರು.

ಶಾಸಕ ಕೆ.ಎನ್‌.ರಾಜಣ್ಣ ಕಾಂಗ್ರೆಸ್‌‍ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಅವರು ಪಕ್ಷವನ್ನು ಬಿಡುವುದೂ ಇಲ್ಲ. ಅನಗತ್ಯವಾಗಿ ಸೃಷ್ಟಿಸಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ ಎಂದು ಟೀಕಕಾರರಿಗೆ ತಿರುಗೇಟು ನೀಡಿದರು. ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಒಳ್ಳೆಯದು, ಕೆಟ್ಟದ್ದು ಎರಡನ್ನೂ ಮಾತನಾಡುತ್ತಾರೆ. ರಾಜಣ್ಣ ನನ್ನ ವಿರುದ್ಧ ಮಾತನಾಡಿರಬಹುದು, ಅದು ಸಮಯ ಸಂದರ್ಭ ಅನುಸಾರ ಆಗಿರುತ್ತದೆ. ಅದರ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ರಾಜಣ್ಣ ನಮ ಜಿಲ್ಲೆಯವರು. ನನಗೆ ಆತೀಯ ಸ್ನೇಹಿತ. ನಾನು ಮತ್ತು ಅವರು ಪಿಯುಸಿಯಲ್ಲಿ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಒಂದೇ ತರಗತಿಯಲ್ಲಿದ್ದವರು ಎಂದು ಹೇಳಿದರು.

ಸಂಪುಟದಿಂದ ಕೈ ಬಿಟ್ಟ ಬಳಿಕವೂ ರಾಜಣ್ಣ ಕಾಂಗ್ರೆಸ್‌‍ ತೊರೆಯುತ್ತೇನೆಂದು ಎಂದು ಹೇಳಿಲ್ಲ. ಅವರ ವಿಚಾರದಲ್ಲಿ ಸೃಷ್ಟಿಸಿಕೊಂಡು ಮಾತನಾಡುವುದು ಒಳ್ಳೆಯದಲ್ಲ ಎಂದರು.
ಅಪೆಕ್‌್ಸ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ರಾಜಣ್ಣ ಸಚಿವರಾಗಿದ್ದಾಗ ಪಕ್ಷ ನಿಷ್ಠೆ ಮರೆತರು ಎಂಬುದು ಸರಿಯಲ್ಲ. ಈ ರೀತಿಯ ಆರೋಪಗಳಿಗೆ ಸೂಕ್ತ ಪುರಾವೆಗಳು ಬೇಕು. ಹೇಳಿಕೆಗಳಿಗೋಸ್ಕರ ಹೇಳಿಕೆ ನೀಡುವುದು ಸರಿಯಲ್ಲ. ರಾಜಣ್ಣ ಪಕ್ಷ ಬಿಡುವುದಿಲ್ಲ, ಬ್ರೈನ್‌ ಮ್ಯಾಪಿಂಗ್‌ ಸೇರಿದಂತೆ ಯಾವುದೇ ವಿಚಾರಗಳು ಇದ್ದರೆ, ಆರೋಪ ಮಾಡಿದವರೇ ಪ್ರತಿಕ್ರಿಯಿಸಬೇಕು. ರಾಜಣ್ಣ ಒಂಟಿಯಲ್ಲ, ಕಾಂಗ್ರೆಸ್‌‍ ಅವರ ಜೊತೆಗಿದೆ ಎಂದರು.

RELATED ARTICLES

Latest News