Thursday, January 2, 2025
Homeರಾಜ್ಯಹೊಸ ವರ್ಷಾಚರಣೆ ವೇಳೆ ಸ್ವಯಂ ನಿಯಂತ್ರಣವಿರಲಿ : ಗೃಹಸಚಿವ ಪರಮೇಶ್ವರ್

ಹೊಸ ವರ್ಷಾಚರಣೆ ವೇಳೆ ಸ್ವಯಂ ನಿಯಂತ್ರಣವಿರಲಿ : ಗೃಹಸಚಿವ ಪರಮೇಶ್ವರ್

Home Minister Parameshwara Advice On New year Celebration

ಬೆಂಗಳೂರು,ಡಿ.30– ಹೊಸ ವರ್ಷದ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳು ಹಾಗೂ ಸ್ವಯಂ ನಿಯಂತ್ರಣದ ಮೂಲಕ ಸಂಭ್ರಮಾಚರಣೆ ಮಾಡುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ರವರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಆಚರಣೆ
ಯಲ್ಲಿ ಎಚ್ಚರಿಕೆಯಿಂದ ನಿಮ ಸಂತೋಷವನ್ನು ಹಂಚಿಕೊಳ್ಳಿ. ಹಿಂದೆಲ್ಲಾ ಆಚರಣೆಯ ವೇಳೆ ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡಿರುವುದನ್ನು ಬೆಂಗಳೂರು ಹಾಗೂ ಹೊರಭಾಗದ ಅನೇಕ ಜಿಲ್ಲೆಗಳಲ್ಲಿ ನೋಡಿದ್ದೇವೆ ಎಂದು ಹೇಳಿದರು.

ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಪ್ರತಿವರ್ಷವೂ 7 ರಿಂದ 8 ಲಕ್ಷ ಮಂದಿ ಬೆಂಗಳೂರಿನಲ್ಲಿ ಸೇರುವುದನ್ನು ನೋಡುತ್ತಿದ್ದೇವೆ. ಈ ವರ್ಷ ಇನ್ನೂ ಸ್ವಲ್ಪ ಹೆಚ್ಚು ಜನ ಸೇರುವ ಸಾಧ್ಯತೆಯಿದೆ. ಅದಕ್ಕಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂದರು.

ಹೆಚ್ಚಿನ ಪೊಲೀಸರನ್ನು ಭದ್ರತಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳಿಗೂ ಜವಾಬ್ದಾರಿ ವಹಿಸಲಾಗಿದೆ. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು. ಯಾರಿಗೂ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಹಾಗೂ ಸ್ವಯಂ ರಕ್ಷಣೆ ಕೂಡ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹೋಟೆಲ್ ಹಾಗೂ ರೆಸ್ಟೋರೆಂಟ್ ವ್ಯಾಪಾರ ವಹಿವಾಟುಗಳಿಗೂ ರಾತ್ರಿ 1 ಗಂಟೆಯವರೆಗೂ ನಿಯಮಾನುಸಾರ ಕಾಲಾವಕಾಶವಿದೆ. ಅದರ ನಂತರ ವ್ಯಾಪಾರಕ್ಕೆ ಅವಕಾಶ ನೀಡುವುದು ಕಷ್ಟವಾಗಿದೆ ಎಂದು ಹೇಳಿದರು.

RELATED ARTICLES

Latest News