Sunday, March 23, 2025
Homeರಾಜ್ಯಹನಿಟ್ರ್ಯಾಪ್‌ ಪ್ರಕರಣಗಳ ಕುರಿತು ಗೃಹಸಚಿವ ಪರಮೇಶ್ವರ್‌ ಮೌನ

ಹನಿಟ್ರ್ಯಾಪ್‌ ಪ್ರಕರಣಗಳ ಕುರಿತು ಗೃಹಸಚಿವ ಪರಮೇಶ್ವರ್‌ ಮೌನ

Home Minister Parameshwara remains silent on honey trap cases

ಬೆಂಗಳೂರು,ಮಾ.22- ಹನಿಟ್ರ್ಯಾಪ್‌ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು ತಾವು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌ ಪ್ರಕರಣದಲ್ಲಿ ಬಹಳ ಸೂಕ್ಷ್ಮ ಪ್ರಶ್ನೆಗಳು ಉದ್ಭವಿಸುತ್ತವೆ. ಆಫ್‌ ದಿ ಕಪ್‌ ಏಕಾಏಕಿ ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸುವುದು ಸರಿಯಲ್ಲ. ತುಂಬಾ ಸೆನ್ಸಿಟಿವಿಟಿ ಇದೆ ಎಂದು ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ವಾಟಾಳ್‌ ನಾಗರಾಜ್‌ರವರು ಮೂರು ದಿನಗಳ ಹಿಂದೆಯೇ ಬಂದ್‌ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ಅಧಿಕಾರಿಗಳ ಜೊತೆ ಚರ್ಚಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌‍ ಮುಖ್ಯಾಧಿಕಾರಿಗಳನ್ನು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

ಪೊಲೀಸ್‌‍ ಮಹಾ ನಿರ್ದೇಶಕರು, ಪೊಲೀಸ್‌‍ ಆಯುಕ್ತರು ನಿಗಾ ವಹಿಸಿದ್ದು ಯಾವುದೇ ಅಹಿತಕರ ಘಟನೆಗಳಾಗದಂತೆ ಗಮನ ಹರಿಸುತ್ತಿದ್ದಾರೆ.ಯಾವುದೇ ರೀತಿಯ ತೊಂದರೆಗಳಾದರೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶಾಂತಿ ಸುವ್ಯವಸ್ಥೆ ಉತ್ತಮವಾಗಿದೆ. ಮಧ್ಯಾಹ್ನ ಅಥವಾ ಸಂಜೆವರೆಗೂ ಬಂದ್‌ ಮೇಲೆ ನಿಗಾ ವಹಿಸಿ ಅಹಿತಕರ ಘಟನೆಗಳಾಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

RELATED ARTICLES

Latest News