Monday, October 20, 2025
Homeಜಿಲ್ಲಾ ಸುದ್ದಿಗಳು | District Newsದಕ್ಷಿಣ ಕನ್ನಡ | Dakshina Kannadaಹನಿಟ್ರ್ಯಾಪ್‌ಗೆ ಬಲಿಯಾದ ಯುವಕ, ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ

ಹನಿಟ್ರ್ಯಾಪ್‌ಗೆ ಬಲಿಯಾದ ಯುವಕ, ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ

honeytrap : young man commits suicide by writing a death note.

ಮಂಗಳೂರು,ಅ.20-ಹನಿಟ್ಯಾಪ್‌ಗೆ ಯುಕನೊಬ್ಬ ಬಲಿಯಾಗಿರುವ ಘಟನೆ ಇಲ್ಲಿನ ಕದ್ರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ಪರಪ್ಪಾಡಿ ನಿವಾಸಿ .ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌(26) ಆತಹತ್ಯೆ ಮಾಡಿಕೊಂಡ ಯುವಕ.

ತನ್ನ ಖಾಸಗಿ ವಿಡಿಯೋ ಬಳಸಿ ನಾಲ್ವರು ತನಗೆ ಬ್ಲಾಕ್‌ಮೇಲ್‌‍ ಮಾಡುತ್ತಿದ್ದಾರೆ ಎಂದು ಡೆತ್‌ ನೋಟ್‌ ಬರೆದಿಟ್ಟು ಆತಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಈ ಪ್ರಕರಣದ ದಾಖಲಿಸಿ ನಿರೀಕ್ಷಾ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ನಿರೀಕ್ಷಾ ಹಾಗೂ ಇನ್ನಿಬ್ಬರು ಯುವತಿಯರು ಕುದ್ಕೋರಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ನಿರೀಕ್ಷಾ ತನ್ನ ರೂಮ್‌ ಮೇಟ್‌ ಯುವತಿಯರು ಬಟ್ಟೆ ಬದಲಿಸುವುದನ್ನು ರಹಸ್ಯವಾಗಿ ವಿಡಿಯೋ ಮಾಡಿಕೊಂಡು ವೈರಲ್‌ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದಲ್ಲದೆ ಈ ವಿಡಿಯೋಗಳನ್ನು ಅಭಿಷೇಕ್‌ಗೆ ಕಳುಹಿಸಿದ್ದಳು.

ಈ ವೇಳೆ ಅಭಿಷೇಕ್‌ ಎಂಬ ವಾಟ್ಸಾಪ್‌ ಗುಂಪು ರಚಿಸಿ ಅದರಲ್ಲಿ ಈ ಯುವತಿಯರ ವಿಡಿಯೋ ಸೇರಿದಂತೆ ಕೆಲವು ವಿಡಿಯೋಗಳನ್ನು ಹಾಕಿದ್ದರು. ಈ ಘಟನೆಯಿಂದ ಆಘಾತಗೊಂಡ ಸಂತ್ರಸ್ತ ಯುವತಿಯರು ಕದ್ರಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕದ್ರಿ ಪೊಲೀಸರು ನಿರೀಕ್ಷಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಡೆತ್‌ ನೋಟ್‌ ನಲ್ಲಿ ತಾನು ಪ್ರೀತಿಸಿದ ಹುಡುಗಿ ನಿರೀಕ್ಷಾ, ಆಕೆಯ ತಂಡದಲ್ಲಿದ್ದ ಮಂಗಳೂರು ಮೂಲದ ರಾಕೇಶ್‌ ,ರಾಹುಲ್‌ ಹಾಗೂ ತಸ್ಲೀಮ್‌ ಸಾವಿಗೆ ಕಾರಣ ಎಂದು ಬರೆದಿದ್ದಾನೆ. ಅವರು ಹಣಕ್ಕಾಗಿ ತೀವ್ರ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಇವರು ತಂಡವಾಗಿ ಅನೇಕ ಜನರನ್ನು ಅಶ್ಲೀಲ ಫೋಟೋ ಬಳಸಿ ವಂಚಿಸಿದ್ದಾರೆ ಎಂದು ಬರೆದಿದ್ದಾನೆ.ಘಟನೆ ಕುರಿತು ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Latest News