Tuesday, April 1, 2025
Homeರಾಜ್ಯಜೀನ್ಸ್ ಧರಿಸಿದ್ದ ಯುವತಿಯಿಂದ ಹನಿಟ್ರ್ಯಾಪ್‌ ಯತ್ನ : ಕೆ.ಎನ್‌.ರಾಜಣ್ಣ

ಜೀನ್ಸ್ ಧರಿಸಿದ್ದ ಯುವತಿಯಿಂದ ಹನಿಟ್ರ್ಯಾಪ್‌ ಯತ್ನ : ಕೆ.ಎನ್‌.ರಾಜಣ್ಣ

Honeytrap attempt by a young woman wearing jeans: K.N. Rajanna

ತುಮಕೂರು,ಮಾ.25- ಜೋರು ದನಿಯಲ್ಲಿ ಮಾತನಾಡು ವವರನ್ನು ಮಣಿಸಲು ಹನಿಟ್ರ್ಯಾಪ್‌ನಂತಹ ಕೃತ್ಯಗಳು ಚಾಲ್ತಿಯಲ್ಲಿವೆ. ಇದ್ಯಾವುದೂ ಹೊಸದಲ್ಲ. ತಾವು ಮಾಡಿರುವ ಆರೋಪ ಕುರಿತಂತೆ ಇಂದು ಗೃಹಸಚಿವರಿಗೆ ದೂರು ಸಲ್ಲಿಸುವುದಾಗಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಷ್ಟು ದಿನ ದೂರು ಬರೆಯಲು ಸಾಧ್ಯವಾಗಿರಲಿಲ್ಲ. ವಿಧಾನಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪವಾಯಿತು. ಅದಕ್ಕೂ ಮೊದಲು ಮಾಧ್ಯಮಗಳಲ್ಲಿ ಹನಿಟ್ರ್ಯಾಪ್‌ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಯಾಗಿದ್ದವು. ಆದರೆ ಎಲ್ಲೂ ನನ್ನ ಹೆಸರು ಪ್ರಸ್ತಾಪವಾಗಿರಲಿಲ್ಲ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನನ್ನ ಹೆಸರು ಪ್ರಸ್ತಾಪ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೆ ಮೌನಂ ಸಮತಿ ಲಕ್ಷಣಂ ಎಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಬೇಕಾಯಿತು ಎಂದರು.

ಇಂತಹ ವಿಚಾರಗಳನ್ನು ಸಚಿವ ಸಂಪುಟ ಸಭೆಗಳಲ್ಲಿ ಚರ್ಚೆ ಮಾಡಬೇಕಿತ್ತು. ಬಹಿರಂಗ ಹೇಳಿಕೆ ಅಗತ್ಯವಿರಲಿಲ್ಲ ಎಂಬುದು ನನಗೂ ಅರ್ಥವಾಗುತ್ತದೆ. ಆದರೆ ನನ್ನ ಹೆಸರು ಬಂದಾಗ ಸುಮನೇ ಇರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅಲ್ಲದೇ ಇದ್ದರೆ ಎಫ್‌ಬಿಐ ತನಿಖೆ ಮಾಡಲಿ. ನನ್ನ ಅಭ್ಯಂತರವಿಲ್ಲ ಎಂದರು.

ರಾಜಕಾರಣದಲ್ಲಿ ಪ್ರಭಾವಿಯಾಗಿರುವವರ, ವೋಕಲ್‌ ಆಗಿ ಮಾತನಾಡುವವರನ್ನು ಮಣಿಸಲು ವಿರೋಧಿಗಳು ಹನಿಟ್ರ್ಯಾಪ್‌ ನಡೆಸುವುದು ಮೊದಲಿನಿಂದಲೂ ಇದೆ. ಇದೇನೂ ಹೊಸದಲ್ಲ. ಈ ಹಿಂದೆ ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವಾರು ಮಂದಿಗೆ ಈ ರೀತಿ ಸಮಸ್ಯೆಯಾಗಿದೆ. ಕೆಲವರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಇರುವ ಕಾನೂನಿನಲ್ಲೇ ಇದನ್ನು ಹದ್ದುಬಸ್ತಿಗೆ ತರಲು ಸಾಕಷ್ಟು ಅವಕಾಶಗಳಿವೆ. ಯಾರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ತಮ ಒತ್ತಾಯ ಎಂದು ತಿಳಿಸಿದರು.

ದೆಹಲಿಯಲ್ಲಿ ಹೈಕಮಾಂಡ್‌ ನಾಯಕರನ್ನು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಮಾ.30 ರ ಬಳಿಕ ದೆಹಲಿಗೆ ಭೇಟಿ ನೀಡಲಿದ್ದು, ಸಮಯ ಸಿಕ್ಕರೆ ಹೈಕಮಾಂಡ್‌ ನಾಯಕರಿಗೆ ಮಾಹಿತಿ ನೀಡುತ್ತೇನೆ. ಈಗಾಗಲೇ ಹೈಕಮಾಂಡ್‌ಗೆ ಮಾಹಿತಿ ಹೋಗಿದೆ. ಮುಖ್ಯಮಂತ್ರಿಯವರ ಬಳಿ ಚರ್ಚೆ ಮಾಡಿದ್ದಾರೆ. ನನ್ನ ಬಳಿ ಯಾವುದೇ ಚರ್ಚೆಗಳಾಗಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರೆ ಮಾಡಿದ್ದರು. ಈವರೆಗೂ ಏಕೆ ದೂರು ಕೊಟ್ಟಿಲ್ಲ ಎಂದು ಕೇಳಿದರು. ನಾಳೆ ದೂರು ಕೊಡುತ್ತೇನೆಂದು ಅವರಿಗೆ ಹೇಳಿದ್ದೆ. ಹನಿಟ್ರ್ಯಾಪ್‌ ಬಗ್ಗೆ ಸುದೀರ್ಘ ವಿವರಣೆ ನೀಡಿದ ಸಚಿವ ಕೆ.ಎನ್‌.ರಾಜಣ್ಣ ಎರಡು ಬಾರಿ ನನ್ನ ಬಳಿ ಬಂದಿದ್ದರು ಎಂದು ತಿಳಿಸಿದರು.

ಮೊದಲ ಬಾರಿ ತುಂಬಾ ಖಾಸಗಿಯಾಗಿ ರಹಸ್ಯವಾಗಿ ಮಾತನಾಡಬೇಕೆಂದು ಬಂದಿದ್ದರು. ಎರಡನೇ ಬಾರಿ ಹೈಕೋರ್ಟ್‌ ವಕೀಲರು ಎಂದು ಹೇಳಿಕೊಂಡು ಬಂದಿದ್ದರು. ಈ ಎರಡೂ ಬಾರಿಯೂ ಒಬ್ಬ ಹುಡುಗ ಸಾಮಾನ್ಯವಾಗಿ ಬರುತ್ತಿದ್ದ ಎಂದರು. ಅವರ ಜೊತೆ ಹೆಣ್ಣು ಮಕ್ಕಳಿದ್ದರು. ನೀಲಿ ಬಣ್ಣದ ಟಾಪ್‌ ಮತ್ತು ಜೀನ್ಸ್ ಧರಿಸಿದ್ದರು. ಅವರಿಗೆ ನಾನು ಯಾವ ರೀತಿ ಪ್ರತಿಕ್ರಿಯೆ ನೀಡಿದೆ. ಏನು ಚರ್ಚೆ ನಡೆಯಿತು ಎಂಬುದನ್ನೆಲ್ಲಾ ದೂರಿನಲ್ಲಿ ನಮೂದಿಸಿದ್ದೇನೆ. ಫೋಟೋ ತೋರಿಸಿದರೆ ಗುರುತಿಸುತ್ತೇನೆ ಎಂದು ಹೇಳಿದರು.

ಪ್ರಕರಣ ದಾಖಲಾಗಿ ಎಫ್‌ಐಆರ್‌ ಆಗಲಿ. ಅದಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಲಾಗುವುದು. ಅಧಿವೇಶನದಲ್ಲಿ ಇದು ಚರ್ಚೆಯಾಗಿರುವುದು, ದೂರು ಕೊಡಲು ವಿಳಂಬವಾಗಿರುವ ಬಗ್ಗೆ ಯಾವೆಲ್ಲಾ ಸಂಗತಿಗಳು ನಡೆದಿವೆ ಎಂಬುದನ್ನು ವಿವರವಾಗಿ ಮೂರು ಪುಟಗಳ ದೂರಿನಲ್ಲಿ ನಾನೇ ಖುದ್ದಾಗಿ ಬರೆದಿದ್ದೇನೆ ಎಂದು ತಿಳಿಸಿದರು.

ಹನಿಟ್ರ್ಯಾಪ್‌ನಂತಹ ವಿಚಾರಗಳು ನಡೆಯುತ್ತಿರುತ್ತವೆ ಎಂದು ಆರಂಭದಲ್ಲಿ ಉದಾಸೀನ ಮಾಡಿದ್ದೆ. ವಿಧಾನಸಭೆಯಲ್ಲಿ ಚರ್ಚೆಯಾದ ಬಳಿಕ ಇದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಮೆಟೀರಿಯಲ್‌ ಎವಿಡೆನ್‌್ಸಗಳ ಬಗ್ಗೆ ಯೋಚಿಸಬೇಕಿದೆ. ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿರಲಿಲ್ಲ. ಅಲ್ಲಿ ಸಿಸಿಟಿವಿ ಇದ್ದಿದ್ದರೆ ಯಾರು ಬಂದರು, ಯಾರು ಹೋದರು ಎಂಬ ಮಾಹಿತಿ ಸಿಗುತ್ತಿತ್ತು. ಯಾರು ಬಂದು ಹೋಗಿದ್ದಾರೆ. ಅವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ. ಅವರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.

ವಿಧಾನಸಭೆಯಲ್ಲಿ ಅಥವಾ ಬೇರೆ ಕಡೆ ಎಲ್ಲಿಯೂ ತಾವು ನ್ಯಾಯಾಧೀಶರ ವಿಚಾರವನ್ನು ಈ ಪ್ರಕರಣದಲ್ಲಿ ಪ್ರಸ್ತಾಪ ಮಾಡಿಲ್ಲ. ಆದರೂ ಕೆಲ ವ್ಯಕ್ತಿಗಳು ಹನಿಟ್ರ್ಯಾಪ್‌ ಪ್ರಕರಣದಲ್ಲಿ ನ್ಯಾಯಾಧೀಶರ ಹೆಸರು ಪ್ರಸ್ತಾಪವಾಗಿದೆ ಎಂದು ಪಿಐಎನ್‌ ದಾಖಲಿಸಿದ್ದಾರೆ. ಮಾಧ್ಯಮಗಳು ಸೃಷ್ಟಿಸಿರುವುದಕ್ಕೆ ನನ್ನನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

RELATED ARTICLES

Latest News