ಬೆಂಗಳೂರು, ಜು.2- ಇನ್ನು ಮುಂದೆ ಹಾಪ್‌ಕಾಮ್ಸೌ ತರಕಾರಿಗಳು ನಿಮ ಮನೆ ಬಾಗಿಲಿಗೆ ಬರಲಿವೆ. ನಗರದಲ್ಲಿ ಹೆಚ್ಚುತ್ತಿರುವ ಮಾಲ್ ಸಂಸ್ಕೃತಿಗೆ ಪೈಪೋಟಿ ನೀಡಲು ಮುಂದಾಗಿರುವ ಹಾಪ್‌ಕಾಮ್ಸೌನವರು ಜನರನ್ನು ಸೆಳೆಯಲು ಇಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ಅದರಲ್ಲೂ ನಗರದಲ್ಲಿ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚುತ್ತಿರು ವುದನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಫ್ಲಾಟ್‌ಗಳಲ್ಲೇ ಸಂಚಾರ ಮಾರಾಟ ಮಳಿಗೆ ತೆರೆಯಲು ತೀರ್ಮಾನಿಸಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಮಿರ್ಜಿ ಉಮೇಶ್ ಶಂಕರ್ ತಿಳಿಸಿದ್ದಾರೆ.
ಸೂಪರ್ ಮಾರ್ಕೆಟ್‌ಗಳಿಗೆ ಪೈಪೋಟಿ ನೀಡಬೇಕು ಎಂಬ ಉದ್ದೇಶದಿಂದ ಹಾಪ್ ಕಾಮ್ಸೌನಿಂದ ಮನೆ ಬಾಗಿಲಿಗೆ ತಾಜಾ ತರಕಾರಿ. ಹಣ್ಣು ತಲುಪಿಸುವ ಮೂಲಕ ಜನ ಮಾನಸ ಗೆಲ್ಲಲು ಮುಂದಾಗಿದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಾಯೋಗಿಕವಾಗಿ ನಗರದ 60 ಅಪಾರ್ಟ್ಮೆಂಟ್ ಗಳಲ್ಲಿ ಈ ಯೋಜನೆ ಜಾರಿ ಮಾಡಲು ತೀರ್ಮಾನಿಸಿದ್ದೇವೆ ಇದಕ್ಕೆ ಜನರ ಪ್ರತಿಕ್ರಿಯೆ ನೋಡಿ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ನಗರದ ಅಪಾರ್ಟ್ಮೆಂಟ್ ಫೆಡರೇಶನ್‌ಗಳ ಸಹಭಾಗಿತ್ವದಲ್ಲಿ ಈ ಯೋಜನೆ ಆರಂಭಿಸಲಾಗುತ್ತಿದ್ದು, ಬರುವ ಲಾಭದಲ್ಲಿ ಪೆಡರೇಶನ್‌ಗೂ ಕಮಿಷನ್ ನೀಡುವ ಮೂಲಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ತಿಂಗಳಿಗೆ ನಾಲ್ಕು ಲಕ್ಷ ವ್ಯಾಪಾರ ಮಾಡಿದರೆ, ಫೆಡರೇಷನ್ ಅವರಿಗೆ ಶೇ.20 ರಷ್ಟು ಕಮಿಷನ್ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
- ಮದ್ಯ ಸೇವಿಸಲು ಹಣ ನೀಡದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ
- ಇತ್ತೀಚೆಗೆ ಅಗಲಿದ ಸಂತರಿಗೆ ವಿಧಾನಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಕೆ
- ತುಮಕೂರು-ಬೆಂಗಳೂರು ನಡುವಿನ 4 ರೈಲು ಮಾರ್ಗ ನಿರ್ಮಿಸಲು ಯೋಜನೆ : ವಿ.ಸೋಮಣ್ಣ
- ಭಾರತ-ಪಾಕ್ ನಡುವೆ ಮತ್ತೆ ಯುದ್ಧ ಸಾಧ್ಯತೆ : ಮಾರ್ಕೊ ರುಬಿಯೋ ಭವಿಷ್ಯ
- ಹುಲಿಗಳಿದ್ದ ಕಾಡಿನಲ್ಲಿ ಪ್ರವಾಸಿಗರನ್ನು ಬಿಟ್ಟು ಹೋದ ಸಿಬ್ಬಂದಿಗಳು