ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (11-12-2020)

ನಿತ್ಯ ನೀತಿ : ಮನಸ್ಸು ಪಾಪ ಕೃತ್ಯಗಳೆಡೆಗೆ ಹರಿದಾಗ ಧರ್ಮದ ಬೆತ್ತದಿಂದ ಎಚ್ಚರಿಸುತ್ತಿದ್ದರೆ ಮನುಷ್ಯ ಸನ್ಮಾರ್ಗದಲ್ಲಿ ಮುನ್ನಡೆಯುವುದು ಸುಲಭ.  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

#  ಪಂಚಾಂಗ : ಶುಕ್ರವಾರ , 11.12.2020
ಸೂರ್ಯ ಉದಯ ಬೆ.06.31 / ಸೂರ್ಯ ಅಸ್ತ ಸಂ.05.55
ಚಂದ್ರ ಉದಯ ರಾ.03.52 / ಚಂದ್ರ ಅಸ್ತ ಮ.03.03
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ / ತಿಥಿ: ಏಕಾದಶಿ (ಬೆ.10.05) ನಕ್ಷತ್ರ: ಚಿತ್ತಾ-ಸ್ವಾತಿ(ಬೆ.08.48-ನಾ.ಬೆ.06.30) ಯೋಗ: ಶೋಭನ(ಮ.03.50)
ಕರಣ: ಬಾಲವ-ಕೌಲವ (ಬೆ.10.05-ರಾ.08.35) ಮಳೆ ನಕ್ಷತ್ರ: ಜ್ಯೇಷ್ಠಾ ಮಾಸ: ವೃಶ್ಚಿಕ, ತೇದಿ: 26

# ಇಂದಿನ ಭವಿಷ್ಯ :
ಮೇಷ: ನೆರೆಹೊರೆಯವರ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಯಾವ ವಿಚಾರದಲ್ಲೂ ಉದ್ವೇಗಕ್ಕೆ ಒಳಗಾಗಬೇಡಿ
ವೃಷಭ: ಕಚೇರಿ ಜಂಜಾಟ ಮರೆತು ವಿಶ್ರಾಂತಿಗೆ ಗಮನ ಕೊಡಿ. ದುಡುಕಿ ಮಾತನಾಡಬೇಡಿ
ಮಿಥುನ: ನಿಮ್ಮ ಕುರಿತಾಗಿ ಹರಡಿರುವ ಗಾಳಿಸುದ್ದಿ ಖುದ್ದು ನಿಮ್ಮ ಕಿವಿಗೂ ಬಿದ್ದು ಬೇಸರ ಆಗಬಹುದು
ಕಟಕ: ಆರೋಗ್ಯದ ವಿಚಾರ ದಲ್ಲಿ ನಿರ್ಲಕ್ಷ್ಯ ಬೇಡ. ಸ್ವಯಂ ವೈದ್ಯ ನಿಲ್ಲಿಸಿ ಡಾಕ್ಟರ್ ಬಳಿ ತಪಾಸಣೆ ಮಾಡಿಸಿ ಕೊಳ್ಳುವುದು ಒಳ್ಳೆಯದು

ಸಿಂಹ: ನಿರಂತರ ಕೆಲಸದಲ್ಲಿ ತೊಡಗಿಕೊಂಡರೆ ಮಾನಸಿಕ ಒತ್ತಡ ಮರೆಯಾಗುವುದು
ಕನ್ಯಾ: ನಿಮ್ಮ ಯೋಚನೆ ಸರಿಯಾದ ಧಾಟಿಯಲ್ಲಿಯೇ ಇದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಿ. ಶುಭ ಸಮಾಚಾರ ಬರಲಿದೆ
ತುಲಾ: ಹತ್ತಿರದ ಬಂಧುಗಳ ಭೇಟಿಯಿಂದ ಆನಂದ
ವೃಶ್ಚಿಕ: ಭರ್ಜರಿ ಔತಣಕೂಟಕ್ಕೆ ಆಮಂತ್ರಣ ಬರಲಿದೆ

ಧನುಸ್ಸು: ಪ್ರವಾಸ ಹೋಗಿದ್ದ ಸಂಗಾತಿ ಮರಳುವರು
ಮಕರ: ಕೆಲವರು ನಿಮ್ಮ ಸಲಹೆಗಳನ್ನು ಸ್ವಾಗತಿಸುವರು
ಕುಂಭ: ದೂರ ಪ್ರಯಾಣ ಮಾಡದಿರುವುದೇ ಒಳಿತು
ಮೀನ: ಅಗತ್ಯ ಇರುವವರಿಗೆ ಕೈಲಾದ ಸಹಾಯ ಮಾಡಿ