Saturday, April 26, 2025
Homeರಾಷ್ಟ್ರೀಯ | Nationalಭಾರತ-ಪಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ರಜೆ ರದ್ದು

ಭಾರತ-ಪಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ರಜೆ ರದ್ದು

Hospital staff leave cancelled amid tense situation on India-Pakistan border

ನವದೆಹಲಿ,ಏ.26- ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಬಳಿಕ ಭಾರತ-ಪಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಜಮು ಸರ್ಕಾರ ಅಲರ್ಟ್‌ ಆಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ರಜೆ ರದ್ದು ಮಾಡಲಾಗಿದೆ.

ಜಮುವಿನ ಸರ್ಕಾರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿಗೆ ಇದು ಅನ್ವಯ ಆಗಲಿದೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ತುರ್ತು ಔಷಧಿಗಳು ಮತ್ತು ಉಪಕರಣಗಳು ಸಿದ್ಧವಾಗಿರಬೇಕು. ತುರ್ತು ಸೇವೆಗಾಗಿ ಕಂಟ್ರೋಲ್‌ ರೂಮ್‌ ಸ್ಥಾಪನೆ ಮಾಡಬೇಕು ಎಂದು ಸೂಚಿಸಲಾಗಿದೆ. ತುರ್ತು ಸೇವೆಗಾಗಿ 0191-2582355 ಹೆಲ್‌್ಪಲೈನ್‌ ನಂಬರ್‌ ಬಿಡುಗಡೆ ಮಾಡಲಾಗಿದೆ.

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಭಾರತ ಸನ್ನದ್ಧವಾಗಿದೆ. ಅಲ್ಲದೇ, ಮೂರು ಹಂತದ ಕಾರ್ಯಾಚರಣೆಗೆ ಸೇನೆ ಮುಂದಾಗಿದೆ. ಹಿಂದೂಗಳ ಹತ್ಯಾಕಾಂಡ ಬಳಿಕವೂ ಪಾಕಿಸ್ತಾನ ತನ್ನ ನರಿ ಬುದ್ದಿಯನ್ನು ಬಿಟ್ಟಿಲ್ಲ. ಎಲ್‌ಒಸಿ ಗಡಿಯಲ್ಲಿ ಪಾಕ್‌ ಪ್ರಚೋದನೆ ಮಾಡಿದ್ದು, ಗಡಿಯಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ.

ಈಚೆಗೆ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಿಂದಾಗಿ 26 ಪ್ರವಾಸಿಗರು ದಾರುಣ ಸಾವಿಗೀಡಾದರು. ಹಲವಾರು ಮಂದಿ ಗಾಯಗೊಂಡಿದ್ದರು. ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಹೈ ಅಲರ್ಟ್‌ ಆಗಿದ್ದು, ಭಯೋತ್ಪಾದಕರ ಹತ್ತಿಕ್ಕಲು ಕಾರ್ಯಾಚರಣೆನಡೆಸುತ್ತಿದೆ.

RELATED ARTICLES

Latest News