Tuesday, July 22, 2025
Homeಇದೀಗ ಬಂದ ಸುದ್ದಿಪ್ರವಾಸಕ್ಕೆ ಬಂದಿದ್ದ ಮಹಿಳೆಯ ಮೇಲೆ ಹೋಟಲ್‌ ಮಾಲೀಕನಿಂದ ಅತ್ಯಾಚಾರ

ಪ್ರವಾಸಕ್ಕೆ ಬಂದಿದ್ದ ಮಹಿಳೆಯ ಮೇಲೆ ಹೋಟಲ್‌ ಮಾಲೀಕನಿಂದ ಅತ್ಯಾಚಾರ

Hotel owner rapes woman on tour

ಶಿಮ್ಲಾ, ಜು.22-ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿದ್ದ ಮಹಿಳಾ ಮೇಲೆ ಹೋಟೆಲ್‌ನ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

ಘಟನೆ ಸಂಭಂದ ಆರೋಪಿ ಶುಭಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ತಮ ಮೂವರು ಸ್ನೇಹಿತೆಯರ ಜೊತೆ ಮಹಿಳೆ ಧರ್ಮಶಾಲಾ ಬಳಿಯ ಹೋಟೆಲ್‌ನಲ್ಲಿ ತಂಗಿದ್ದರು.ಸ್ನೇಹಿತರು ಪ್ರವಾಸಕ್ಕೆ ಹೋಗಿದ್ದಾಗ, ಹೋಟಲ್‌ ಮಾಲೀಕ ಶುಭಂ ಅವರ ಕೋಣೆಗೆ ನುಗ್ಗಿ ಅತ್ಯಾಚಾರ ಎಸಗಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶುಭಂ ಅವರ ಸ್ನೇಹಿತರಾಗಿರುವ ಮಹಿಳೆಯ ಉದ್ಯೋಗದಾತರು ಪ್ರವಾಸಕ್ಕಾಗಿ ಧರ್ಮಶಾಲಾ ಬಳಿಯ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ್ದರು. ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News