ಮೊರೆನಾ,ಅ.19– ಮಧ್ಯಪ್ರದೇಶದ ಮೊರೆನಾ ನಗರದಲ್ಲಿ ಇಸ್ಲಾಂಪುರ ಪ್ರದೇಶದಲ್ಲಿ ಕಳೆದ ರಾತ್ರಿಮನೆ ಕುಸಿದು ಅವಶೇಷಗಳಿಂದ ತಾಯಿ ಮತ್ತು ಮಗಳ ಶವ ಹೊರತೆಗೆಯಲಾಗಿದೆ. ಸತತ ರಕ್ಷಣಾ ಕಾರ್ಯಾಚರಣೆಯ ನಂತರ,ಬೆಳಿಗ್ಗೆ ಅವಶೇಷಗಳಿಂದ ತಾಯಿ-ಮಗಳ ಇಬ್ಬರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ರವಿ ಭಡೋರಿಯಾ ಸುದ್ದಿಗಾರರಿಗೆ ತಿಳಿಸಿದರು.
ಇಕ್ಕಟ್ಟಾದ ಪ್ರದೇಶವಾಗಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗದಂತೆ ರಕ್ಷಣಾ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ನಡೆಸಿದ್ದರಿಂದ ಹೆಚ್ಚನ ಸಮಯ ಹಿಡಿಯಿತು ಎಂದರು.
ಸ್ಥಳದಿಂದ ವಿಧಿ ವಿಜ್ಞಾನ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ ಮತ್ತು ಅದರ ಪರೀಕ್ಷೆಯ ನಂತರ ಅಂತಿಮವಾಗಿ ಸ್ಪೋಟದ ಕಾರಣ ಹೊರಬರುತ್ತವೆ ಎಂದು ಹೇಳಿದರು. ಅವಶೇಷಗಳಲ್ಲಿ ಸೋಟಗೊಂಡ ಸಿಲಿಂಡರ್ ಬ್ಯಾಟರಿ ಮತ್ತು ಕಂಪ್ರೆಸರ್ ಹೊಂದಿರುವ ಡೀಪ್ ಫ್ರೀಜರ್‌ನ ಭಾಗಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು.
ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್‌ಡಿಇಆರ್‌ಎಫ್), ಅಗ್ನಿಶಾಮಕ ದಳ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಗಳ ತಂಡಗಳು ಸ್ಥಳದಲ್ಲಿ ಬೀಟುಬಿಟ್ಟಿದೆ ಪಟಾಕಿ ಕಾರ್ಖಾನೆಯಲ್ಲಿ ಸೋಟ ಸಂಭವಿಸಿದೆ ಎಂದು ಈ ಹಿಂದೆ ಕೆಲವು ಮಾಧ್ಯಮ ವರದಿಗಳು ಹೇಳಿದ್ದವು. ಪೊಲೀಸರು ವರದಿಗಳನ್ನು ದೃಢಪಡಿಸಿಲ್ಲ ಮತ್ತು ಸದ್ಯಕ್ಕೆ ಅಂತಹ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದರು.
ಪ್ರಾಥಮಿಕ ತನಿಖೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸೋಟಕ್ಕೆ ಕಾರಣವಾಗಿರಬಹುದು ಎಂದು ಕಂಡುಬರುತ್ತಿದೆ ಎಂದರು.